News Kadaba Desk

ವಿಟ್ಲ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 07. ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ಬಾಲಕೃಷ್ಣ ಎಂಬವರ ಪತ್ನಿ ವನಿತಾ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೊತೆಗೆ ಮೂರು ವರ್ಷದ ವಿಕಲಚೇತನ ಹೆಣ್ಣು ಮಗುವಿದೆ. ಮತ್ತಿಬ್ಬರು ಹೆಣ್ಣುಮಕ್ಕಳನ್ನು ಕನ್ಯಾನದ ಭಾರತ ಸೇವಾಶ್ರಮಕ್ಕೆ ದಾಖಲಿಸಲಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಪತಿ ಪತ್ನಿ ಇಬ್ಬರೂ ಕುಡಿತದ ಚಟ ಹೊಂದಿದ್ದು, ನಿನ್ನೆ ರಾತ್ರಿ ಇಬ್ಬರ […]

ವಿಟ್ಲ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

15 ದಿನಗಳಲ್ಲಿ ಮರಳು ಪರವಾನಗಿ ಹಾಗೂ ಅಕ್ರಮ ಗಣಿಗಾರಿಕೆ ಪತ್ತೆಗೆ 196 ಸಿಸಿ ಟಿವಿ ಅಳವಡಿಕೆ ➤ ಸಚಿವ ಸಿ.ಸಿ ಪಾಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 07. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹದನೈದು ದಿನಗಳ ಒಳಗೆ ಮರಳು ತೆಗೆಯಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಭೂ ವಿಜ್ಞಾನ ಖಾತೆಯ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾದಂತಹ 30 ಬ್ಲಾಕ್ ಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗುವುದು, ಸರಕಾರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ತನಿಖೆಗೆ ಸೂಚಿಸಿದ್ದು, ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು. ಗಡಿ ಪ್ರದೇಶಗಳ ಅಕ್ರಮ ಮರಲು ಸಾಗಾಟವನ್ನು ಪತ್ತೆಹಚ್ಚಲು

15 ದಿನಗಳಲ್ಲಿ ಮರಳು ಪರವಾನಗಿ ಹಾಗೂ ಅಕ್ರಮ ಗಣಿಗಾರಿಕೆ ಪತ್ತೆಗೆ 196 ಸಿಸಿ ಟಿವಿ ಅಳವಡಿಕೆ ➤ ಸಚಿವ ಸಿ.ಸಿ ಪಾಟೀಲ್ Read More »

ಕರಾವಳಿ, ಕರ್ನಾಟಕ

ನವಜಾತ ಶಿಶುವನ್ನು ಇಯರ್ ಫೋನ್ ವೈರ್ ಬಿಗಿದು ಹತ್ಯೆ..! ➤ ಪಾಪಿ ತಾಯಿಯ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ. 07. ನವಜಾತ ಶಿಶುವೊಂದನ್ನು ಕುತ್ತಿಗೆಗೆ ಇಯರ್ ಫೋನ್ ಬಿಗಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯನ್ನು ಬಂಧಿಸಿದ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಸಂಮೀಪದ ಚೇಡಕ್ಕಲ್ ಎಂಬಲ್ಲಿ ಬೆಳಕಿಗೆ ಬಂದಿದೆ. ಆರೋಪಿ ತಾಯಿಯನ್ನು ಶಹೀನಾ ಎನ್ನಲಾಗಿದೆ. ಡಿ. 16ರಂದು ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಮಗುವಿಗೆ ಜನ್ಮ ನೀಡಿದ್ದಾರೆಂದು ವೈದ್ಯರು ತಿಳಿಸಿದ ನಂತರ ಮನೆಯಲ್ಲಿ ಹುಡುಕಾಡಿದಾಗ ಮಂಚದ ಕೆಳಗಡೆ ಮಗುವಿನ

ನವಜಾತ ಶಿಶುವನ್ನು ಇಯರ್ ಫೋನ್ ವೈರ್ ಬಿಗಿದು ಹತ್ಯೆ..! ➤ ಪಾಪಿ ತಾಯಿಯ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷ್ಣ ಮೃಗಗಳ ಮೇಲೆ ಬೀದಿನಾಯಿಗಳ ದಾಳಿ ➤ ನಾಲ್ಕು ಕೃಷ್ಣಮೃಗಗಳು ಮೃತ್ಯು

(ನ್ಯೂಸ್ ಕಡಬ) newskadaba.com ಪುಣೆ, ಜ. 07. ಬೀದಿನಾಯಿಗಳ ದಾಳಿಗೆ ನಾಲ್ಕು ಕೃಷ್ಣಮೃಗಗಳು ಬಲಿಯಾದ ಘಟನೆ ಪುಣೆ ರಾಜೀವ್ ಗಾಂಧಿ ಮೃಗಾಲಯದಲ್ಲಿ ನಡೆದಿದೆ. ಬೀದಿನಾಯಿಗಳು ಕಣ್ತಪ್ಪಿಸಿ ಮೃಗಾಲಯಕ್ಕೆ ಬಂದು ಕೃಷ್ಣಮೃಗಗಳಿರುವ ಆವರಣದೊಳಕ್ಕೆ ಹೊಕ್ಕಿವೆ. ಘಟನೆಯಲ್ಲಿ ನಾಲ್ಕು ಕೃಷ್ಣ ಮೃಗಗಳು ಮೃತಪಟ್ಟು ಒಂದು ಕೃಷ್ಣಮೃಗ ನಾಯಿ ಕಚ್ಚಿದ್ದರಿಂದ ತೀವ್ರತರದ ಗಾಯಗೊಂಡಿದೆ.

ಕೃಷ್ಣ ಮೃಗಗಳ ಮೇಲೆ ಬೀದಿನಾಯಿಗಳ ದಾಳಿ ➤ ನಾಲ್ಕು ಕೃಷ್ಣಮೃಗಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟಿ ಶ್ವೇತಾ ಕುಮಾರಿಗೆ 14 ದಿನಗಳ ನ್ಯಾಯಾಂಗ ಬಂಧನ..!

(ನ್ಯೂಸ್ ಕಡಬ) newskadaba.com ಮುಂಬೈ, ಜ. 07. ಡ್ರಗ್ ಪೆಡ್ಲರ್ಗಳೊಂದಿಗೆ ನಿಕಟ ನಂಟು ಹೊಂದಿದ್ದ ಆರೋಪದಲ್ಲಿ ಬಂಧನದಲ್ಲಿದ್ದ ನಟಿ ಶ್ವೇತಾ ಕುಮಾರಿಗೆ ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ವಿಧಿಸಿದೆ. ಶ್ವೇತಾ ಕುಮಾರಿ ಮುಂಬೈನ ಹೊಟೇಲ್‌ನಲ್ಲಿ ಡ್ರಗ್ ಪೆಡ್ಲರ್ ಜತೆ ತಂಗಿರುವ ಖಚಿತ ಮಾಹಿತಿ ಲಭಿಸಿದ ಬೆನ್ನಲ್ಲೇ ಎನ್‌.ಸಿಬಿ ಅಧಿಕಾರಿಗಳು ದಾಳಿ ನಡೆಸಿ 400 ಗ್ರಾಂ ಡ್ರಗ್ ಸಮೇತ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಮತ್ತು ಶ್ವೇತಾ ಅವರನ್ನು ವಶಕ್ಕೆ ಪಡೆದಿದ್ದರು.

ನಟಿ ಶ್ವೇತಾ ಕುಮಾರಿಗೆ 14 ದಿನಗಳ ನ್ಯಾಯಾಂಗ ಬಂಧನ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವೈದ್ಯರ ವಸತಿಗೃಹಕ್ಕೆ ನುಗ್ಗಿದ ಚಿರತೆ…!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 07. ಇಲ್ಲಿನ ವೈದ್ಯರ ವಸತಿಗೃಹವೊಂದರಲ್ಲಿ ಚಿರತೆಯೊಂದು ಕಾಣಸಿಕ್ಕಿದ್ದು, ಕಟ್ಟಡದ ಮೊದಲ ಅಂತಸ್ತಿನಲ್ಲಿ ಚಿರತೆ ಓಡಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ವೈದ್ಯರ ವಸತಿಗೃಹಕ್ಕೆ ನುಗ್ಗಿದ ಚಿರತೆ…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಹೊರರೋಗಿ ಚಿಕಿತ್ಸಾ ವಿಭಾಗಕ್ಕೆ ಶಾಸಕರಿಂದ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ‌. 07. ಕುಕ್ಕೇ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ 1.11ಕೋಟಿ ರೂ. ವೆಚ್ಚದಲ್ಲಿ ಹೊರರೋಗಿ ವಿಬಾಗದ ಚಿಕಿತ್ಸಾ ಘಟಕದ ಶಂಕುಸ್ಥಾಪನೆಯನ್ನ ಶಾಸಕ ಎಸ್.ಅಂಗಾರ ಅವರು ಇಂದು ನೆರವೇರಿಸಿದರು. ಇದರಲ್ಲಿ 4 ಹಾಸಿಗೆಗಳ ಹೊರ ರೋಗಿ ವಿಭಾಗ, ಪ್ರಯೋಗಾಲಯ, ನಿರೀಕ್ಷಣಾ ಕೊಠಡಿ ವೈದ್ಯಾಧಿಕಾರಿಗಳ ಕೊಠಡಿ, ಎಂಟ್ರೆನ್ಸ್ ಲ್ಯಾಬ್, ರಿಸೆಪ್ಷನ್ ಕೌಂಟರ್, ಡ್ರೆಸ್ಸಿಂಗ್ ರೂಂ, ಗಂಡಸರ ಮತ್ತು ಹೆಂಗಸರ ಶೌಚಾಲಯಯದ ವ್ಯವಸ್ಥೆ ಇರಲಿದೆ. ಈ ಸಂದರ್ಭದಲ್ಲಿ ಅಭಿವೃದ್ದಿ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್ ಪ್ರಸಾದ್, ಮನೋಹರ್ ರೈ,

ಸುಬ್ರಹ್ಮಣ್ಯ: ಹೊರರೋಗಿ ಚಿಕಿತ್ಸಾ ವಿಭಾಗಕ್ಕೆ ಶಾಸಕರಿಂದ ಶಂಕುಸ್ಥಾಪನೆ Read More »

ಕರಾವಳಿ, ಕರ್ನಾಟಕ

ತಲಪಾಡಿ ಅಂಡರ್ ಪಾಸ್ ಗೆ ನುಗ್ಗಿದ ನೀರು ➤ ಸ್ಥಳೀಯರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 07. ತಲಪಾಡಿ ರಾ.ಹೆದ್ದಾರಿಯ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿಯಿರುವ ಅಂಡರ್ ಪಾಸ್ ನಲ್ಲಿ ಬುಧವಾರ ಸುರಿದ ಬಾರೀ ಮಳೆಗೆ ನೀರು ತುಂಬಿದ್ದರಿಂದ ಜನಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣವೆ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ‌.

ತಲಪಾಡಿ ಅಂಡರ್ ಪಾಸ್ ಗೆ ನುಗ್ಗಿದ ನೀರು ➤ ಸ್ಥಳೀಯರಿಂದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ತನ್ನೆಲ್ಲಾ ನಿಯಮಗಳನ್ನು ಅಪ್ಡೇಟ್ ಮಾಡಿದ ವಾಟ್ಸ್ ಆಪ್ ➤ ಒಪ್ಪದೇ ಇದ್ದಲ್ಲಿ ಅಕೌಂಟ್ ಡಿಲೀಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 07.: ವಾಟ್ಸಾಪ್ ತನ್ನ ಹೊಸ ನಿಯಮಗಳು ಮತ್ತು ನೀತಿಯನ್ನು ನವೀಕರಿಸಿದ್ದು, ಬಳಕೆದಾರರು ಇದನ್ನು ಒಪ್ಪಿಕೊಳ್ಳಬೇಕು ಅಥವಾ ಇಲ್ಲದಿದ್ದರೆ ಅವರು ತಮ್ಮ ಖಾತೆಯನ್ನು ಅಳಿಸಬೇಕಾಗಬಹುದು ಎಂದು ಸಂಸ್ಥೆ ಹೇಳಿದೆ.   ನವೀಕರಿಸಿದ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಫೆಬ್ರವರಿ 8 ರಿಂದ ಜಾರಿಗೆ ತರಲಿದೆ. ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ “ನೀವು ನಮ್ಮ ಸೇವೆಗಳನ್ನು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ಸಾಧನ ಮತ್ತು ಸಂಪರ್ಕ-ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದು ಹೇಳಿದೆ. ಇದರಲ್ಲಿ ಹಾರ್ಡ್‌ವೇರ್

ತನ್ನೆಲ್ಲಾ ನಿಯಮಗಳನ್ನು ಅಪ್ಡೇಟ್ ಮಾಡಿದ ವಾಟ್ಸ್ ಆಪ್ ➤ ಒಪ್ಪದೇ ಇದ್ದಲ್ಲಿ ಅಕೌಂಟ್ ಡಿಲೀಟ್ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಉಡುಪಿ, ಜ. 07. ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ರಾ.ಹೆ. 66ರ ಕಟಪಾಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಉಡುಪಿ: ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ
Scroll to Top