News Kadaba Desk

ಲಾಕ್ ಡೌನ್ ಉಲ್ಲಂಘಿಸುವವರಿಗೆ ಕಾದಿದೆ ಲಾಠಿಯೇಟಿನ ಶಿಕ್ಷೆ ➤ ಮತ್ತೆ ಲಾಠಿ ಬಳಸಲು ಪೊಲೀಸರಿಗೆ ಸರಕಾರದಿಂದ ಫುಲ್‌ ಪರ್ಮಿಷನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳಿಗಾಗಿ ಹೊರ ಬರುವ ಸಾರ್ವಜನಿಕರಿಗೆ ಪೊಲೀಸರು ಲಾಠಿಯೇಟು ನೀಡುತ್ತಿದ್ದಾರೆಂಬ ಆರೋಪ ವ್ಯಕ್ತವಾಗಿದ್ದರಿಂದ ಲಾಠಿ ದೂರ ಇಟ್ಟು ಮನವಿಯ ಮೂಲಕ ಕರ್ತವ್ಯ ನಿರ್ವಹಿಸುವಂತೆ ಪೊಲೀಸರಿಗೆ ರಾಜ್ಯ ಸರಕಾರವು ಈ ಹಿಂದೆ ನಿರ್ದೇಶನ ನೀಡಿತ್ತು. ಆದರೆ ಪೊಲೀಸರ ಮನವಿಯನ್ನು ಕ್ಯಾರೇ ಅನ್ನದ ಸಾರ್ವಜನಿಕರು ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ಮನಗಂಡ ರಾಜ್ಯ ಸರಕಾರವು ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ ನಡೆಸಿ ಪೊಲೀಸರಿಗೆ ಫುಲ್ […]

ಲಾಕ್ ಡೌನ್ ಉಲ್ಲಂಘಿಸುವವರಿಗೆ ಕಾದಿದೆ ಲಾಠಿಯೇಟಿನ ಶಿಕ್ಷೆ ➤ ಮತ್ತೆ ಲಾಠಿ ಬಳಸಲು ಪೊಲೀಸರಿಗೆ ಸರಕಾರದಿಂದ ಫುಲ್‌ ಪರ್ಮಿಷನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಪರಿಸರದಲ್ಲಿ ಉತ್ತಮ ಮಳೆ ➤ ಇಳೆಗೆ ತಂಪೆರೆದ ಮಳೆರಾಯ

(ನ್ಯೂಸ್ ಕಡಬ) newskadaba.com ಕಡಬ, ಎ.07. ಕಡಬ ಪರಿಸರದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಬೆಂದು ಕೆಂಡವಾಗಿದ್ದ ಭೂಮಿಯನ್ನು ತಂಪಾಗಿಸಿದೆ. ಕಳೆದೆರಡು ದಿನಗಳಿಂದ ಕಡಬ ಪರಿಸರದ ಕುಕ್ಕೇ ಸುಬ್ರಹ್ಮಣ್ಯ, ಬಿಳಿನೆಲೆ, ಪಂಜ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸ್ವಲ್ಪ ಮಟ್ಟಿಗೆ ಶೆಖೆಯು ಕಡಿಮೆಯಾಗಿದೆ. ಮಂಗಳವಾರ ಬೆಳಗಿನ ಜಾವ ಮತ್ತೆ ಉತ್ತಮ ಮಳೆಯಾಗಿದ್ದು, ಹವಾಮಾನ ಇಲಾಖೆಯು ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಕಡಬ ಪರಿಸರದಲ್ಲಿ ಉತ್ತಮ ಮಳೆ ➤ ಇಳೆಗೆ ತಂಪೆರೆದ ಮಳೆರಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್ ಡೌನ್ ‌ಉಲ್ಲಂಘಿಸುವವರ ವಿರುದ್ಧ ಮುಂದುವರಿದ ಕಾರ್ಯಾಚರಣೆ ➤ ಕಡಬದಲ್ಲಿ ಬೆಳ್ಳಂಬೆಳಗ್ಗೆ ಹಲವು ಕಾರುಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.06. ಕಳೆದೆರಡು ದಿನಗಳಿಂದ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿದ್ದ ಹಲವು ಖಾಸಗಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಕಡಬ ಪೊಲೀಸರು, ಸೋಮವಾರ ಬೆಳಗ್ಗಿನಿಂದ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂಬ ಸೂಚನೆಯಿದ್ದರೂ, ಜಿಲ್ಲಾಧಿಕಾರಿಯವರ ಆದೇಶವನ್ನು ಮೀರಿ ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದರು. ಅಂತಹವರಿಗೆ ಶಾಕ್ ನೀಡಿರುವ ಪೊಲೀಸರು ಕಾನೂನು ಉಲ್ಲಂಘಿಸಿದ ಹಲವು ಖಾಸಗಿ ವಾಹನಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದರು. ಸೋಮವಾರ ಕೂಡಾ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತೆ ಹಲವರಿಗೆ

ಲಾಕ್ ಡೌನ್ ‌ಉಲ್ಲಂಘಿಸುವವರ ವಿರುದ್ಧ ಮುಂದುವರಿದ ಕಾರ್ಯಾಚರಣೆ ➤ ಕಡಬದಲ್ಲಿ ಬೆಳ್ಳಂಬೆಳಗ್ಗೆ ಹಲವು ಕಾರುಗಳು ಪೊಲೀಸ್ ವಶಕ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮರ್ಧಾಳ ಗ್ರಾ.ಪಂ. ಬಿಲ್ ಕಲೆಕ್ಟರ್ ವಾಮನ ನಾಯ್ಕ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಎ.06. ಇಲ್ಲಿನ ಮರ್ಧಾಳ ಗ್ರಾಮ ಪಂಚಾಯತ್ ನಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಾಮನ ನಾಯ್ಕ್(50) ಸೋಮವಾರದಂದು ನಿಧನರಾದರು. ಭಾನುವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ ಮೂಲಕ ಅವರನ್ನು ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮರ್ಧಾಳ ಗ್ರಾ.ಪಂ. ಬಿಲ್ ಕಲೆಕ್ಟರ್ ವಾಮನ ನಾಯ್ಕ್ ನಿಧನ Read More »

ಕರಾವಳಿ

ಕಡಬ: ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಎ.06. ತಾಂತ್ರಿಕ ತೊಂದರೆಗೊಳಗಾದ ಕಾರೊಂದು ರಸ್ತೆ ಬದಿ ಉರುಳಿ ಬಿದ್ದ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಬಳಿ ಸೋಮವಾರದಂದು ಸಂಭವಿಸಿದೆ. ಸುಳ್ಯ ಸಮೀಪದ ಸಂಬಂಧಿಕರೋರ್ವರ ಮೃತಪಟ್ಟ ಹಿನ್ನಲೆಯಲ್ಲಿ ಕಡಬದ ಕುಟುಂಬವೊಂದು ಮಾರುತಿ 800 ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಬ್ರೇಕ್ ವೈಫಲ್ಯಕ್ಕೊಳಗಾಗಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕಡಬ: ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ತಡೆಗಟ್ಟಲು ವೈದ್ಯರ ಸಲಹೆಯೇನು..? ಉತ್ತರ ‘ನ್ಯೂಸ್ ಕಡಬ’ದ ಗ್ರೌಂಡ್ ರಿಪೋರ್ಟ್ ನಲ್ಲಿ

➤➤ ವೀಡಿಯೋ | Video ಲಾಕ್ ಡೌನ್ ನಿಂದಾಗಿ ಕಡಬದ ಈಗಿನ ಪರಿಸ್ಥಿತಿ ಹೇಗಿದೆ..? ➤ ಕೊರೋನಾ ತಡೆಗಟ್ಟಲು ವೈದ್ಯರ ಸಲಹೆಯೇನು..? ➤ ನೂಕುನುಗ್ಗಲು ತಡೆಯಲು ವ್ಯಾಪಾರಸ್ಥರು ಮಾಡಿದ್ದೇನು..? ➤ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ..? ಎಲ್ಲದಕ್ಕೂ ಉತ್ತರ ‘ನ್ಯೂಸ್ ಕಡಬ’ದ ಗ್ರೌಂಡ್ ರಿಪೋರ್ಟ್ ನಲ್ಲಿ

ಕೊರೋನಾ ತಡೆಗಟ್ಟಲು ವೈದ್ಯರ ಸಲಹೆಯೇನು..? ಉತ್ತರ ‘ನ್ಯೂಸ್ ಕಡಬ’ದ ಗ್ರೌಂಡ್ ರಿಪೋರ್ಟ್ ನಲ್ಲಿ Read More »

ಬ್ರೇಕಿಂಗ್ ನ್ಯೂಸ್, ವಿಶೇಷ ಲೇಖನಗಳು

ಲಾಕ್ ಡೌನ್ ಉಲ್ಲಂಘಿಸಿದ ವಾಹನ ಮಾಲಿಕರಿಗೆ ಬಿಗ್ ಶಾಕ್ ➤ ಬೆಳ್ಳಂಬೆಳಗ್ಗೆ ಕಡಬ ಪೊಲೀಸರಿಂದ ಹಲವು ವಾಹನಗಳ ಸೀಝ್

(ನ್ಯೂಸ್ ಕಡಬ) newskadaba.com ಕಡಬ, ಎ.03. ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿದ್ದ ಹಲವಯ ಖಾಸಗಿ ಕಾರುಗಳನ್ನು ವಶಪಡಿಸಿಕೊಂಡಿರುವ ಕಡಬ ಪೊಲೀಸರು ಅನಗತ್ಯ ತಿರುಗಾಡುವವರಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂಬ ಸೂಚನೆಯಿದ್ದರೂ, ಸಾರ್ವಜನಿಕರು ಕಾನೂನನ್ನು ಉಲ್ಲಂಘಿಸುತ್ತಿದ್ದರು‌. ಅಂತಹವರಿಗೆ ಶಾಕ್ ನೀಡಿರುವ ಪೊಲೀಸರು ಹಲವು ಖಾಸಗಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿದ ವಾಹನ ಮಾಲಿಕರಿಗೆ ಬಿಗ್ ಶಾಕ್ ➤ ಬೆಳ್ಳಂಬೆಳಗ್ಗೆ ಕಡಬ ಪೊಲೀಸರಿಂದ ಹಲವು ವಾಹನಗಳ ಸೀಝ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕುಕ್ಕೆಗೂ ತಟ್ಟಿದ ಕೊರೋನಾ ಬಿಸಿ ➤ ಲಾಕ್ ಡೌನ್‌ಗೆ ಸುಬ್ರಹ್ಮಣ್ಯದಲ್ಲಿ ವ್ಯಾಪಕ ಬೆಂಬಲ

➤➤ ವೀಡಿಯೋ | Video ಕುಕ್ಕೆಗೂ ತಟ್ಟಿದ ಕೊರೋನಾ ಬಿಸಿ ➤ ಲಾಕ್ ಡೌನ್‌ಗೆ ಸುಬ್ರಹ್ಮಣ್ಯದಲ್ಲಿ ವ್ಯಾಪಕ ಬೆಂಬಲ ➤ ಮಹಾಮಾರಿಗೆ ಸಡ್ಡುಹೊಡೆದ ಜನತೆ ವೀಡಿಯೋಗಾಗಿ??ಕ್ಲಿಕ್ ಮಾಡಿ

ಕುಕ್ಕೆಗೂ ತಟ್ಟಿದ ಕೊರೋನಾ ಬಿಸಿ ➤ ಲಾಕ್ ಡೌನ್‌ಗೆ ಸುಬ್ರಹ್ಮಣ್ಯದಲ್ಲಿ ವ್ಯಾಪಕ ಬೆಂಬಲ Read More »

ಬ್ರೇಕಿಂಗ್ ನ್ಯೂಸ್

ಕಡಬ: ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.03. ಲಾಕ್ ಡೌನ್ ವೇಳೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತಾದರೂ ಈ ವೇಳೆ ಅನಗತ್ಯವಾಗಿ ತಿರುಗಾಡುತ್ತಿದ್ದ ಖಾಸಗಿ ವಾಹನವೊಂದನ್ನು ಕಡಬ ಪೊಲೀಸರು ಶುಕ್ರವಾರದಂದು ಮುಟ್ಟುಗೋಲು ಹಾಕಿಕೊಂಡಿದ್ದಾರೆ.   ಶುಕ್ರವಾರ ಮಧ್ಯಾಹ್ನದಿಂದ ಕಡಬ ಪರಿಸರದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಹಲವೆಡೆ ನಾಕಾಬಂಧಿ ಹಾಕಲಾಗಿದೆ. ಈ‌ ನಡುವೆ ಅನಗತ್ಯವಾಗಿ ತಿರುಗಾಡುತ್ತಿದ್ದ ರಿಟ್ಝ್ ಕಾರನ್ನು ಕಡಬ ಪೊಲೀಸರು ಶುಕ್ರವಾರದಂದು ವಶಪಡಿಸಿಕೊಂಡಿದ್ದಾರೆ.

ಕಡಬ: ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಪೊಲೀಸ್ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..?

➤➤ ವೀಡಿಯೋ | Video ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..? ವೀಡಿಯೋಗಾಗಿ??ಕ್ಲಿಕ್ ಮಾಡಿ

ಲಾಕ್ ಡೌನ್ ವೇಳೆ ಯಾವೆಲ್ಲಾ ವಾಹನಗಳು ಸಂಚರಿಸಬಹುದು..? ➤ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಏನಂತಾರೆ ಗೊತ್ತೇ..? Read More »

ಬ್ರೇಕಿಂಗ್ ನ್ಯೂಸ್
Scroll to Top