ದ.ಕ.ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ಚುನಾವಣೆ ➤ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮರ್ಧಾಳ ಆಯ್ಕೆ



(ನ್ಯೂಸ್ ಕಡಬ) newskadaba.com ಕಡಬ, ಸೆ.01. ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ನ ಪ್ರಧಾನ ಕಾರ್ಯದರ್ಶಿಯಾಗಿ ಕಡಬದ ವಿದ್ಯಾರ್ಥಿ ಅಬ್ದುಲ್ ರಝಾಕ್ ಮರ್ಧಾಳ ಆಯ್ಕೆಯಾಗಿದ್ದಾರೆ.







ಆಗಸ್ಟ್ 31 ರಂದು ಮಂಗಳೂರಿನ ರೊಸಾರಿಯೋ ಹಾಲ್ ನಲ್ಲಿ ನಡೆದ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ) ದ ಚುನಾವಣೆಯಲ್ಲಿ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಅಬ್ದುಲ್ ರಝಾಕ್ ಮರ್ಧಾಳ ತನ್ನ ಪ್ರತಿಸ್ಪರ್ಧಿ ಮಂಗಳೂರಿನ ಖಾಸಗಿ ಕಾಲೇಜಿನ ಹಸನ್ ಮುಕ್ಸಿತ್ ವಿರುದ್ದ ವಿಜಯಿಯಾಗಿದ್ದಾರೆ‌. ಚುನಾವಣೆಗೆ ಮುಖ್ಯ ಅತಿಥಿಗಳಾಗಿ ರಾಕೇಶ್ ಮಲ್ಲಿ, ನಟ ಅರ್ಜುನ್ ಕಾಪಿಕಾಡ್ ಹಾಗೂ ಗಿರ್ಗಿಟ್ ಚಿತ್ರದ ನಟ ರೂಪೇಶ್‌ ಶೆಟ್ಟಿ ಭಾಗವಹಿಸಿದ್ದರು.






error: Content is protected !!
Scroll to Top