News Kadaba Desk

ಏಳನೇ ತರಗತಿವರೆಗೆ ಆನ್ ಲೈನ್ ತರಗತಿ ರದ್ದು

(ನ್ಯೂಸ್ ಕಡಬ)newskadaba.com ಜೂ. 12, ಏಳನೇ ತರಗತಿವರೆಗೂ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದ್ದು, ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಬುಧವಾರದಂದು ನಡೆದ ಸಂಪುಟ ಸಭೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿ ಐದನೇ ತರಗತಿವರೆಗಿನ ಆನ್ ಲೈನ್ ತರಗತಿಗಳನ್ನು ರದ್ದುಗೊಳಿಸಿದ ಸರಕಾರ, ಗುರುವಾರದಂದು ಏಳನೇ ತರಗತಿವರೆಗಿನ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಿದೆ ಎಂದು ಮಾಧುಸ್ವಾಮಿ ವಿಧಾನಸೌದದಲ್ಲಿ ತಿಳಿಸಿದ್ದಾರೆ.

ಏಳನೇ ತರಗತಿವರೆಗೆ ಆನ್ ಲೈನ್ ತರಗತಿ ರದ್ದು Read More »

ಕರ್ನಾಟಕ

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಪ್ರಕರಣ : ಅಮೂಲ್ಯಗೆ ಜಾಮೀನು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ. 12, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿ ಕಾರಾಗೃಹ ಸೇರಿದ್ದ ಅಮೂಲ್ಯ ಲಿಯೋನ್‍ಗೆ ನಗರದ ಸಿಟಿ ಸಿವಿಲ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಮೂಲ್ಯ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಜಾಮೀನು ಮಂಜೂರು ಮಾಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರಾದ ಅಮೂಲ್ಯ ಇನ್ನೂ 19 ವರ್ಷ ವಯಸ್ಸಿನ ಯುವತಿ, ನಗರದ ಖಾಸಗಿ ಕಾಲೇಜು ಒಂದರಲ್ಲಿ ಓದುತ್ತಿದ್ದಾರೆ.

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಪ್ರಕರಣ : ಅಮೂಲ್ಯಗೆ ಜಾಮೀನು Read More »

ರಾಷ್ಟ್ರೀಯ ನ್ಯೂಸ್

ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಕಾರ್ಯದರ್ಶಿಯಾಗಿ ಮಧುಸೂದನ್ ಕೊಂಬಾರು

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಗಿರೀಶ್ ಎ.ಪಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂದನ್ ಕೊಂಬಾರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ನಿಕಟ ಪೂರ್ವ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಪ್ರಕಾಶ್ ಎನ್.ಕೆ., ಸತೀಶ್ ನಾಯಕ್, ಎ.ಬಿ. ಮನೋಹರ ರೈ ಮೊದಲಾದವರು ಉಪಸ್ಥಿತರಿದ್ದರು.  

ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಕಾರ್ಯದರ್ಶಿಯಾಗಿ ಮಧುಸೂದನ್ ಕೊಂಬಾರು Read More »

ಕರಾವಳಿ

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ, ಇಂದು ಇಬ್ಬರು ಭಯೋತ್ಪಾದಕರು ಫಿನಿಶ್

(ನ್ಯೂಸ್ ಕಡಬ) newskadaba.com.ಶ್ರೀನಗರ, ಜೂ.11– ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆಬಡೆಯುವ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾ ಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯ ಪಠಾಣ್ಪುರ್ನಲ್ಲಿ ಇಂದು ಬೆಳಗ್ಗೆ ಭದ್ರತಾಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದು, ವಿಧ್ವಂಸಕ ಕೃತ್ಯ ಯತ್ನ ವಿಫಲಗೊಂಡಂತಾಗಿದೆ. ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆ ನಸುಕಿನಲ್ಲಿ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಕಮಾಂಡರ್ ಸೇರಿದಂತೆ ಐವರು ಉಗ್ರಗಾಮಿಗಳು ಹತರಾಗಿದ್ದರು.

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ, ಇಂದು ಇಬ್ಬರು ಭಯೋತ್ಪಾದಕರು ಫಿನಿಶ್ Read More »

ರಾಷ್ಟ್ರೀಯ ನ್ಯೂಸ್

ಕೊರೊನಾ ವಾರಿಯರ್ಸ್‍ಗೆ ಪುಷ್ಪ ಪ್ರದರ್ಶನದ ಮೂಲಕ ಗೌರವ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.11:ಕಳೆದ ಮೂರು ತಿಂಗಳಿಂದ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ದ ಹೋರಾಟ ನಡೆಸಿದ ವೈದ್ಯರು, ಪೋಲಿಸರು, ಆರೋಗ್ಯ ಕಾರ್ಯಕರ್ತರು,ಪೌರಕಾರ್ಮಿಕರಿಗೆ ಗೌರವ ಸೂಚಿಸುವ ಸಲುವಾಗಿ ಬೆಂಗಳೂರಿನ ವಿಧಾನಸೌಧದ ಮುಂದೆ ಪುಷ್ಪ ಪ್ರದರ್ಶನ ಆಯೋಜಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಮಹಾಮಾರಿ ಭಾರೀ ಅನಾಹುತವನ್ನೇ ಉಂಟು ಮಾಡುತ್ತಿದೆ. ಇದರ ವಿರುದ್ದ ಹಗಳು ರಾತ್ರಿ ಎನ್ನದೆ ಹೋರಾಟ ನಡೆಸಿದವರು ಕೊರೊನಾ ವಾರಿಯರ್ಸ್, ವೈದ್ಯರು ತಮ್ಮ ಜೀವವನ್ನು ಪಣಕಿಟ್ಟು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇವರೊಂದಿಗೆ ಮಹಾಮಾರಿ ನಿಯಂತ್ರಣ ಮಾಡಲು ಲಾಕ್ ಡೌನ್

ಕೊರೊನಾ ವಾರಿಯರ್ಸ್‍ಗೆ ಪುಷ್ಪ ಪ್ರದರ್ಶನದ ಮೂಲಕ ಗೌರವ Read More »

ಕರಾವಳಿ

ಏರಿಕೆಯತ್ತ ಪೆಟ್ರೋಲ್, ಡೀಸೆಲ್ ದರ

(ನ್ಯೂಸ್ ಕಡಬ) newskadaba.com.ಹೊಸದಿಲ್ಲಿ,ಜೂ.11:ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾದ ಪರಿಣಾಮ ನಮ್ಮ ದೇಶದಲ್ಲೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 44 ಪೈಸೆ ಹೆಚ್ಚಳವಾದರೆ, ಡೀಸೆಲ್ ದರ 58 ಪೈಸೆ ಏರಿಕೆ ಕಂಡಿದೆ. ಈಗಾಗಳೆ ಕೊರೊನಾ ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ತೈಲ ದರ ಏರಿಕೆಯಿಂದ ಮತ್ತೆ ಹೊರೆಯಾಗಿದೆ.ಕಳೆದ ಮೂರು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಬದಲಾಗುತ್ತಲೇ ಇದೆ.ಇದರೊಂದಿಗೆ ಮಾ.14ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ 3 ರೂ, ಅಬಕಾರಿ ಸುಂಕವನ್ನು

ಏರಿಕೆಯತ್ತ ಪೆಟ್ರೋಲ್, ಡೀಸೆಲ್ ದರ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೊರೊನಾಗೆ ಶಾಸಕ ಬಲಿ

(ನ್ಯೂಸ್ ಕಡಬ) newskadaba.com.ಚೆನ್ನೈ,ಜೂ.10: ಮಾರಕ ಕೊರೊನಾ ವೈರಸ್‍ಗೆ ತಮಿಳುನಾಡಿನ ಡಿಎಂಕೆ ಶಾಸಕ ಜೆ.ಅನ್ಬಳಗನ್ ಬಲಿಯಾಗಿದ್ದಾರೆ. ಕಳೆದ ಜೂನ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. 61 ವರ್ಷದ ಅನ್ಬಳಗನ್‍ಗೆ ಕೃತಕ ಉಸಿರಾಟದ ಹಾಗೂ ನಿರಂತರ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಕೊರೊನಾಗೆ ಬಲಿಯಾದ ತಮಿಳುನಾಡಿನ ಮೊದಲ ರಾಜಕೀಯ ಮುಖಂಡ ಅನ್ಬಳಗನ್ ಅವರಾಗಿದ್ದಾರೆ. ಇವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಇ. ಪಳನಿಸ್ವಾಮಿ,ಅನ್ಬಳಗನ್ ಕುಟುಂಬಕ್ಕೆ ಸಾಂತ್ವನ

ಕೊರೊನಾಗೆ ಶಾಸಕ ಬಲಿ Read More »

ಕರಾವಳಿ

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದ ಆದರೆ ಇದೀಗ ಯವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು. ಶಿವಮೊಗ್ಗದಲ್ಲಿ ಇರುವುದಾಗಿ ಸ್ವತಃ ಪ್ರವೀಣ್ ಸಫಲ್ಯನೇ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಇತ್ಯರ್ಥವಾಗಿದೆ. ಸದ್ಯ ಯುವಕ ಕ್ಷೇಮವಾಗಿದ್ದು ಮನೆಮಂದಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ? Read More »

ಕರಾವಳಿ

ನಾಳೆಯಿಂದ ಮುಂಗಾರು ಜೋರು ➤ಆರೆಂಜ್ ಆಲರ್ಟ್ ಫೋಷಿಸಿದ ಜಿಲ್ಲಾಡಳಿತ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಜೂ.11,12 ಮತ್ತು 13 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂ 11 ಬಳಿಕ ಮುಂಗಾರು ಮತ್ತಷ್ಟು ಚುರುಕುಗೊಳ್ಳುದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡದಲ್ಲಿ ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ಫೋಷಣೆ ಮಾಡಿದೆ. ಜೂ,1ರಂದೇ ಮುಂಗಾರು ಕೇರಳ ಪ್ರವೇಶಿಸಿತ್ತು ಆದರೆ ನಿಸರ್ಗ ಚಂಡಮಾರುತದಿಂದಾಗಿ ರಾಜ್ಯಕ್ಕೆ ಪ್ರವೇಶ ತಡವಾಗಿತ್ತು ಈಗ ಮುಂಗಾರು ಕರಾವಳಿಗೆ ಪ್ರವೇಶವಾಗಿದ್ದರೂ ಕೂಡ, ಕಳೆದ ಕೆಲವು ದಿನಗಳಿಂದ ಹೇಳಿಕೊಳ್ಳುವಂತ

ನಾಳೆಯಿಂದ ಮುಂಗಾರು ಜೋರು ➤ಆರೆಂಜ್ ಆಲರ್ಟ್ ಫೋಷಿಸಿದ ಜಿಲ್ಲಾಡಳಿತ Read More »

ಕರಾವಳಿ
Scroll to Top