News Kadaba Desk

ಇಂದಿನಿಂದ ರಾತ್ರಿ ವೇಳೆಯ ಕರ್ಫ್ಯೂ ಸಡಿಲ ➤ ಕ್ಯಾಬ್ ಹಾಗೂ ಆಟೋಗಳು ರಾತ್ರಿ ವೇಳೆ ಸಂಚಾರ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 5, ರಾಜ್ಯದಲ್ಲಿ ಬಸ್, ಕ್ಯಾಬ್ ಹಾಗೂ ಅಟೋಗಳು ರಾತ್ರಿ ವೇಳೆಯಲ್ಲಿ ಸಂಚರಿಸಲು ಸರಕಾರವು ರಾತ್ರಿಯಿಂದ ಕರ್ಫ್ಯೂ ಸಡಿಲಿಕೆ ಮಾಡಿದೆ. ಕೊರೋನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ವೇಳೆ ರಾತ್ರಿಯ ಕರ್ಫ್ಯೂ ನಿರ್ಬಂಧವನ್ನು ಸಡಿಲಿಕೆ ಮಾಡಿ ರಾಜ್ಯ ಸರಕಾರ ಗುರುವಾರ ಈ ಆದೇಶ ಹೊರಡಿಸಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಬಸ್ ಹಾಗೂ ಟ್ಯಾಕ್ಸಿಗಳಲ್ಲಿ ಕಂಟೈನ್ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆ ಸಂಚರಿಸಬಹುದು. ಪ್ರಯಾಣಿಕರು ಹೊಂದಿರುವಂತಹ ಬಸ್ ಟಿಕೆಟ್ […]

ಇಂದಿನಿಂದ ರಾತ್ರಿ ವೇಳೆಯ ಕರ್ಫ್ಯೂ ಸಡಿಲ ➤ ಕ್ಯಾಬ್ ಹಾಗೂ ಆಟೋಗಳು ರಾತ್ರಿ ವೇಳೆ ಸಂಚಾರ Read More »

ಕರ್ನಾಟಕ

ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 5, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಇದೇ ಜೂನ್ 18ರಂದು ರಾಜ್ಯಾದ್ಯಂತ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂದು ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೂ, ಪರೀಕ್ಷಾ ಕೇಂದ್ರದಿಂದ ತಮ್ಮ

ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ Read More »

ಕರ್ನಾಟಕ

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಈ ಸೌಲಭ್ಯ ಕಲ್ಪಿಸಿ ➤ ಛಾತ್ರ ಯುವ ಸಂಘರ್ಷ ಸಮಿತಿಯಿಂದ ರಾಜ್ಯ ಸರಕಾರಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.05. ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬೇಕಾದರೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಸವಲತ್ತುಗಳನ್ನು ನೀಡಬೇಕು ಎಂದು ಛಾತ್ರ ಯುವ ಸಂಘರ್ಷ ಸಮಿತಿಯ ವತಿಯಿಂದ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು. ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದಾದರೆ ಕೆಲವು ನಿಯಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಂಜೂರು ಮಾಡಬೇಕು. ನಂತರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಛಾತ್ರ ಯುವ ಸಂಘರ್ಷದ ವತಿಯಿಂದ ಮನವಿ ಮಾಡಲಾಯಿತು. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ಸು ಪ್ರಯಾಣಗಳನ್ನು ಕರ್ನಾಟಕ ರಾಜ್ಯಾದ್ಯಂತ

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಈ ಸೌಲಭ್ಯ ಕಲ್ಪಿಸಿ ➤ ಛಾತ್ರ ಯುವ ಸಂಘರ್ಷ ಸಮಿತಿಯಿಂದ ರಾಜ್ಯ ಸರಕಾರಕ್ಕೆ ಆಗ್ರಹ Read More »

ಕರ್ನಾಟಕ

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ವತಿಯಿಂದ ತರಕಾರಿ ಬೀಜ ವಿತರಣೆ

(ನ್ಯೂಸ್ ಕಡಬ)newskadaba.com ಸುಳ್ಯ. ಜೂ. 5, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುಳ್ಯ ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ವತಿಯಿಂದ ಸುಳ್ಯ ಸುನ್ನೀ ಮಹಲ್ ಕಛೇರಿಯಲ್ಲಿ ವಲಯದ 14 ಯುನಿಟ್ ಗೆ ಬೇಕಾದ ತರಕಾರಿ ಬೀಜಗಳನ್ನು ಕ್ಲಸ್ಟರ್ ಮಟ್ಟದ ನಾಯಕರಿಗೆ ಹಸ್ತಾಂತರ ಮಾಡಲಾಯಿತು. ವಲಯ ಅಧ್ಯಕ್ಷರಾದ ಜಮಾಲುದ್ದೀನ್ ಕೆ. ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಕ್ಬರ್ ಕರಾವಳಿ, ಕೋಶಾಧಿಕಾರಿ ರಝಾಕ್ ಮುಸ್ಲಿಯಾರ್, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಸುಳ್ಯ ಕ್ಲಸ್ಟರ್ ಅಧ್ಯಕ್ಷರಾದ ರಜಾಕ್, ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್, ಬೆಳ್ಳಾರೆ

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ವತಿಯಿಂದ ತರಕಾರಿ ಬೀಜ ವಿತರಣೆ Read More »

ಕರಾವಳಿ

ಪುತ್ತೂರು: ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ)newskadaba.com ಪುತ್ತೂರು. ಜೂ. 5, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಾಣಿಕ್ಯ ರಾಜ್ ಪಡಿವಾಳ್(68 ವ) ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸದಸ್ಯ, ಎಪಿಎಂಸಿ ಮಾಜಿ ನಿರ್ದೇಶಕ, ಬಜತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿಯೂ ಹಲವಾರು ಕ್ಷೇತ್ರಗಳಲ್ಲಿ ಸೇವೆಗೈದಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿಯರನ್ನು ಅಗಲಿದ್ದಾರೆ. ಶಕುಂತಲಾ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಸೇರಿದಂತೆ ಹಲವಾರು

ಪುತ್ತೂರು: ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಅಪರೂಪದ ಬಿಳಿ ಹೆಬ್ಬಾವು ಪತ್ತೆ

(ನ್ಯೂಸ್ ಕಡಬ)newskadaba.com ಬಂಟ್ವಾಳ. ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಪ್ರದೇಶದಲ್ಲಿನ ಮನೆಯೊಂದರ ಬಳಿ ಅಪರೂಪಕ್ಕೆ ಕಾಣಸಿಗುವ ಬಿಳಿ ಬಣ್ಣದ ಹೆಬ್ಬಾವೊಂದು ಕಾಣಸಿಕ್ಕಿದ್ದು, ಅದನ್ನು ಸುರಕ್ಷಿತವಾಗಿ ಪಿಲಿಕುಳಕ್ಕೆ ಕಳುಹಿಸಿಕೊಡಲಾಗಿದೆ. ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಈ ಹಾವು ಕಂಡುಬಂದಿದ್ದು, ತಕ್ಷಣ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅವರು ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಪ್ರಸಾದ್ ಎಂಬವರ ಸಹಕಾರದಿಂದ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಇದನ್ನು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳಕ್ಕೆ ಕಳುಹಿಸಿಕೊಡಲಾಗಿದೆ ಎಂದಿದ್ದಾರೆ.

ಬಂಟ್ವಾಳ: ಅಪರೂಪದ ಬಿಳಿ ಹೆಬ್ಬಾವು ಪತ್ತೆ Read More »

ಕರಾವಳಿ

ಅಪ್ರಾಪ್ತ ಸಹೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ➤ ಇಬ್ಬರ ಅರೆಸ್ಟ್

(ನ್ಯೂಸ್ ಕಡಬ) newskadaba.com ಜೈಪುರ. ಜೂ. 4, ರಾಜಸ್ಥಾನದ ಬರ್ಮರ್‌ ಪ್ರದೇಶದ ಶಾಸ್ತ್ರಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಇಬ್ಬರು ಅತ್ಯಾಚಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಲ್ಲಿನ ಪೊಲೀಸ್‌ ಅಧಿಕಾರಿಯೋರ್ವರು ‘ಬರ್ಮರ್‌ನ ಶಾಸ್ತ್ರಿ ನಗರದಲ್ಲಿ ಒಂದು ವರ್ಷದಿಂದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ, ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು

ಅಪ್ರಾಪ್ತ ಸಹೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ➤ ಇಬ್ಬರ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ಆನ್ ಲೈನ್ ಕ್ಲಾಸ್ ➤ ಇಂಟರ್ನೆಟ್ ಗಾಗಿ ಮನೆಯ ಛಾವಣಿಯೇರಿದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ತಿರುವನಂತಪುರಂ. ಜೂ. 4, ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ನೆಟ್ ವರ್ಕ್ ಸಿಗದೇ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ನೆಟ್ ವರ್ಕ್ ಸಿಗದ ಕಾರಣ ಮನೆಯ ಛಾವಣಿ ಏರಿ ಕೂತಿದ್ದಾಳೆ. ತಿರುವನಂತಪುರಂ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣ ತನ್ನ ಮನೆಯ ಛಾವಣಿ ಮೇಲೇರಿದ್ದಾಳೆ. ಲಾಕ್ ಡೌನ್ ಪರಿಣಾಮ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದು, ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ.

ಆನ್ ಲೈನ್ ಕ್ಲಾಸ್ ➤ ಇಂಟರ್ನೆಟ್ ಗಾಗಿ ಮನೆಯ ಛಾವಣಿಯೇರಿದ ವಿದ್ಯಾರ್ಥಿನಿ Read More »

ರಾಷ್ಟ್ರೀಯ ನ್ಯೂಸ್

ಬೆಳ್ಳಾರೆ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com , ಬೆಳ್ಳಾರೆ. ಜೂ. 4, ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಳ್ಯ ಗ್ರಾಮದ ಬೊಣ್ಯಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ಮುರುಳ್ಯ ಗ್ರಾಮದ ಬೊಣ್ಯಡ್ಕ ನಿವಾಸಿ ಶಶೀಂದ್ರ (41) ಎಂದು ಗುರುತಿಸಲಾಗಿದೆ. ಇವರು ಮನೆಯ ಬಿದಿರಿನ ಅಡ್ಡಕ್ಕೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು. ಜೂ. 4, ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಯುವಕ ಮತ್ತು ಯುವತಿ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನದ ಕೋಟೆಕಾರ್ ಬೀರಿಯಲ್ಲಿ ನಡೆದಿದೆ. ರಸ್ತೆಯ ಅಂಚಿನಲ್ಲಿ ನಿಲ್ಲಿಸಲಾಗಿದ್ದ ಲಾರಿಯನ್ನು ಗಮನಿಸದ ಬೈಕ್ ಸವಾರನು ನಿಯಂತ್ರಣ ಕಳೆದುಕೊಂಡು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಬೈಕ್ ಮುಂಭಾಗ ನಜ್ಜುಗುಜ್ಜಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣವೇ ಸ್ಥಳೀಯರು ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಮಾಹಿತಿ

ಮಂಗಳೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top