ಕಡಬ: ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಎ.06. ತಾಂತ್ರಿಕ ತೊಂದರೆಗೊಳಗಾದ ಕಾರೊಂದು ರಸ್ತೆ ಬದಿ ಉರುಳಿ ಬಿದ್ದ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಬಳಿ ಸೋಮವಾರದಂದು ಸಂಭವಿಸಿದೆ.

ಸುಳ್ಯ ಸಮೀಪದ ಸಂಬಂಧಿಕರೋರ್ವರ ಮೃತಪಟ್ಟ ಹಿನ್ನಲೆಯಲ್ಲಿ ಕಡಬದ ಕುಟುಂಬವೊಂದು ಮಾರುತಿ 800 ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಬ್ರೇಕ್ ವೈಫಲ್ಯಕ್ಕೊಳಗಾಗಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Scroll to Top