News Kadaba Desk

ಮಂಗಳೂರು: ನಿವೃತ್ತ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟು ನಿಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.12, ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್ (90) ಮುಂಬೈನಲ್ಲಿ ಇಂದು ನಿಧನರಾಗಿದ್ದಾರೆ. ಸುರತ್ಕಲ್ ಮೂಲದ ಹೊಸಬೆಟ್ಟುವಿನರಾದ ನ್ಯಾ. ಸುರೇಶ್ ಅವರು ಪ್ರಸ್ತುತ ಮುಂಬೈನಲ್ಲಿಯೇ ನೆಲೆಸಿದ್ದರು. ಸುರತ್ಕಲ್ ಹೊಸಬೆಟ್ಟುವಿನಲ್ಲಿ 1929ರ ಜುಲೈ 29ರಂದು ಜನಿಸಿದ್ದ ಹೊಸಬೆಟ್ಟು ಸುರೇಶ್ 1953ರಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಮಂಗಳೂರಿನಲ್ಲಿ ಬಿಎ ಪದವಿ ಮತ್ತು ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ಪಡೆದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಎಂ ಪದವಿ ಪಡೆದಿದ್ದರು. […]

ಮಂಗಳೂರು: ನಿವೃತ್ತ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟು ನಿಧನ Read More »

ಕರ್ನಾಟಕ

ಕಡಬದ ವ್ಯಕ್ತಿಗೆ ಕೊರೋನಾ ನೆಗೆಟಿವ್ ➤ ನಿಟ್ಟುಸಿರು ಬಿಟ್ಟ ಕಡಬದ ಜನತೆ

(ನ್ಯೂಸ್ ಕಡಬ)newskadaba.com ಕಡಬ. ಜೂ.12, ಕಡಬದ ಕೊರೋನಾ ಪೀಡಿತ ವ್ಯಕ್ತಿಯೋರ್ವರ ಗಂಟಲ ದ್ರವದ ಪರೀಕ್ಷೆಯನ್ನು ಎರಡನೆಯ ಬಾರಿ ಮಾಡಲಾಗಿದ್ದು, ಇದೀಗ ನೆಗೆಟಿವ್ ಬಂದಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕಡಬದ ಜನತೆಯಲ್ಲಿದ್ದ ಆತಂಕ ದೂರವಾದಂತಾಗಿದೆ. 42 ವರ್ಷದ ಶಿಕ್ಷಕರೋರ್ವರಿಗೆ ಜೂನ್ 5 ರಂದು ಪಾಸಿಟಿವ್ ಬಂದಿದ್ದು, ಬಳಿಕ ಅವರನ್ನು ಕೋವಿಡ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಇದೀಗ ಎರಡನೆಯ ಬಾರಿ ಮಾಡಿದ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಜೂ.12 ರ ರಾತ್ರಿ ಆಸ್ಪತ್ರೆ ಯಿಂದ ಬಿಡುಗಡೆಗೊಳ್ಳಲಿದ್ದಾರೆ

ಕಡಬದ ವ್ಯಕ್ತಿಗೆ ಕೊರೋನಾ ನೆಗೆಟಿವ್ ➤ ನಿಟ್ಟುಸಿರು ಬಿಟ್ಟ ಕಡಬದ ಜನತೆ Read More »

ಕರಾವಳಿ

ಕೊರೊನಕ್ಕೆ ರಾಜ್ಯ ತತ್ತರ ➤ ಒಂದೇ ದಿನ 271 ಪಾಸಿಟಿವ್ ಕೇಸ್, 7 ಸೋಂಕಿತರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 12, ರಾಜ್ಯದಲ್ಲಿ ಕಳೆದ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 271 ಜನರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆ ಕಂಡಂತಾಗಿದೆ. ಇಂದು ಬಳ್ಳಾರಿಯಲ್ಲಿ 97, ಬೆಂಗಳೂರು ನಗರದಲ್ಲಿ 36 ಜನರಿಗೆ ಸೋಂಕು ತಗುಲಿದ್ದರೆ, ಉಡುಪಿ 22, ಕಲಬುರಗಿಯಲ್ಲಿ 20, ಧಾರವಾಡದಲ್ಲಿ 19, ದಕ್ಷಿಣ ಕನ್ನಡದಲ್ಲಿ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ರಾಜ್ಯದಲ್ಲಿ ಇಂದು ಕೊರೋನಾ

ಕೊರೊನಕ್ಕೆ ರಾಜ್ಯ ತತ್ತರ ➤ ಒಂದೇ ದಿನ 271 ಪಾಸಿಟಿವ್ ಕೇಸ್, 7 ಸೋಂಕಿತರ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ ➤ ಅಪಾರ ಹಾನಿ, ಓರ್ವ ಗಂಭೀರ

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ.12, ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಮನೆಯೊಂದರ ಮಾಡಿನ ಮೇಲೆ ತೆಂಗಿನ ಮರ ಉರುಳಿಬಿದ್ದು ಭಾರೀ ಹಾನಿ ಸಂಭವಿಸಿದ ಘಟನೆ ನಗರದ ಹೊರವಲಯದ ಬೆಂಗ್ರೆ ಮೂಳೂರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ. ಹೆಂಚಿನ ಮನೆಯ ಮಾಡು ಕುಸಿದು ಲಕ್ಷಾಂತರ ರೂ. ಹಾನಿ ಸಂಭವಿಸಿದ್ದರೆ, ಇಲ್ಲೇ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ ➤ ಅಪಾರ ಹಾನಿ, ಓರ್ವ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವೀಡಿಯೋ ವೈರಲ್ ➤ ಸರಕಾರಿ ಕಛೇರಿ ಮುಂದೆ ಮೃತಪಟ್ಟ ವ್ಯಕ್ತಿಯ ಶವ ಕಸದ ವಾಹನಕ್ಕೆ

(ನ್ಯೂಸ್ ಕಡಬ)newskadaba.com ಲಕ್ನೋ. ಜೂ. 12, ಪೌರಕಾರ್ಮಿಕರು ಮೃತದೇಹವನ್ನು ತ್ಯಾಜ್ಯ ಸಾಗಾಟ ವಾಹನಕ್ಕೆ ತುಂಬುತ್ತಿರುವ ಬಗೆಗಿನ 20 ಸೆಕೆಂಡ್‌ಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ಘಟನೆ ಸಂಬಂಧ ಮೂವರು ಪೊಲೀಸರು ಸೇರಿದಂತೆ ಏಳು ಮಂದಿಯನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ಇತರ ನಾಲ್ವರು ಮಹಾನಗರ ಪಾಲಿಕೆ ಸಿಬ್ಬಂದಿಗಳಾಗಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಮುಹಮ್ಮದ್ ಅನ್ವರ್ (45) ಎಂಬ ವ್ಯಕ್ತಿಯ ಮೃತದೇಹವನ್ನು ಪೌರಕಾರ್ಮಿಕರು ಕಸದ ವಾಹನಕ್ಕೆ ಎಸೆಯುತ್ತಿರುವ ವೀಡಿಯೊ ಅರ್ಧ ಗಂಟೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ

ವೀಡಿಯೋ ವೈರಲ್ ➤ ಸರಕಾರಿ ಕಛೇರಿ ಮುಂದೆ ಮೃತಪಟ್ಟ ವ್ಯಕ್ತಿಯ ಶವ ಕಸದ ವಾಹನಕ್ಕೆ Read More »

ರಾಷ್ಟ್ರೀಯ ನ್ಯೂಸ್

ದಿನಕ್ಕೊಂದು ರೂಲ್ಸ್! ➤ ಸರಕಾರದ ಎಡವಟ್ಟಿಗೆ ಜುಲೈನಲ್ಲಿ ಕೊರೋನಾ ಸ್ಫೋಟ ?

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ.12, ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಂದಿಗೆ ಕೊರೊನಾ ಪ್ರಕರಣಗಳು 6, 244 ಮತ್ತು ಬೆಂಗಳೂರಿನಲ್ಲಿ 584 ಕ್ಕೆ ಏರಿಕೆ ಆಗಿದೆ. ಈ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣ ಸರ್ಕಾರವೇ ಅಂತ ಆರೋಗ್ಯ ತಜ್ಞರು ಅಸಮಾಧಾನ ಹೊರ ಹಾಕಿದ್ದಾರೆ. ದಿನಕ್ಕೊಂದು ರೂಲ್ಸ್ ಮಾಡ್ತಾ ಇರೋದು, ಬೇಕಾಬಿಟ್ಟಿ ನಿಯಮಗಳು ಸಡಿಲಿಕೆ ಮಾಡುತ್ತಿರುವುದೇ ಕೊರೊನಾ ಪ್ರಕರಣ ಪತ್ತೆ ಜಾಸ್ತಿ ಆಗಲು ಕಾರಣ ಎಂದು ಸ್ವತಃ ಆರೋಗ್ಯ ತಜ್ಞರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟೇಟ್

ದಿನಕ್ಕೊಂದು ರೂಲ್ಸ್! ➤ ಸರಕಾರದ ಎಡವಟ್ಟಿಗೆ ಜುಲೈನಲ್ಲಿ ಕೊರೋನಾ ಸ್ಫೋಟ ? Read More »

ಕರ್ನಾಟಕ

ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ➤ ಎಸ್.ಟಿ. ಸೋಮಶೇಖರ್

(ನ್ಯೂಸ್ ಕಡಬ)newskadaba.com ದಾವಣಗೆರೆ. ಜೂ. 12, ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಸಹಕಾರ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ ಎಂದು ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳ ಮೂಲಕ ಆಶಾ

ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ➤ ಎಸ್.ಟಿ. ಸೋಮಶೇಖರ್ Read More »

ಕರ್ನಾಟಕ

ಬಾರ್ಯ ಗ್ರಾಪಂ ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜೂ.12:ಕುಡಿವ ನೀರಿನ ಬಿಲ್‍ನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣಕ್ಕೆ ಸಂಬಂದಪಟ್ಟಂತೆ ಗ್ರಾಪಂ ಪಿಡಿಒ ಸಹಿತ ಒಂಬತ್ತುಮಂದಿಗೆ ದಂಡ ವಿಧಿಸಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಪಂನಲ್ಲಿ ನಡೆದಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಪಂನಲ್ಲಿ 2017-2018ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯಲ್ಲಿ ಗ್ರಾಪಂನಲ್ಲಿ ರಶೀದಿ ಪುಸ್ತಕಗಳ ದುರುಪಯೋಗಪಡಿಸಿಕೊಂಡು ನೀರಿನ ವಸೂಲಿಯಲ್ಲಿ6,92,377 ರೂ ಮತ್ತು 3,99,731 ರೂ. ಸೇರಿದಂತೆ ಒಟ್ಟು 10,92,108 ರೂ ಮೊತ್ತವನ್ನು ಬ್ಯಾಂಕ್‍ನಲ್ಲಿರುವ ಖಾತೆಗೆ ಜಮೆ ಮಾಡದೆ. ನಂತರ ಸಾರ್ವಜನಿಕರ ದೂರು ಬಂದ ಬಳಿಕ

ಬಾರ್ಯ ಗ್ರಾಪಂ ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ Read More »

ಕರಾವಳಿ

ವಿದ್ಯಾರ್ಥಿ ಪೋಷಕರಿಂದ ಬಲಾತ್ಕಾರವಾಗಿ ಶುಲ್ಕ ವಸೂಲು ಮಾಡುವಂತಿಲ್ಲ ➤ ಪುತ್ತೂರು ಶಿಕ್ಷಣಾಧಿಕಾರಿಯಿಂದ ಖಡಕ್ ಎಚ್ಚರಿಕೆ

(ನ್ಯೂಸ್ ಕಡಬ)newskadaba.com ಪುತ್ತೂರು. ಜೂ.12, ಶಾಲಾ ಶುಲ್ಕದ ವಸೂಲಾತಿ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿಗಳ ಪೋಷಕರಿಗೆ ಒತ್ತಡ ಹೇರುವಂತಿಲ್ಲ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ. ಕೆಲವೆಡೆ ಖಾಸಗಿ ಶಾಲೆಯಲ್ಲಿ ಶಾಲಾ ಶುಲ್ಕವನ್ನು ವಸೂಲು ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಶಿಕ್ಷಣ ಇಲಾಖೆಯ ಮುಂದಿನ ಆದೇಶ ಬರುವವರೆಗೂ ಪೋಷಕರಿಂದ ಯಾವುದೇ ಶುಲ್ಕ ವಸೂಲು ಮಾಡುವಂತಿಲ್ಲ. ಅಲ್ಲದೇ ಶುಲ್ಕ ಪಾವತಿಸಲು ಯಾವುದೇ ರೀತಿಯ ಒತ್ತಡ ಹೇರಬಾರದು, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಬಾರದು. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ದೂರುಗಳು

ವಿದ್ಯಾರ್ಥಿ ಪೋಷಕರಿಂದ ಬಲಾತ್ಕಾರವಾಗಿ ಶುಲ್ಕ ವಸೂಲು ಮಾಡುವಂತಿಲ್ಲ ➤ ಪುತ್ತೂರು ಶಿಕ್ಷಣಾಧಿಕಾರಿಯಿಂದ ಖಡಕ್ ಎಚ್ಚರಿಕೆ Read More »

ಕರಾವಳಿ

ಕುಕ್ಕೆಯಲ್ಲಿ ಜಿಂಕೆಗಳ ಸವಾರಿ

ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಜೂ.12:ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ರಸ್ತೆಯಲ್ಲಿ ರಾತ್ರಿ ಜಿಂಕೆಗಳ ಓಡಾಟ ಕಂಡುಬಂದಿದೆ.ಇದನ್ನು ನೋಡಿದ ಸ್ಥಳೀಯರು ಛಾಯಚಿತ್ರ ಸೆರೆಹಿಡಿದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಎಸ್‍ಎಸ್‍ಪಿಯು ಕಾಲೇಜಿನ ಬಳಿಯ ವಲ್ಲೀಶಾ ಸಭಾಭವನದ ರಸ್ತೆಯಲ್ಲಿ ರಾತ್ರಿ 2 ಜಿಂಕೆಗಳು ರಸ್ತೆ ದಾಟುತ್ತಿದ್ದವು ಅದೇ ವೇಳೆ ವಾಹನಗಳು ಹೋದುದರಿಂದ ಅಲ್ಲೇ ಸ್ವಪ್ಪ ಹೊತ್ತು ನಿಂತು ಅಲ್ಲಿಂದ ಓಡಿವೆ. ಈ ಹಿಂದೆ ರಾತ್ರಿ ಹೊತ್ತಲ್ಲೆ ಆನೆಗಳು ಕಂಡುಬಂದಿದ್ದವೂ ಹೀಗೆ ಕಾಡು ಪ್ರಾಣಿಗಳು ಪದೇ ಪದೇ ಸುಬ್ರಹ್ಮಣ್ಯ ಪ್ರದೇಶದಲ್ಲಿ ಓಡಾಟ ನಡೆಸುವುದು ಸರ್ವೆಸಾಮಾನ್ಯ ವಾಗಿದೆ.  

ಕುಕ್ಕೆಯಲ್ಲಿ ಜಿಂಕೆಗಳ ಸವಾರಿ Read More »

ಕರಾವಳಿ
Scroll to Top