ಬೆಳ್ಳಾರೆ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com , ಬೆಳ್ಳಾರೆ. ಜೂ. 4, ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಳ್ಯ ಗ್ರಾಮದ ಬೊಣ್ಯಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಮುರುಳ್ಯ ಗ್ರಾಮದ ಬೊಣ್ಯಡ್ಕ ನಿವಾಸಿ ಶಶೀಂದ್ರ (41) ಎಂದು ಗುರುತಿಸಲಾಗಿದೆ. ಇವರು
ಮನೆಯ ಬಿದಿರಿನ ಅಡ್ಡಕ್ಕೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top