News Kadaba Desk

ಲಾಕ್ ಡೌನ್ ಬಳಿಕ ಪ್ರಥಮ ಬಾರಿಗೆ ಬಾಗಿಲು ತೆರೆದ ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂನ್. 13, ಲಾಕ್ ಡೌನ್ ಬಳಿಕ ಬದ್ರಿಯಾ ಜುಮ್ಮಾ ಮಸ್ಜಿದ್ ತೆಕ್ಕಾರು ಮಸೀದಿಯಲ್ಲಿ ಪ್ರಥಮ ಬಾರಿಗೆ ಶುಕ್ರವಾರ ಜುಮಾ ನಮಾಝ್ ಸರ್ಕಾರದ ಆದೇಶದಂತೆ ನಿರ್ವಹಿಸಲಾಯಿತು. ಸಂಪೂರ್ಣವಾಗಿ ಜಮಾಅತ್ ಖಾಝಿ ಮತ್ತು ಸರಕಾರದ ಕಾನೂನುಗಳನ್ನು ಅಕ್ಷರಶಃ ಪಾಲಿಸಲಾಯಿತು. ಜುಮಾ ಖುತುಬಕ್ಕೆ 10 ನಿಮಿಷಗಳ ಮುಂಚೆ ಮಸೀದಿ ತೆರೆಯಲಾಯಿತು. ಜಮಾಅತ್ ನಿವಾಸಿಗಳಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮಸೀದಿ ಪ್ರವೇಶಕ್ಕೆ ಮುಂಚೆ ಹ್ಯಾಂಡ್ ವಾಷ್ ಬಳಸಲಾಯಿತು. ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ನಮಾಜ್ ನಿರ್ವಹಿಸಲಾಯಿತು. ಕೇವಲ […]

ಲಾಕ್ ಡೌನ್ ಬಳಿಕ ಪ್ರಥಮ ಬಾರಿಗೆ ಬಾಗಿಲು ತೆರೆದ ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು Read More »

ಕರಾವಳಿ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣಾಧಿಕಾರಿ ಖಡಕ್ ವಾರ್ನಿಂಗ್

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜೂ.13:ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪಡೆಯುವ ಕುರಿತು ಶುಲ್ಕ ಪಾವತಿಸಲು ನಿರಾಕರಿಸುವ ಪೋಷಕರಿಗೆ ಮುಂದಿನ ಆದೇಶದವರೆಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿರುವ ಕುರಿತು ದೂರುಗಳು ಬಂದರೆ ಅಂತಹ ಶಾಲೆಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಾಸಗಿ ಶಾಲೆಗಳಿಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಶುಲ್ಕ ಪಾವತಿಗೆ ಸಂಬಂಧಪಟ್ಟಂತೆ ಖಾಸಗಿ ಶಾಲೆಗಳು ಒತ್ತಡ ಹೇರುತ್ತಿರುವ ಬಗ್ಗೆ ಆರೋಪಗಳು ಬರುತ್ತಿವೆ. ಈ ಸಂಬಂಧ ಇಂತಹ ಶಿಕ್ಷಣ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣಾಧಿಕಾರಿ ಖಡಕ್ ವಾರ್ನಿಂಗ್ Read More »

ಕರಾವಳಿ

ಆತ್ಮ ನಿರ್ಭರ ಭಾರತ ಸಂಕಲ್ಪ ➤ ಪಂಜದಲ್ಲಿ ತರಕಾರಿ ಬೀಜ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಆತ್ಮನಿರ್ಭರ ಭಾರತ ಸಂಕಲ್ಪದ ಭಾಗವಾಗಿ ಪಂಜ ವ್ಯವಸಾಯ ಸೇವಾ ಬ್ಯಾಂಕಿನ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ತರಕಾರಿ ಬೀಜ ವಿತರಣೆ ಮಾಡಲಾಯಿತು. ಗ್ರಾಮ ವಿಕಾಸ ಸಮಿತಿ ಪಂಜ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್ ಪಂಜ ಇದರ ಜಂಟಿ ಆಶ್ರಯದಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪದ ಭಾಗವಾಗಿ ತರಕಾರಿ ಬೀಜ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಳ ವಹಿಸಿದ್ದರು.

ಆತ್ಮ ನಿರ್ಭರ ಭಾರತ ಸಂಕಲ್ಪ ➤ ಪಂಜದಲ್ಲಿ ತರಕಾರಿ ಬೀಜ ವಿತರಣೆ Read More »

ಕರಾವಳಿ

ಬೆಳ್ತಂಗಡಿಯ ಶಾಲೆಯೊಂದು ಇನ್ನೂ 1 ವರ್ಷ ಸಂಪೂರ್ಣ ಬಂದ್

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜೂ.13:ಕೊರೊನಾ ಆರ್ಭಟದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇಡೀ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾಸಂಸ್ಥೆಯೊಂದು 1 ವರ್ಷ ಶಾಲೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದೆ. ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು. ಧರ್ಮಸ್ಥಳದ ಸಮೀಪ ಇರುವ ಕನ್ಯಾಡಿಯ ಈ ಶಾಲೆಯಲ್ಲಿ ಸುಮಾರು 350 ಕ್ಕೂ ಹೆಚ್ಚು ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. 350 ಮಕ್ಕಳ ಪೈಕಿ 250ರಷ್ಟು ಮಕ್ಕಳು 12ವರ್ಷದೊಳಗಿನವರಾಗಿದ್ದಾರೆ. ಹೀಗಾಗಿ

ಬೆಳ್ತಂಗಡಿಯ ಶಾಲೆಯೊಂದು ಇನ್ನೂ 1 ವರ್ಷ ಸಂಪೂರ್ಣ ಬಂದ್ Read More »

ಕರಾವಳಿ

ಮಾಣಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ವಿಟ್ಲ. ಜೂ.13, ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ‌ ಪಳಿಕೆ‌ ಎಂಬಲ್ಲಿನ ಮರದ ಬುಡದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಮರದಲ್ಲಿ ಪ್ಯಾಂಟು ನೇತಾಡುತ್ತಿದ್ದು, ಪ್ಯಾಂಟಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ‌ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ‌. ಮೃತನ ಹೆಸರು ಹಾಗೂ ವಿಳಾಸ ಪತ್ತೆಯಾಗದ‌ ಹಿನ್ನೆಲೆಯಲ್ಲಿ ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ವಿಟ್ಲ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯ ಪೊಲೀಸ್

ಮಾಣಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮತ್ತೆ ಲಾಕ್ ಡೌನ್..!? ➤ ಮುಖ್ಯಮಂತ್ರಿಗಳ ಜೊತೆಗೆ ಮೋದಿ ಸಭೆಗೆ ಸಿದ್ದತೆ..!!

(ನ್ಯೂಸ್ ಕಡಬ)newskadaba.com ನವದೆಹಲಿ. ಜೂ. 13, ದೇಶದಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣ ಕಳೆದುಕೊಂಡಿದ್ದು, ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಲಾಕ್ ಡೌನ್ ಸಡಿಲಿಕೆಯೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದ್ದು ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲು ಮುಂದಾಗಿದ್ದಾರೆ. ಮತ್ತೆ ದೇಶ ಅಥವಾ ಡೇಂಜರ್ ಝೋನ್ ನಲ್ಲಿರುವ ರಾಜ್ಯಗಳು ಲಾಕ್ ಡೌನ್ ಆಗುತ್ತವೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ

ಮತ್ತೆ ಲಾಕ್ ಡೌನ್..!? ➤ ಮುಖ್ಯಮಂತ್ರಿಗಳ ಜೊತೆಗೆ ಮೋದಿ ಸಭೆಗೆ ಸಿದ್ದತೆ..!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಎಎಸ್ ಪಾಸಾದ ಕೇರಳದ ಪ್ರಪ್ರಥಮ ಆದಿವಾಸಿ ಯುವತಿಯಿಂದ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ)newskadaba.com ಕೋಯಿಕ್ಕೋಡ್. ಜೂ.12, ಐಎಎಸ್ ಪರೀಕ್ಷೆ ಪಾಸಾಗಿರುವ ಕೇರಳದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ‌ ಹೆಗ್ಗಳಿಕೆಗೆ ಪಾತ್ರರಾದ ಶ್ರೀಧನ್ಯಾ ಸುರೇಶ್ ಗುರುವಾರ ಕೋಝಿಕ್ಕೋಡ್‌ನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಆಗಿ ಅಧಿಕಾರ ವಹಿಸಿಕೊಂಡರು. 2019ರ ಬ್ಯಾಚ್‌ನ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ಅಧಿಕಾರಿಯಾಗಿರುವ ಶ್ರೀಧನ್ಯಾ ಐಎಎಸ್ ಪರೀಕ್ಷೆ ಪಾಸಾಗಿರುವ ಕೇರಳದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಸುದ್ದಿಯಾಗಿದ್ದರು. ತನ್ನ ನಾಗರಿಕ ಸೇವೆಯ ಪಯಣವನ್ನು ನೆನಪಿಸಿಕೊಂಡ ಶ್ರೀಧನ್ಯಾ, ‘‘2016ರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ

ಐಎಎಸ್ ಪಾಸಾದ ಕೇರಳದ ಪ್ರಪ್ರಥಮ ಆದಿವಾಸಿ ಯುವತಿಯಿಂದ ಅಧಿಕಾರ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ಲಾಕ್ ಡೌನ್ ವೇಳೆಯಲ್ಲಿ ನೌಕರರಿಗೆ ವೇತನ ನೀಡದ ವಿಚಾರ ➤ ಮಾಲಕರ ಪರ ನಿಂತ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜೂ.13, ಕೊರೋನ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಮಾಲಕರ ವಿರುದ್ಧ ಜುಲೈ ಅಂತ್ಯದ ತನಕ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಈ ತೀರ್ಪು ಖಾಸಗಿ ಉದ್ಯೋಗದಾತರಿಗೆ ನಿಟ್ಟುಸಿರುಬಿಡುವಂತಾಗಿದೆ. ನೌಕರರು ಹಾಗೂ ಉದ್ಯೋಗದಾತರ ನಡುವೆ ಮಾತುಕತೆ ನಡೆಸಲು ರಾಜ್ಯ ಸರಕಾರಗಳು ಅನುಕೂಲ ಮಾಡಿಕೊಡಬೇಕು. ತಮ್ಮ ವರದಿಯನ್ನು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ನಲ್ಲಿ ಎಲ್ಲ ಉದ್ಯೋಗದಾತರಿಗೆ

ಲಾಕ್ ಡೌನ್ ವೇಳೆಯಲ್ಲಿ ನೌಕರರಿಗೆ ವೇತನ ನೀಡದ ವಿಚಾರ ➤ ಮಾಲಕರ ಪರ ನಿಂತ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

(ನ್ಯೂಸ್ ಕಡಬ)newskadaba.com ಕೊಳ್ಳೇಗಾಲ, ತಾಯಿಯೋರ್ವಳು ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.   ಮೃತರನ್ನು ಸಂಗೀತಾ (23) ಎಂದು ಗುರುತಿಸಲಾಗಿದೆ. 3 ವರ್ಷದ ಮಗ ಕರಣ್ ನನ್ನು ಹತ್ಯೆಗೈದ ಈಕೆ ಬಳಿಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಗ್ರಾಮದ ದೇಗುಲಕ್ಕೆ ತೆರಳುತ್ತೇನೆಂದು ಹೇಳಿ ಹೋದ ಸಂಗೀತಾ ಮನೆಯಿಂದ ತೆರಳಿದ್ದಾಳೆ ಎನ್ನಲಾಗಿದ್ದು, ಬಳಿಕ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಸಾವಿಗೆ ಕಾರಣ ನಿಗೂಢವಾಗಿದ್ದು, ಘಟನೆ ಸಂಬಂಧ ಕೊಳ್ಳೇಗಾಲ

ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭಾರೀ ಗಾಳಿ ಮಳೆಗೆ ಮನೆಯ ಕಾಂಪೌಂಡ್ ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.12, ಧಾರಾಕಾರ ಮಳೆಯಿಂದಾಗಿ ತನ್ನದೇ ಮನೆಯ ಕಂಪೌಂಡ್ ಗೋಡೆ ಕುಸಿದು ಗಂಭೀರ ಗಾಯಗೊಂಡ ಗುರುಪುರದ ಮಠದಗುಡ್ಡೆ ನಿವಾಸಿ ನಾರಾಯಣ ನಾಯ್ಕ (52) ಎಂಬವರು ಮೃತಪಟ್ಟಿದ್ದಾರೆ. ಶುಕ್ರವಾರ ಧಾರಾಕಾರ ಮಳೆಯಾಗುತ್ತಿದ್ದುದರಿಂದ ಮಧ್ಯಾಹ್ನ 1:30ರ ವೇಳೆಗೆ ನೀರು ಹೋಗಲು ಮನೆಯ ಪಕ್ಕದಲ್ಲಿ ಚಿಕ್ಕ ತೋಡು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಮಳೆಯಿಂದ ತೇವಗೊಂಡಿದ್ದ ಅವರದೇ ಮನೆಯ ಮುರಕಲ್ಲಿನ ಆಳೆತ್ತರದ ಕಂಪೌಂಡ್ ನಾರಾಯಣ ನಾಯ್ಕರ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವಗೊಂಡ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ

ಭಾರೀ ಗಾಳಿ ಮಳೆಗೆ ಮನೆಯ ಕಾಂಪೌಂಡ್ ಕುಸಿದು ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top