News Kadaba Desk

ಮಡ್ಯಡ್ಕ: ಕೊರೋನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಹಿನ್ನೆಲೆ ➤ ಸಹಾಯ್ ತಂಡದಿಂದ ಅಗತ್ಯ ಸಾಮಾಗ್ರಿಗಳ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಭಾಗದಲ್ಲಿ ಕೊರೋನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಆದ ಮನೆಗಳಿಗೆ SYS, SSF ಹಾಗೂ KMJ ನೇತೃತ್ವದ “ಸಹಾಯ್” ತಂಡದಿಂದ ಅಗತ್ಯ ವಸ್ತುಗಳ ಸಾಮಗ್ರಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ SYS ನಾಯಕರಾದ ಅಬ್ಬಾಸ್ ಕೋಡಿಂಬಾಳ, ಅಬೂಬಕ್ಕರ್ ಪಾಲಪ್ಪೆ, ಅಬ್ದುಲ್ ಖಾದರ್, ಲತೀಫ್ ಅಜ್ಜಿಕಟ್ಟೆ, SSF ನಾಯಕರಾದ ಝಿಯಾರ್ ಕೋಡಿಂಬಾಳ, ನಯಾಜ್ ಕಜೆಮೂಲೆ, ಶಾಫಿ 7 ಸ್ಟಾರ್ ಮೊದಲಾದವರು ಉಪಸ್ಥಿತರಿದ್ದರು.      

ಮಡ್ಯಡ್ಕ: ಕೊರೋನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಹಿನ್ನೆಲೆ ➤ ಸಹಾಯ್ ತಂಡದಿಂದ ಅಗತ್ಯ ಸಾಮಾಗ್ರಿಗಳ ವಿತರಣೆ Read More »

ಕರಾವಳಿ

ಮಂಗಳೂರು: ಜುಲೈ 1ರಿಂದ ಕೆಲವು ಖಾಸಗಿ ಹಾಗೂ ಸಿಟಿ ಬಸ್‌ಗಳ ಸೇವೆ ಆರಂಭ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 25. ಜುಲೈ 1 ರಿಂದ ನಿಗದಿತ ಸಂಖ್ಯೆಯ ಖಾಸಗಿ ಹಾಗೂ ಸಿಟಿ ಬಸ್ ಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಮೂಡುಬಿದ್ರೆಯಲ್ಲಿ ನಡೆದ ಮಾಲೀಕರ ಸಂಘದ ಸಭೆಯಲ್ಲಿ ಹೆಚ್ಚಿನ ಬಸ್‌ ಮಾಲೀಕರು ಬಸ್ ಸೇವೆಗಳನ್ನು ಪ್ರಾರಂಭಿಸಲು ಈ ಸಂದರ್ಭದಲ್ಲಿ ಒಪ್ಪಿಕೊಂಡರು. ಕೆಲವು ಖಾಸಗಿ ಬಸ್ ಮತ್ತು ಮಂಗಳೂರು ನಗರ ಬಸ್ಸುಗಳು ಜುಲೈ 1 ರಿಂದ ಸೀಮಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಮತ್ತು

ಮಂಗಳೂರು: ಜುಲೈ 1ರಿಂದ ಕೆಲವು ಖಾಸಗಿ ಹಾಗೂ ಸಿಟಿ ಬಸ್‌ಗಳ ಸೇವೆ ಆರಂಭ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಕೆಎಸ್ಸಾರ್ಟಿಸಿಯಿಂದ ಹಣ ಲೂಟಿ ➤ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕೆಎಸ್ಸಾರ್ಟಿಸಿ- ಪ್ರಯಾಣಿಕರ ಅಳಲು

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 25. ಕೊರೋನಾ ಲಾಕ್ ಡೌನ್ ಬಳಿಕ ಜಿಲ್ಲಾದ್ಯಂತ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಗೊಂಡಿರುವ ಬೆನ್ನಲ್ಲೇ ಕೆಎಸ್ಸಾರ್ಟಿಸಿಯು ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಡುವೆ ಪೈಪೋಟಿ ನಡೆಯುತ್ತಿದ್ದು, ಈ ಹಿಂದೆ ಬೀರಿಯಿಂದ ತಲಪಾಡಿಗೆ ಖಾಸಗಿ ಬಸ್ ಟಿಕೆಟ್ ದರ 14 ರೂಪಾಯಿ ಪಡೆದರೆ, ಇದಕ್ಕೆ ಪೈಪೋಟಿ ನೀಡುತ್ತಿದ್ದ KSRTC ಬಸ್ 10 ರೂಪಾಯಿ ಪಡೆಯುತ್ತಿತ್ತು. ಇತ್ತೀಚೆಗೆ ಕೊರೋನಾ ಲಾಕ್‌ಡೌನ್ ನಿಂದ

ಮಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಕೆಎಸ್ಸಾರ್ಟಿಸಿಯಿಂದ ಹಣ ಲೂಟಿ ➤ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕೆಎಸ್ಸಾರ್ಟಿಸಿ- ಪ್ರಯಾಣಿಕರ ಅಳಲು Read More »

ಕರಾವಳಿ, ಕರ್ನಾಟಕ

ಕಡಬ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಕಾರುಗಳೆರಡು ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಸಮೀಪದ ಕುಂಡಾಜೆ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಆಲ್ಟೋ 800 ಹಾಗೂ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬಲೆನೋ ಕಾರಿನ ನಡುವೆ ಕುಂಡಾಜೆ ಸಮೀಪದ ಕಿರು ಸೇತುವೆಯ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ

ಕಡಬ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಗಂಭೀರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಇಂದು ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಫ್ಯೂ ➤ ಯಾವುದಕ್ಕೆಲ್ಲಾ ವಿನಾಯಿತಿ ಇದೆ..?

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ.25. ವೀಕೆಂಡ್ ಕರ್ಪ್ಯೂ ಹಿನ್ನೆಲೆ ಇಂದಿನಿಂದ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ತಿಳಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಸಂದರ್ಭ ಹಾಲು ವಿತರಣಾ ಕೇಂದ್ರ, ಆಸ್ಪತ್ರೆ ಹಾಗೂ ಕೆಲವು ಸರ್ಕಾರಿ ಕಚೇರಿಗಳನ್ನು ಮಾತ್ರ ತೆರೆಯಲು ಅವಕಾಶವಿದ್ದು, ಇತರ ಯಾವುದೇ ಚಟುವಟಿಕೆಗಳಿರುವುದಿಲ್ಲ. ಸರ್ಕಾರಿ ಕಛೇರಿಗಳಿಗೆ ರಜೆ ಇರುವುದರಿಂದ ಜನರು ಓಡಾಡುವ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ವೀಕೆಂಡ್ ಕರ್ಪ್ಯೂ ವೇಳೆ

ಇಂದು ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಫ್ಯೂ ➤ ಯಾವುದಕ್ಕೆಲ್ಲಾ ವಿನಾಯಿತಿ ಇದೆ..? Read More »

ಕರಾವಳಿ, ಕರ್ನಾಟಕ

ಕಡಬ: ಮನೆಯಿಂದ ಅಡಿಕೆ ಕಳವು ಪ್ರಕರಣ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಮನೆಯಲ್ಲಿರಿಸಿದ್ದ ಅಡಿಕೆ ಚೀಲವನ್ನು ಪಕ್ಕದ ಮನೆಯಾತ ಕದ್ದೊಯ್ದ ಘಟನೆ ಠಾಣಾ ವ್ಯಾಪ್ತಿಯ ಹಳೆನೇರಂಕಿ ಎಂಬಲ್ಲಿ ಬುಧವಾರದಂದು ನಡೆದಿದೆ. ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿ ಸುಕೇಶ ಎಂಬವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆಯನ್ನು ಇರಿಸಿದ್ದರು ಎನ್ನಲಾಗಿದೆ. ಬುಧವಾರದಂದು ಮನೆಮಂದಿ ತೋಟಕ್ಕೆ ತೆರಳಿದ್ದ ವೇಳೆ ಪಕ್ಕದ ಮನೆಯ ಪರಮೇಶ್ವರ್ ಎಂಬಾತ ಒಂದು ಗೋಣಿ ಚೀಲ ಅಡಿಕೆಯನ್ನು ಎಗರಿಸಿರುವುದಾಗಿ ಸುಕೇಶ ಕಡಬ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ

ಕಡಬ: ಮನೆಯಿಂದ ಅಡಿಕೆ ಕಳವು ಪ್ರಕರಣ ➤ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಧನ ಭೀತಿಯಲ್ಲಿ ಸಿಡಿ ಲೇಡಿ ➤ ಯುವತಿಯ ಮನವಿಯನ್ನು ನಿರಾಕರಿಸಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.24. ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ತನ್ನನ್ನು ಬಂಧಿಸದಂತೆ ಎಸ್‌ಐಟಿಗೆ ನಿರ್ದೇಶಿಸಬೇಕೆಂಬ ಸಂತ್ರಸ್ತ ಯುವತಿಯ ಮನವಿಯನ್ನು ಹೈಕೋರ್ಟ್‌ ನಿರಾಕರಿಸಿದ್ದು, ಇದೀಗ ಸಿಡಿ ಲೇಡಿಗೆ ಬಂಧನ ಭೀತಿ ಎದುರಾಗಿದೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಪಡಿಸುವಂತೆ ಕೋರಿ ಯುವತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕ ಸದಸ್ಯಪೀಠ ಯುವತಿಯ

ಬಂಧನ ಭೀತಿಯಲ್ಲಿ ಸಿಡಿ ಲೇಡಿ ➤ ಯುವತಿಯ ಮನವಿಯನ್ನು ನಿರಾಕರಿಸಿದ ಹೈಕೋರ್ಟ್ Read More »

ಕರ್ನಾಟಕ

ಮನೆಯಲ್ಲಿದ್ದ ಅಡಿಕೆ ಚೀಲವನ್ನು ಕದ್ದೊಯ್ದ ಪಕ್ಕದ ಮನೆಯಾತ ➤ ಪೊಲೀಸರಿಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಮನೆಯಲ್ಲಿರಿಸಿದ್ದ ಅಡಿಕೆ ಚೀಲವನ್ನು ಪರಿಚಿತ ವ್ಯಕ್ತಿಯೋರ್ವ ಕದ್ದೊಯ್ದ ಘಟನೆ ಠಾಣಾ ವ್ಯಾಪ್ತಿಯ ಹಳೆನೇರಂಕಿ ಎಂಬಲ್ಲಿ ಬುಧವಾರದಂದು ನಡೆದಿದೆ. ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿ ಸುಕೇಶ ಎಂಬವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆಯನ್ನು ಇರಿಸಿದ್ದರು ಎನ್ನಲಾಗಿದೆ. ಬುಧವಾರದಂದು ಮನೆಮಂದಿ ತೋಟಕ್ಕೆ ತೆರಳಿದ್ದ ವೇಳೆ ಪಕ್ಕದ ಮನೆಯ ಪರಮೇಶ್ವರ್ ಎಂಬಾತ ಒಂದು ಗೋಣಿ ಚೀಲ ಅಡಿಕೆಯನ್ನು ಎಗರಿಸಿರುವುದಾಗಿ ಸುಕೇಶ ಕಡಬ ಠಾಣೆಗೆ ದೂರು ನೀಡಿದ್ದಾರೆ.    

ಮನೆಯಲ್ಲಿದ್ದ ಅಡಿಕೆ ಚೀಲವನ್ನು ಕದ್ದೊಯ್ದ ಪಕ್ಕದ ಮನೆಯಾತ ➤ ಪೊಲೀಸರಿಗೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ➤ ಇಂದು 13 ಮಂದಿ ಮೃತ್ಯು, 538 ಮಂದಿಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಗೊಂಡಿದ್ದರೂ, ಕೊರೋನಾ‌ ಅಟ್ಟಹಾಸ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಒಂದೇ ದಿನ 538 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 13 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಒಟ್ಟು 1093 ಮಂದಿ ಕೊರೋನಾ ಸೋಂಕಿನಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ.      

ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ➤ ಇಂದು 13 ಮಂದಿ ಮೃತ್ಯು, 538 ಮಂದಿಗೆ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹದಿನೇಳು ವರ್ಷದ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ ➤ ಒಂದೇ ದಿನ ತಂದೆ-ಮಗನ ದಾರುಣ ಅಂತ್ಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.23. ತನ್ನ ಹದಿನೇಳು ವರ್ಷದ ಪುತ್ರನನ್ನೇ ಕೊಲೆಗೈದ ತಂದೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಬಾಬು ನಾಯ್ಕ್ ಎಂಬವರ ಪುತ್ರ ಸಾತ್ವಿಕ್ ಎಂದು ಗುರುತಿಸಲಾಗಿದೆ. ಬುಧವಾರದಂದು ಪುಂಜಾಲಕಟ್ಟೆ ಭಜನಾ ಮಂದಿರದ ಬಳಿ ತಂದೆ ಮತ್ತು ಮಗನ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಕೋಪಗೊಂಡ ತಂದೆ ಮಗನನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ

ಹದಿನೇಳು ವರ್ಷದ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ ➤ ಒಂದೇ ದಿನ ತಂದೆ-ಮಗನ ದಾರುಣ ಅಂತ್ಯ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top