News Kadaba Desk

ಸೋಮೇಶ್ವರದಲ್ಲಿ ಮತ್ತೆ ಕಡಲ್ಕೊರೆತ ➤ಆತಂಕದಲ್ಲಿ ಕಡಲ ತೀರದ ನಿವಾಸಿಗಳು

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜೂ.19:ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಳ್ಳಾಲದ ಸೋಮೇಶ್ವರದಲ್ಲಿ ಕಡಲ್ಕೊರೆತ ಉಂಟಾಗಿದೆ. ಕಡಲ್ಕೊರೆತ ನಿಯಂತ್ರಣಕ್ಕಾಗಿ ಕಿನಾರೆಗೆ ಹಾಕಲಾಗಿದ್ದ ಬೃಹತ್ ಬಂಡೆಕಲ್ಲುಗಳನ್ನು ಭೇದಿಸಿ ಸಮುದ್ರದ ಅಲೆಗಳು ಮುನ್ನುಗ್ಗಿವೆ. ಅಲೆಗಳ ಅಬ್ಬರಕ್ಕೆ ಕಡಲ ನಿವಾಸಿಗಳು ಭಯಬಿದ್ದಿದ್ದಾರೆ. ಇಂದು ಮಳೆ ನಿಂತಿದ್ದರೂ ಕಡಲ ತೀರದ ನಿವಾಸಿಗಳು ಮಾತ್ರ ಕಡಲ್ಕೊರೆತದ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ.

ಸೋಮೇಶ್ವರದಲ್ಲಿ ಮತ್ತೆ ಕಡಲ್ಕೊರೆತ ➤ಆತಂಕದಲ್ಲಿ ಕಡಲ ತೀರದ ನಿವಾಸಿಗಳು Read More »

ಕರಾವಳಿ

ಅಮಾನವೀಯತೆ ತೋರಿದ ಖಾಸಗಿ ಆಸ್ಪತ್ರೆ ಬೀದಿಗೆ ಬಿದ್ದ ನಿರ್ಗತಿಕ ಹಿರಿಯ ಜೀವಗಳು

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19: ನಾಲ್ವರು ನಿರ್ಗತಿಕ ಹಿರಿಯ ನಾಗರಿಕರನ್ನು ಆಸ್ಪತ್ರೆಯೊಂದರ ಸಿಬ್ಬಂದಿ ಮಾರುಕಟ್ಟೆ ಬಳಿ ತಂದು ಬಿಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ನಾಲ್ವರು ಹಿರಿಯ ನಾಗರಿಕರು ಮೂರು ತಿಂಗಳಿನಿಂದ ನಗರದ ಹೊರವಲಯದ ಖಾಸಗಿ ಆಸ್ಪತ್ರೆಯಲ್ಲಿದ್ದರು. ಅದಕ್ಕಿಂತ ಮೊದಲು ಇವರ ಸಹಿತ ಹಲವಾರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿದ್ದರು. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸುವ ಸಂದರ್ಭ ಅವರನ್ನು ನಗರದ ಹೊರವಲಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನಾಲ್ವರು ನಿರ್ಗತಿಕರನ್ನು ಆಸ್ಪತ್ರೆಯ ವಾಹನದಲ್ಲಿ ಕಂಕನಾಡಿ

ಅಮಾನವೀಯತೆ ತೋರಿದ ಖಾಸಗಿ ಆಸ್ಪತ್ರೆ ಬೀದಿಗೆ ಬಿದ್ದ ನಿರ್ಗತಿಕ ಹಿರಿಯ ಜೀವಗಳು Read More »

ಕರಾವಳಿ

ಕೇರಳ ರಾಜ್ಯ ತಂಡಕ್ಕೆ ತಿರುವನಂತಪುರ ಎಕ್ಸೆಪ್ರೆಸ್ ಖ್ಯಾತಿಯ ಶ್ರೀಶಾಂತನ ಪುನರಾಗಮನ

(ನ್ಯೂಸ್ ಕಡಬ) newskadaba.com.ತಿರುವನಂತಪುರ,ಜೂ.19:ಇದೇ ಸೆಪ್ಟಂಬರ್ ಕೊನೆಯಲ್ಲಿ ಕ್ರಿಕೆಟ್ ನಿಷೇಧದಿಂದ ಮುಕ್ತರಾಗುವ ಪೇಸ್ ಬೌಲರ್ ಎಸ್. ಶ್ರೀಶಾಂತ್ ಕೇರಳ ರಣಜಿ ತಂಡಕ್ಕೆ ಮತ್ತೊಮ್ಮೆ ಸೆರ್ಪಡೆಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಶ್ರೀ ಕೇರಳ ರಣಜಿ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಕೋಚ್ ಟಿನು ಯೋಹಾನನ್ ಹೇಳಿದ್ದಾರೆ. ಇದರಿಂದ ಕೇರಳ ರಣಜಿ ತಂಡಕ್ಕೆ ಮತ್ತಷ್ಟು ಹುರುಪಿನಿಂದ ಕಣಕ್ಕಿಳಿಯಬಹುದು. ಐಪಿಎಲ್ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾದ ಕಾರಣಕ್ಕೆ 2013ರ ಆಗಸ್ಟ್‍ನಲ್ಲಿ ಶ್ರೀ ಶಾಂತ್ ಅವರಿಗೆ ಆಜೀವ ನಿಷೇಧ ವಿಧಿಸಿತ್ತು. ಆದರೆ ಕಳೆದ ವರ್ಷ ಬಿಸಿಸಿಐ ಅಜೀವ ನಿಷೇಧ

ಕೇರಳ ರಾಜ್ಯ ತಂಡಕ್ಕೆ ತಿರುವನಂತಪುರ ಎಕ್ಸೆಪ್ರೆಸ್ ಖ್ಯಾತಿಯ ಶ್ರೀಶಾಂತನ ಪುನರಾಗಮನ Read More »

ಕ್ರೀಡಾ ನ್ಯೂಸ್

ಗೇರುಬೀಜ ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.19, ಠಾಣಾ ವ್ಯಾಪ್ತಿಯ ಸವಣೂರು ಪರಣೆ ಎಂಬಲ್ಲಿ ಗೇರುಬೀಜ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಉರುಳಿದ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ-ಕ್ಲೀನರ್ ಅಪಾಯದಿಂದ ಪಾರಾಗಿದ್ದು, ಲಾರಿಯಲ್ಲಿದ್ದ ಗೇರುಬೀಜ ಚೆಲ್ಲಾಪಿಲ್ಲಿಯಾಗಿದೆ. ಸ್ಥಳಕ್ಕೆ ಧಾವಿಸಿದ ಸವಣೂರಿನ ಎಸ್ ಡಿಪಿಐ ಕಾರ್ಯಕರ್ತರು ಗೇರುಬೀಜವನ್ನು ಮತ್ತೊಂದು ವಾಹನಕ್ಕೆ ತುಂಬಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗೇರುಬೀಜ ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಚೀನಾ ಉಪಕರಣಗಳನ್ನು ಬಳಸದಂತೆ ಬಿಎಸ್ಎನ್ಎಲ್ ಗೆ ಕೇಂದ್ರ ಸೂಚನೆ

(ನ್ಯೂಸ್ ಕಡಬ)newskadaba.com ನವದೆಹಲಿ, ಜೂ.18, ಭಾರತ-ಚೀನಾ ಗಡಿಯಲ್ಲಿ ಚೀನಾ ನಡೆಸುತ್ತಿರುವ ಕೃತ್ಯದಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾಯಿ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದು, ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೀನಾದ ಸಂಸ್ಥೆಗಳು ತಯಾರಿಸುವ ಸಲಕರಣೆಗಳ ಮೇಲಿನ ಅವಲಂಬನೆಯನ್ನು

ಚೀನಾ ಉಪಕರಣಗಳನ್ನು ಬಳಸದಂತೆ ಬಿಎಸ್ಎನ್ಎಲ್ ಗೆ ಕೇಂದ್ರ ಸೂಚನೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19:ಮಾಂಸದ ಅಂಗಡಿಯ ಮಾಲಿಕನೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮಾಂಸದ ಅಂಗಡಿ ಮಾಲಿಕ ಹಳೆಕೋಟೆ ನಿವಾಸಿಯಾಗಿರುವ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರಿನಿಂದ ನಝೀರ್ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ನಝೀರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ Read More »

ಕರಾವಳಿ

ಕಡಬ: ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.18, ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ಯುವತಿಯೋರ್ವಳು ಕಾಣೆಯಾದ ಘಟನೆ ಗುರುವಾರದಂದು ನಡೆದಿದೆ. ನಾಪತ್ತೆಯಾದವರನ್ನು ಕುಟ್ರುಪ್ಪಾಡಿ ಗ್ರಾಮದ ಕುಂಟಿನಡ್ಕ ನಿವಾಸಿ ಪಾಸಿ ಎಂಬವರ ಪುತ್ರಿ ಕುಮಾರಿ ಪೂರ್ಣಿಮಾ (19) ಎಂದು ಗರುರುತಿಸಲಾಗಿದೆ. ಬುಧವಾರ ರಾತ್ರಿ ಮಲಗಿದ್ದ ಈಕೆ ಬಟ್ಟೆ-ಬರೆಗಳೊಂದಿಗೆ ಮನೆಯಿಂದ ಹೊರಹೋಗಿ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಈಕೆಯ ತಂದೆ ಪಾಸಿ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಯುವತಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ➤ ಡಿಸಿಗಳಿಗೆ ಸರಕಾರದ ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.18, ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯದೇ ಇರುವ ಕಾರಣ ಐದು ವರ್ಷದ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐದು ವರ್ಷದ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(1)(ಬಿ)ರಡಿ ಕಲಂ 321 ಅನ್ವಯ ಆಡಳಿತಾಧಿಕಾರಿಗಳನ್ನು ನೇಮಿಸಲು ಸರಕಾರವು ತಿಳಿಸಿದ್ದು,

ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ➤ ಡಿಸಿಗಳಿಗೆ ಸರಕಾರದ ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಮೃತ ಯೋಧನಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ. ಜೂ. 18, ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ(34) ಅವರಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಎದುರು ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಲಾಯಿತು. ರಜೆಯ ನಿಮಿತ್ತ ಊರಿಗೆ ಬಂದಿದ್ದ ಇವರು ಸೋಮವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇದ್ದ ಇವರು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆನ್ನಲಾಗಿದೆ.

ಮೃತ ಯೋಧನಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ

(ನ್ಯೂಸ್ ಕಡಬ)newskadaba.com ಕಡಬ. ಜೂ. 18, ಕಡಬ ತಾಲೂಕು ಆಡಳಿತ ವತಿಯಿಂದ ಇಂದು ಮಾಸ್ಕ್ ಡೇ ಆಚರಿಸಲಾಯಿತು. ಕಡಬ ತಾಲುಕು ಕಛೇರಿಯಿಂದ ಪಂಜ ಕ್ರಾಸ್ ತನಕ ಜನ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಕೊರೋನಾ ಹೋಗಲಾಡಿಸುವಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಹಕರಿಸಬೇಕು ಎಂದರು. ಕಡಬ ತಾಲೂಕು ಕಛೇರಿಯಿಂದ ಪಂಜ ಕ್ರಾಸ್ ತನಕ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ ಪ್ಲೇ ಕಾರ್ಡ್ ಹಿಡಿದು ಪಾದಯಾತ್ರೆ ಮಾಡಲಾಯಿತು.

ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top