News Kadaba Desk

ರೈಲಿನಡಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)Newskadaba.com ಚನ್ನಪಟ್ಟಣ, ಜೂ. 27. ಯುವಕನೋರ್ವ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನಪಟ್ಟಣ ಹೊರವಲಯದ ತಿಟ್ಟಮಾರನಹಳ್ಳಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೈದ ಯುವಕನನ್ನು ಸುಖೇಶ್ (19) ಎಂದು ಗುರುತಿಸಲಾಗಿದೆ. ಈತ ಸುಖೇಶ್ ಮೈಸೂರಿನ ಕಾಲೇಜೊಂದರಲ್ಲಿ ಎಲ್.ಎಲ್.ಬಿ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ಚನ್ನಪಟ್ಟಣಕ್ಕೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಈತ ಮೈಸೂರು ಕಡೆಯಿಂದ ಬಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಉಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲಿನಡಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤➤ ವಿಶೇಷ ಲೇಖನ ಅಪರಿಚಿತ ವ್ಯಕ್ತಿಗಳ ವಿಡಿಯೋ ಕರೆಗೆ ಉತ್ತರಿಸುವ ಮುನ್ನ ಇದನ್ನು ಓದಿ… ➤ ಹನಿಟ್ರ್ಯಾಪ್ ಗೆ ಬಲಿಯಾಗಿ ಹಣ ಕಳೆದುಕೊಳ್ಳಬೇಡಿ ✍? ಅಬ್ದುಲ್ ರಝಾಕ್ ಮರ್ಧಾಳ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜೂ. 27. ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರಿಗೆ ಫೇಸ್‌ಬುಕ್‌ ಹಾಗೂ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಹೊಸ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಇವತ್ತು ನನ್ನ ಸ್ನೇಹಿತನಿಗೆ ಫೇಸ್‌ಬುಕ್‌ನಲ್ಲಿ ಅಪರಿಚಿತ ಪೂಜಾ ಕುಮಾರಿ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಹಾಗೂ ಮೆಸೇಂಜರ್ ಮೂಲಕ “ಹಾಯ್” ಎಂಬ ಮೆಸೇಜ್ ಬಂತು. ಇದಕ್ಕೆ ಉತ್ತರಿಸಿದ ಐದೇ ನಿಮಿಷದಲ್ಲಿ ವಾಟ್ಸಾಪ್ ಮುಖಾಂತರ ಆತನಿಗೆ ವಿಡಿಯೋ ಕಾಲ್ ಬರುತ್ತೆ, ವಿಡಿಯೋ ಕಾಲ್ ಸ್ವೀಕರಿಸಿದಾಗ ನೀಲಿಚಿತ್ರ

➤➤ ವಿಶೇಷ ಲೇಖನ ಅಪರಿಚಿತ ವ್ಯಕ್ತಿಗಳ ವಿಡಿಯೋ ಕರೆಗೆ ಉತ್ತರಿಸುವ ಮುನ್ನ ಇದನ್ನು ಓದಿ… ➤ ಹನಿಟ್ರ್ಯಾಪ್ ಗೆ ಬಲಿಯಾಗಿ ಹಣ ಕಳೆದುಕೊಳ್ಳಬೇಡಿ ✍? ಅಬ್ದುಲ್ ರಝಾಕ್ ಮರ್ಧಾಳ Read More »

ಕರ್ನಾಟಕ, ಕ್ರೈಮ್ ನ್ಯೂಸ್

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ವತಿಯಿಂದ ವಿವಿಧ ಸರಕಾರಿ ಅಧಿಕಾರಿಗಳಿಗೆ ಮನವಿ

(ನ್ಯೂಸ್ ಕಡಬ) Newskadaba.com ಬಳ್ಳಾರಿ, ಜೂ. 27. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ “ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ಅಭಿಯಾನದ ಭಾಗವಾಗಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮತ್ತು ಹೊಸಪೇಟೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿ ಹಾಗೂ ಸಿರುಗುಪ್ಪ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು.

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ವತಿಯಿಂದ ವಿವಿಧ ಸರಕಾರಿ ಅಧಿಕಾರಿಗಳಿಗೆ ಮನವಿ Read More »

ಕರ್ನಾಟಕ

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಂಬಂಧಿತ ಇಲಾಖೆಗಳಿಗೆ ಮನವಿ

(ನ್ಯೂಸ್ ಕಡಬ) Newskadaba.com ಉಡುಪಿ, ಜೂ. 27. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ “ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ಎಂಬ ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು, ಕಾರ್ಮಿಕ ಇನ್ಸ್‌ಪೆಕ್ಟರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು. ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರ್ಕಾರ

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಂಬಂಧಿತ ಇಲಾಖೆಗಳಿಗೆ ಮನವಿ Read More »

ಕರಾವಳಿ, ಕರ್ನಾಟಕ

ಆತೂರು: ಸಮಸ್ತ ಸ್ಥಾಪಕ ದಿನಾಚರಣೆ

(ನ್ಯೂಸ್ ಕಡಬ) Newskadaba.com ಆತೂರು, ಜೂ. 27. ಸಮಸ್ತ ಸ್ಥಾಪಕ ದಿನದ ಪ್ರಯುಕ್ತ SKSSF ಆತೂರು ಶಾಖೆ ಹಾಗೂ ಆತೂರು ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಶನಿವಾರದಂದು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು. ಧ್ವಜಾರೋಹಣವನ್ನು ಆತೂರು ಮದ್ರಸ ಮ್ಯಾನೇಜ್ ಮೆಂಟ್ ಹಾಗೂ ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಝಾಕ್ ನೆರೆವೇರಿಸಿದರು. ಆತೂರು ರೇಂಜ್ ಇದರ ಪ್ರಧಾನ ಕಾರ್ಯದರ್ಶಿ, ಕೆ ಎಂ ಸಿದ್ದಿಕ್ ಫೈಝಿ ದುಆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ

ಆತೂರು: ಸಮಸ್ತ ಸ್ಥಾಪಕ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಕಡಬ: ಕೊರೋನಾ ಲಸಿಕಾ ಅಭಿಯಾನ ➤ ಜೂ.28ರಂದು ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಸೋಮವಾರ (ಜೂ.28) ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ಕೋವಿಶೀಲ್ಡ್ ದೊರೆಯಲಿದೆ. ಶಿಕ್ಷಕರಿಗೆ 200 ಡೋಸ್ ಮತ್ತು ಡಿಗ್ರೀ ಮೇಲ್ಪಟ್ಟ ಅಥವಾ ತತ್ಸಮಾನ ವಿದ್ಯಾಭ್ಯಾಸಗೈಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ 100 ಡೋಸ್ ಲಸಿಕೆ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಲಭ್ಯವಿರಲಿದೆ. ಲಸಿಕೆ ತೆಗೆದುಕೊಳ್ಳಲು ಆಗಮಿಸುವವರು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್ ತರುವಂತೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|

ಕಡಬ: ಕೊರೋನಾ ಲಸಿಕಾ ಅಭಿಯಾನ ➤ ಜೂ.28ರಂದು ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ Read More »

ಕರಾವಳಿ

ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜೂ. 26. ಶುಕ್ರವಾರ ಮಧ್ಯರಾತ್ರಿಯಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಮಧ್ಯರಾತ್ರಿಯಲ್ಲಿಯೇ ಅರಣ್ಯಾಧಿಕಾರಿಗಳ ಜೊತೆ ದಾಳಿ ನಡೆಸಿದ ತಹಶೀಲ್ದಾರ್ ಮರಳುಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ಜಿಲ್ಲಾಡಳಿತದ ಆದೇಶದ ಪ್ರಕಾರ ಸುರಕ್ಷತಾ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಗೊಳಿಸಿದ ದೂರದವರೆಗೆ ಮರಳುಗಾರಿಕೆ ನಡೆಸಬಾರದು, ಆದರೂ ಪಾಣೆಮಂಗಳೂರಿನ ಹಳೆ ಸೇತುವೆಯಿಂದ ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ಮೆಷಿನ್ ಬಳಸಿ ಮರಳು ತೆಗೆಯುವುದರ ಕುರಿತು ದೊರೆತ ಖಚಿತ ಮಾಹಿತಿಯ

ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ Read More »

ಕರಾವಳಿ, ಕರ್ನಾಟಕ

ಕಡಬ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಲವು ವಾಹನಗಳು ಸೀಝ್ ➤ ಅನಗತ್ಯ ರಸ್ತೆಗಿಳಿಯದಂತೆ ಎಸ್ಐ ರುಕ್ಮನಾಯ್ಕ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಈ ವೇಳೆ ಕರ್ಫ್ಯೂ ಉಲ್ಲಂಘಿಸಿದ ವಾಹನ ಚಾಲಕರಿಗೆ ಕಡಬ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶುಕ್ರವಾರ ಸಂಜೆಯಿಂದ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಸೀಝ್ ಮಾಡಿ ದಂಡ ವಿಧಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಝ್ ಮಾಡಲಾಗುವುದು ಎಂದು ಕಡಬ ಠಾಣಾ ಎಸ್ ರುಕ್ಮನಾಯ್ಕ್ ಮನವಿ ಮಾಡಿದ್ದಾರೆ.      

ಕಡಬ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಲವು ವಾಹನಗಳು ಸೀಝ್ ➤ ಅನಗತ್ಯ ರಸ್ತೆಗಿಳಿಯದಂತೆ ಎಸ್ಐ ರುಕ್ಮನಾಯ್ಕ್ ಮನವಿ Read More »

ಕರಾವಳಿ

ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗಡೆ ಸಿಲುಕಿದ ಮಗುವಿನ ತಲೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಞಂಗಾಡು, ಜೂ. 25. ಮಗುವೊಂದು ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗೆ ತಲೆ ಸಿಲುಕಿ ಹೊರತೆಗೆಯಲು ಒದ್ದಾಡಿದ ಘಟನೆ ನಡೆದಿದೆ. ಕಾಞಂಗಾಡು ತೈಕಡಪ್ಪುರ ನಿವಾಸಿ ನಫೀಸಾ ಎಂಬವರ ಒಂದೂವರೆ ವರ್ಷದ ಮಗು ಸ್ಟೀಲ್ ಪಾತ್ರೆ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಪಾತ್ರೆಯೊಳಗೆ ತನ್ನ ತಲೆಯನ್ನು ತುರುಕಿಸಿಕೊಂಡಿದೆ. ನಂತರ ಮನೆಯವರು ಮಗುವಿನ ತಲೆಯನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಬಂದು ಮಗುವನ್ನು ಅಗ್ನಿಶಾಮಕ ದಳದ ಕಛೇರಿಗೆ ಕೊಂಡೊಯ್ದು, ಅಲ್ಲಿ ಯಂತ್ರದ ಸಹಾಯದಿಂದ ಪಾತ್ರೆಯನ್ನು

ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗಡೆ ಸಿಲುಕಿದ ಮಗುವಿನ ತಲೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ ವಿಖಾಯ ತಂಡದಿಂದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) Newskadaba.com ಸುಳ್ಯ, ಜೂ. 25. ಸುಳ್ಯ ವಲಯ ವಿಖಾಯ ತಂಡ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸಂಪಾಜರ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡಯಿತು. ಈ ಕಾರ್ಯಕ್ರಮಕ್ಕೆ ದುಆ ಮೂಲಕ ಚಾಲನೆ ನೀಡಿದ ಕಲ್ಲುಗುಂಡಿ ಜುಮಾ ಮಸೀದಿಯ ಖತೀಬರಾದ ನಯೀಮ್ ಫೈಝಿ ಮುಕ್ವೆ ಸ್ವಚ್ಛತೆ ಇಸ್ಲಾಮಿನ ಬಾಗವಾಗಿದೆ ಎಂದರು. ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಸೆಂಟ್ಯಾರ್ ಮಾತನಾಡಿ, ವಿಖಾಯ ತಂಡವು ಜಿಲ್ಲೆಯಲ್ಲಿ ಮಾಡುತ್ತಿರುವ ಸೇವೆಯ ಕುರಿತು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಳ್ಯ ವಿಖಾಯ ತಂಡದಿಂದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ
Scroll to Top