News Kadaba Desk

ಇಸ್ರೇಲ್ ಪ್ರಯಾಣಿಕರಿಗೆ ಸಂಕಷ್ಟ: ಮೇ 31ರವರೆಗೆ ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ

(ನ್ಯೂಸ್‌ ಕಡಬ) newskadaba.com,  ಎ.06: ಮೇ 31ರ ವರೆಗೆ ಹೊಸದಿಲ್ಲಿ-ಟೆಲ್ ಅವಿವ್ ಮಾರ್ಗದಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾದ ಕಾರ್ಯನಿರ್ವಹಣಾಧಿಕಾರಿ ರವಿವಾರ ದೃಢಪಡಿಸಿದ್ದಾರೆ. ಹೆಚ್ಚಿನ ಪ್ರಮುಖ ವಿಮಾನ ಯಾನ ಸಂಸ್ಥೆಗಳು ಟೆಲ್ ಅವೀವ್ ಮಾರ್ಗದಲ್ಲಿ ತಮ್ಮ ವಿಮಾನಗಳ ಸಂಚಾರಗಳನ್ನು ರದ್ದುಗೊಳಿಸಿವೆ. ಆದರೆ, ಇಐ ಎಐ, ಇಸ್ರಾಏರ್, ಆರ್ಕಿಯಾ ಹಾಗೂ ಏರ್ ಹೈಫಾದಂತಹ ಇಸ್ರೇಲ್‌ನ ವಿಮಾನ ಯಾನ ಸಂಸ್ಥೆಗಳ ವಿಮಾನಗಳು ಮಾತ್ರ ತೀವ್ರ ನಿರ್ಬಂಧಗಳ ಅಡಿಯಲ್ಲಿ ಸಂಚರಿಸುತ್ತಿವೆ. ವಿಮಾನಗಳ ಸಂಚಾರ ಸ್ಥಗಿತಗೊಳಿಸಿರುವುದು ಇಸ್ರೇಲ್‌ನಲ್ಲಿ ವಾಸಿಸುವ 40 […]

ಇಸ್ರೇಲ್ ಪ್ರಯಾಣಿಕರಿಗೆ ಸಂಕಷ್ಟ: ಮೇ 31ರವರೆಗೆ ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ Read More »

ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಸ್.ಟಿ ವಿದ್ಯಾರ್ಥಿಗಳಿಗೆ 6 ನೇ ತರಗತಿ ಪ್ರವೇಶಾವಕಾಶ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newsksdaba.com ಏ. 06. 2026-27ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಾವಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಪ್ರತಿಷ್ಟಿತ ಶಾಲೆಗಳಲ್ಲಿ ದಾಖಲಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು  ಮೇ 4 ಕೊನೆಯ  ದಿನ. ಸೇರ್ಪಡೆಗೊಳಿಸುವ ಪ್ರತಿಷ್ಟಿತ ಶಾಲಾ ವಿವರ: 1) ಶಾರದಾ ವಿದ್ಯಾಲಯ ಕೊಡಿಯಾಲ್‍ಬೈಲ್ 2) ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ ಅಂಚೆ 3) ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ 4) ವಿಟ್ಲ

ಎಸ್.ಟಿ ವಿದ್ಯಾರ್ಥಿಗಳಿಗೆ 6 ನೇ ತರಗತಿ ಪ್ರವೇಶಾವಕಾಶ- ಅರ್ಜಿ ಆಹ್ವಾನ Read More »

ಕರಾವಳಿ

ಬಾಯಿ ಆರೋಗ್ಯ ಅವಗಣನೆ ಸಲ್ಲದು- ಬೇಸಿಗೆ ಶಿಬಿರ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಡಾ ಚೂಂತಾರು

(ನ್ಯೂಸ್ ಕಡಬ) newsksdaba.com ಏ. 06. ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನದಲ್ಲಿ ಆಯೋಜಿಸಲಾದ ಬೇಸಿಗೆ ಶಿಬಿರವು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಉತ್ತೇಜಿಸುತ್ತಿದೆ. ಶಿಬಿರದ ಎರಡನೇ ದಿನವಾದ ಏಪ್ರಿಲ್ 1ರಂದು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.   ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಸುರಕ್ಷಾ ದಂತ ಚಿಕಿತ್ಸಾಲಯದ  ದಂತ ವೈದ್ಯರು,ಆರೋಗ್ಯ ಭಾರತಿ ಮಂಗಳೂರು ಇದರ ಗೌರವ ಅಧ್ಯಕ್ಷರು,ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ (ರಿ) ಮಂಗಳೂರು ಇದರ ಕಾರ್ಯದರ್ಶಿ ಹಾಗೂ ದ.ಕ ಜಿಲ್ಲಾ ಗೃಹರಕ್ಷಕ

ಬಾಯಿ ಆರೋಗ್ಯ ಅವಗಣನೆ ಸಲ್ಲದು- ಬೇಸಿಗೆ ಶಿಬಿರ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಡಾ ಚೂಂತಾರು Read More »

ಕರಾವಳಿ

ಇಟಲಿ ಕರಾವಳಿಯಲ್ಲಿ ಭೀಕರ ಬೋಟ್ ದುರಂತ – 71 ವಲಸಿಗರು ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಎ.06: ಉತ್ತಮ ಭವಿಷ್ಯದ ಕನಸು ಹೊತ್ತು ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಪ್ರಯತ್ನಿಸುತ್ತಿದ್ದ ವಲಸಿಗರಿಗೆ ಭೀಕರ ದುರಂತ ಎದುರಾಗಿದೆ. ಇಟಲಿ ಕರಾವಳಿಯ ಸಮೀಪ ಸಂಭವಿಸಿದ ಬೋಟ್ ಅಪಘಾತದಲ್ಲಿ 71 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ಲಿಬಿಯಾದಿಂದ ಯುರೋಪ್ ಕಡೆಗೆ ಪ್ರಯಾಣಿಸುತ್ತಿದ್ದ ಈ ಬೋಟ್‌ನಲ್ಲಿ ಒಟ್ಟು 105 ಮಂದಿ ಇದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಆರಂಭವಾದ ಈ ಪ್ರಯಾಣ, ಕ್ಷಣಾರ್ಧದಲ್ಲೇ ದುಃಖಕರ ಘಟನೆಯಾಗಿ

ಇಟಲಿ ಕರಾವಳಿಯಲ್ಲಿ ಭೀಕರ ಬೋಟ್ ದುರಂತ – 71 ವಲಸಿಗರು ಕಣ್ಮರೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹೆಬ್ರಿ: ಕಾಡಾನೆ ದಾಳಿ – ಕೃಷಿ ನಾಶ ಮತ್ತು ಭೀತಿಯಲ್ಲಿ ಗ್ರಾಮಸ್ಥರು

(ನ್ಯೂಸ್‌ ಕಡಬ) newskadaba.com,  ಎ.06: ತಾಲೂಕಿನಲ್ಲಿ ಮತ್ತೆ ಆನೆ ಹೆಜ್ಜೆ ಗುರುತು ಕಂಡು ಬಂದಿದ್ದು, ನಾಡ್ಪಾಲು ಹಾಗೂ ಪೀತಬೈಲು ಎಂಬಲ್ಲಿನ ತೋಟಗಳಿಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಸಂಪೂರ್ಣ ಹಾನಿಗೊಳಿಸಿರುವ ಬಗ್ಗೆ ವರದಿಯಾಗಿದೆ. ನಾಡ್ಪಾಲು ಗ್ರಾಮದ ತೆಂಗುಮಾರ್ ಲಕ್ಷ್ಮಣ ಗೌಡ, ಆನಂದ ಗೌಡ ಹಾಗೂ ಪೀತಬೈಲು ಜಯಂತ ಗೌಡ ಎಂಬವರ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಮರಗಳು, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳು ನಾಶ ಮಾಡಿವೆ. ರಾತ್ರೋರಾತ್ರಿ ಕಬ್ಬಿನಾಲೆ ಭಾಗಗಳಲ್ಲಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿರುವುದರಿಂದ

ಹೆಬ್ರಿ: ಕಾಡಾನೆ ದಾಳಿ – ಕೃಷಿ ನಾಶ ಮತ್ತು ಭೀತಿಯಲ್ಲಿ ಗ್ರಾಮಸ್ಥರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಹಿ ಸುದ್ದಿ, ಪಿಯುಸಿವರೆಗೆ ಗಂಡು ಮಕ್ಕಳಿಗೂ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ

(ನ್ಯೂಸ್‌ ಕಡಬ) newskadaba.com,  ಎ.06: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ರಾಜ್ಯದಲ್ಲಿ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದ್ದು, ಇದರ ಭಾಗವಾಗಿ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ವಿಸ್ತರಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಲಿಂಗ ತಾರತಮ್ಯವಿಲ್ಲದೆ ಉಚಿತ ಪ್ರಯಾಣ: ಈಗಾಗಲೇ ‘ಶಕ್ತಿ’ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯವಿದೆ. ಈಗ ಇದನ್ನು 12ನೇ

ಸಿಹಿ ಸುದ್ದಿ, ಪಿಯುಸಿವರೆಗೆ ಗಂಡು ಮಕ್ಕಳಿಗೂ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಎ.06: ಇಂದಿನಿಂದ ಏ.7ರವರೆಗೆ ಬೆಂಗಳೂರು ಮತ್ತು ಸುತ್ತಲಿನ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ. ಅಲ್ಲದೇ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ.. ಬೆಂಗಳೂರಿನಲ್ಲಿ ಗರಿಷ್ಠ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಬೈಕೊಂದಕ್ಕೆ ಕಾರು ಢಿಕ್ಕಿ – ಸವಾರನಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಎ.04 ​ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ಎಸ್. ಕೆ. ಎಸ್. ಜಂಕ್ಷನ್ ನಲ್ಲಿ ಬೈಕ್ ಗೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸವಾರನಿಗೆ ಗಾಯವಾದ ಬಗ್ಗೆ ವರದಿಯಾಗಿದೆ.​ ಬೈಕ್ ಸವಾರ ಭಾಗ್ಯರಾಜ್ ಪೂಜಾರಿ, ಸ್ವಾತಿ ಅವರನ್ನು ಸಹ ಸವಾರೆಯನ್ನಾಗಿ ಕೂರಿಸಿಕೊಂಡು ಸುರತ್ಕಲ್ ಕಡೆಯಿಂದ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರನ್ನು ಚಾಲಕ ರಫಾನ್ ಮೊಹಮ್ಮದ್ ಮುಸ್ತಾಫ ಬೈಕ್ ಗೆ ತಾಗಿಸಿದ್ದಾನೆ ಎನ್ನಲಾಗಿದೆ. ಇದರಿಂದ ಭಾಗ್ಯರಾಜ್ ಅವರಿಗೆ ಗಾಯವಾಗಿದ್ದು, ಬೈಕ್ ಹತೋಟಿ

ಮಂಗಳೂರು : ಬೈಕೊಂದಕ್ಕೆ ಕಾರು ಢಿಕ್ಕಿ – ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಾಹನ ಸವಾರರಿಗೆ ಬಿಗ್ ರಿಲೀಫ್: ಇನ್ಮುಂದೆ HSRP ನಂಬರ್ ಪ್ಲೇಟ್ ಕಡ್ಡಾಯವಲ್ಲ!

(ನ್ಯೂಸ್‌ ಕಡಬ) newskadaba.com ಏ. 04. ರಾಜ್ಯದ ಲಕ್ಷಾಂತರ ವಾಹನ ಸವಾರರಿಗೆ ಕರ್ನಾಟಕ ಸರ್ಕಾರ ಮತ್ತು ಸಾರಿಗೆ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಕಳೆದ ಹಲವು ತಿಂಗಳುಗಳಿಂದ ಆತಂಕ ಸೃಷ್ಟಿಸಿದ್ದ ಹೆಚ್.ಎಸ್.ಆರ್.ಪಿ  ನಂಬರ್ ಪ್ಲೇಟ್ ಅಳವಡಿಕೆಯ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇದನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಸದ್ಯಕ್ಕೆ ಕೈಬಿಡಲಾಗಿದೆ. ​ಈ ಹಿಂದೆ ಏಪ್ರಿಲ್ 1, 2019ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ HSRP ಅಳವಡಿಸುವುದು ಕಡ್ಡಾಯ ಎಂದು ಆದೇಶಿಸಲಾಗಿತ್ತು. ಅಲ್ಲದೆ, ಇದಕ್ಕೆ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿತ್ತು.

ವಾಹನ ಸವಾರರಿಗೆ ಬಿಗ್ ರಿಲೀಫ್: ಇನ್ಮುಂದೆ HSRP ನಂಬರ್ ಪ್ಲೇಟ್ ಕಡ್ಡಾಯವಲ್ಲ! Read More »

ಕರ್ನಾಟಕ

ರಜಾ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇವೆಯಲ್ಲಿ ಪಾಲ್ಗೊಂಡ ಭಕ್ತರು

(ನ್ಯೂಸ್‌ ಕಡಬ) newskadaba.com,  ಎ.04 ​ ಸುಬ್ರಹ್ಮಣ್ಯ: ರಾಜ್ಯ ಸರಕಾರ ಶುಕ್ರವಾರ ಘೋಷಿಸಿದ ರಜಾ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಊರುಗಳಿಂದ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಬಂದು ಶೇಷ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ ಹಾಗೂ ಮಹಾಪೂಜೆ ಮತ್ತು ಇನ್ನಿತರ ಸೇವೆಗಳನ್ನು ನಡೆಸಿ ಧನ್ಯರಾದರು. ಈ ಸಂದರ್ಭದಲ್ಲಿ ದೇವಳದ ಅಧಿಕಾರಿವೃಂದದವರು, ಸಿಬ್ಬಂದಿ ವರ್ಗದವರು ಭದ್ರತಾ ಸಿಬ್ಬಂದಿಯವರು ಹಾಗೂ ಪೊಲೀಸ್ ಇಲಾಖೆ ವತಿಯಿಂದ ಭಕ್ತರ ಸುಗಮ ದರ್ಶನ, ವಿವಿಧ ಸೇವೆ,

ರಜಾ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇವೆಯಲ್ಲಿ ಪಾಲ್ಗೊಂಡ ಭಕ್ತರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top