News Kadaba Desk

ಕಡಬ: ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ. ಜೂ. 4, ಕುಟ್ರುಪಾಡಿ ಗ್ರಾಮದ ಮುಳಿಯ ನಿವಾಸಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಆಳದಪದವು ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಟ್ರುಪಾಡಿ ಗ್ರಾಮದ ಮುಳಿಯ ಬಾಲಕೃಷ್ಣ ಶೆಟ್ಟಿ ಎಂಬವರ ಪುತ್ರ ನವೀನ್ ಶೆಟ್ಟಿಯವರು ಕಳೆದ ಹಲವಾರು ವರ್ಷಗಳಿಂದ ಆಳದಪದವಿನಲ್ಲಿ ವಾಸವಿದ್ದರು. ಇವರ ಪತ್ನಿ ಮಕ್ಕಳು ಕಳೆದ ಶನಿವಾರ ಅವರ ತಾಯಿ ಮನೆಗೆ ತೆರಳಿದ ಸಂದರ್ಭ ಮನೆಯಲ್ಲಿ ಓರ್ವರೇ ಇದ್ದ ಇವರು  ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ […]

ಕಡಬ: ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಜೂ.5 ಮತ್ತು 6 ರಂದು ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ಜೂನ್‌ 5 ಮತ್ತು 6ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು, ಆಕಾಶಕಾಯಗಳ ನಡುವೆ ಅದ್ಭುತ ವಿದ್ಯಮಾನ ನಡೆಯಲಿದೆ. ಜೂನ್ 5ರಂದು ಹುಣ್ಣಿಮೆ ಇದ್ದು, ಅಂದು ರಾತ್ರಿ 11.15ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಿ ಜೂನ್‌ 6ರ ನಸುಕಿನ 2.45ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣವು ದೇಶದ ಎಲ್ಲ ಭಾಗಗಳಲ್ಲಿ ಕಾಣಲಿದ್ದು, ಉತ್ತರ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಗೋಚರವಾಗಲಿದೆ. ಗ್ರಹಣದ ಸಮಯದಲ್ಲಿ ಚಂದ್ರನ ಮೇಲೆ ಯಾವುದೇ ರೀತಿಯ ಕತ್ತಲು ಆವರಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯಕಾರಿ ಸಮಿತಿ ಸದಸ್ಯ

ಜೂ.5 ಮತ್ತು 6 ರಂದು ಚಂದ್ರಗ್ರಹಣ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಬೃಹತ್ ದಿಮ್ಮಿಗಳ ಭಾರಕ್ಕೆ ರಸ್ತೆ ಬಿಟ್ಟ ಲಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 4, ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಮೇಲ್ಮುಖವಾಗಿ ನಿಂತ ಘಟನೆ ಇಂದು ಬೆಳಗ್ಗೆ ಸಾಲ್ಮರ ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕದ ಬಳಿ ನಡೆದಿದೆ. ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯು ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕಕ್ಕೆ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ದ್ವಾರದ ಬಳಿ ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತ್ತು. ಕೆಲಕಾಲ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಯಿತು.

ಪುತ್ತೂರು: ಬೃಹತ್ ದಿಮ್ಮಿಗಳ ಭಾರಕ್ಕೆ ರಸ್ತೆ ಬಿಟ್ಟ ಲಾರಿ Read More »

ಕರಾವಳಿ

ಜು.1ಕ್ಕೆ ಶಾಲೆ ಆರಂಭ ನಿರ್ಧಾರಿತವಲ್ಲ, ಯೋಜಿತವಷ್ಟೇ ➤ ಸುರೇಶ್ ಕುಮಾರ್

(ನ್ಯೂಸ್ ಕಡಬ) newskadaba.com  ಬೆಂಗಳೂರು,ಜು 03: ರಾಜ್ಯದಲ್ಲಿ ಜುಲೈ 1ರಿಂದ ಹಂತ-ಹಂತವಾಗಿ ಶಾಲೆಗಳನ್ನು ಪುನಾರಾರಂಭಗೊಳ್ಳಲು ಉದ್ದೇಶಿಸಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಇದು ನಿರ್ಧಾರಿತ ದಿನಾಂಕವಲ್ಲ, ಯೋಜಿತ ದಿನಾಂಕವಷ್ಟೇ ಎಂದಿದ್ದಾರೆ. ಜುಲೈ 1ಕ್ಕೆ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳುವ ಬಗ್ಗೆ ವರದಿಗಳು ಬಂದಿದ್ದವು. ಇದರಿಂದ ಪೊಷಕರು ಮತ್ತು ಮಕ್ಕಳು ಗೊಂದಲಕ್ಕೆ ಒಳಗಾಗಿದ್ದರು. ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮತ್ತು ಲಾಕ್ಡೌನ್ ತೆರವುಗೊಂಡಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದುಸ್ಸಾಹಸವಾಗಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ

ಜು.1ಕ್ಕೆ ಶಾಲೆ ಆರಂಭ ನಿರ್ಧಾರಿತವಲ್ಲ, ಯೋಜಿತವಷ್ಟೇ ➤ ಸುರೇಶ್ ಕುಮಾರ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬಡವರ ನೋವಿಗೆ ಸ್ಪಂದಿಸಿದ ಹುಚ್ಚ ವೆಂಕಟ್ ➤ ದಿನಸಿ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ 03: ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್, ಮಟನ್, ಫಿಶ್, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್… ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಪಡಬಾರದ ಕಷ್ಟ ಅನುಭವಿಸಿದ ಪಾನಿಪುರಿ ಅಂಗಡಿ ಮಾಲೀಕನಿಗೆ ದಿನ ಕಿಟ್ ನೀಡಿದ ಹುಚ್ಚ ವೆಂಕಟ್ ಗ್ರಾಹಕರಿಲ್ಲದೆ ಬಿಕೋ

ಬಡವರ ನೋವಿಗೆ ಸ್ಪಂದಿಸಿದ ಹುಚ್ಚ ವೆಂಕಟ್ ➤ ದಿನಸಿ ಕಿಟ್ ವಿತರಣೆ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನಮಾಝ್ ಮನೆಗಳಲ್ಲೇ ನಿರ್ವಹಿಸಿ ➤ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 4, ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಜೂನ್ 8ರಿಂದ ನಮಾಝ್ ಹಾಗೂ ಮತ್ತಿತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸರಕಾರ ಅನುಮತಿ ನೀಡಿರುವುದು ಸ್ವೀಕಾರಾರ್ಹ. ಈ ಮಧ್ಯೆ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದು ಕೂಡಾ ಸಮುದಾಯದ ಕರ್ತವ್ಯವಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಿರುವ ಆಡಳಿತ ಕಮಿಟಿಯು ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬಹುದು. ಇದರ ಬಗ್ಗೆ ಏನಿದ್ದರೂ ಕೂಡ ಆಯಾ ಜಮಾಅತ್‌ನವರು ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದ.ಕ.ಜಿಲ್ಲಾ ಖಾಝಿ ಅಲ್ಲಾಜ್

ನಮಾಝ್ ಮನೆಗಳಲ್ಲೇ ನಿರ್ವಹಿಸಿ ➤ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ Read More »

ಕರ್ನಾಟಕ

ಸುಳ್ಯ : ವಿವಾಹದಲ್ಲಿ ಭಾಗವಹಿಸಿದವರಿಗೆ ಹೋಂ ಕ್ವಾರಂಟೇನ್

(ನ್ಯೂಸ್ ಕಡಬ) newskadaba.com ಸುಳ್ಯ,ಜೂ. 03: ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದ ಮದುವೆ ಕಾರ್ಯಕ್ರವೊಂದರಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ, ಪ್ರಾಥಮಿಕ ಸಂಪರ್ಕಿತರೊಬ್ಬರು ಭಾಗವಹಿಸಿದ್ದ ಹಿನ್ನಲೆಯಲ್ಲಿ , ಆ ಮದುವೆಯಲ್ಲಿ ಭಾಗಿಯಾಗಿದ್ದವರಿಗೆಲ್ಲ ಹೋಂ ಕ್ವಾರಂಟೇನ್ ಮಾಡುವ ಪರಿಸ್ಥಿತಿ ಎದುರಾಗಿದೆ. ಹೌದು, ಮಲೇಷಿಯದಲ್ಲಿದ್ದ ವೈದ್ಯ ತನ್ನ ಅರಂತೋಡು ಗ್ರಾಮದ ಸಂಬಂಧಿಕರ £ಮನೆಗೆ ಭಾನುವಾರ ಬಂದಿದ್ದರು.     ಆ ವೈದ್ಯರ ಪ್ರಾಥಮಿಕ ಸಂಪರ್ಕಿತದಲ್ಲಿದ್ದ ವ್ಯಕ್ತಿಯು ಸುಳ್ಯದ ಅರಂತೋಡಿನಲ್ಲಿ ನಡೆದ ಮದುವೆ ಕಾರ್ಯಕ್ರವೊಂದರಲ್ಲಿ ಭಾಗವಹಿಸಿದದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಅಷ್ಟೇ

ಸುಳ್ಯ : ವಿವಾಹದಲ್ಲಿ ಭಾಗವಹಿಸಿದವರಿಗೆ ಹೋಂ ಕ್ವಾರಂಟೇನ್ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ 03: ಭೂಗತ ಪಾತಕಿ ರವಿ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ರವಿ ಪೂಜಾರಿಯ ಸಹಚರನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಲಾಮ ಎಂದು ಗುರುತಿಸಲಾಗಿದೆ. ಈತ ರವಿ ಪೂಜಾರಿ ಮಾಡುವ ಕೃತ್ಯಕ್ಕೆ ಸುಲಿಗೆ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.     ಸಿಸಿಬಿ ಅಧಿಕಾರಿಗಳು ಮಂಗಳೂರಿನಲ್ಲಿ ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಸದ್ಯ ಗುಲಾಮನನ್ನ 10 ದಿನ ಕಸ್ಟಡಿಗೆ ತೆಗೆದುಕೊಂಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ರಾಜ್ಯ

ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯುವತಿಗೆ ಲೈಂಗಿಕ ಕಿರುಕುಳ ➤ ಆರೋಪಿಯನ್ನ ಸುಟ್ಟ ಪೋಷಕರು

(ನ್ಯೂಸ್ ಕಡಬ) newskadaba.com ಲಖನೌ,ಜೂ 03: ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪವಿದ್ದ 22ಹರೆಯದ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್ಗಡದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪ್ರತಾಪ್ಗಡ ಜಿಲ್ಲೆಯ ಫತಾನ್ಪುರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ, ಸೋಮವಾರ ರಾತ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಜನರ ಗುಂಪು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದು ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಅಂಬಿಕಾ ಪ್ರಸಾದ್ ಪಟೇಲ್

ಯುವತಿಗೆ ಲೈಂಗಿಕ ಕಿರುಕುಳ ➤ ಆರೋಪಿಯನ್ನ ಸುಟ್ಟ ಪೋಷಕರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಬಝಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶುದ್ಧ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಇಂದಿನಿಂದ ತೆರೆದಿದೆ. ಕಳೆದ ಎರಡು ತಿಂಗಳಿನಿಂದ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಹೊಟೇಲ್ ಪುನರಾರಂಭಗೊಂಡಿದ್ದು, ಇನ್ಮುಂದೆ ಪ್ರತೀದಿನ ತೆರೆದಿರಲಿದೆ. ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್ Read More »

ಕರಾವಳಿ
Scroll to Top