ಮಂಗಳೂರು : ಬೈಕೊಂದಕ್ಕೆ ಕಾರು ಢಿಕ್ಕಿ – ಸವಾರನಿಗೆ ಗಾಯ



(ನ್ಯೂಸ್‌ ಕಡಬ) newskadaba.com,  .04 ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ಎಸ್. ಕೆ. ಎಸ್. ಜಂಕ್ಷನ್ ನಲ್ಲಿ ಬೈಕ್ ಗೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸವಾರನಿಗೆ ಗಾಯವಾದ ಬಗ್ಗೆ ವರದಿಯಾಗಿದೆ.​







ಬೈಕ್ ಸವಾರ ಭಾಗ್ಯರಾಜ್ ಪೂಜಾರಿ, ಸ್ವಾತಿ ಅವರನ್ನು ಸಹ ಸವಾರೆಯನ್ನಾಗಿ ಕೂರಿಸಿಕೊಂಡು ಸುರತ್ಕಲ್ ಕಡೆಯಿಂದ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರನ್ನು ಚಾಲಕ ರಫಾನ್ ಮೊಹಮ್ಮದ್ ಮುಸ್ತಾಫ ಬೈಕ್ ಗೆ ತಾಗಿಸಿದ್ದಾನೆ ಎನ್ನಲಾಗಿದೆ.






ಇದರಿಂದ ಭಾಗ್ಯರಾಜ್ ಅವರಿಗೆ ಗಾಯವಾಗಿದ್ದು, ಬೈಕ್ ಹತೋಟಿ ತಪ್ಪಿದಾಗ ಬೀಳದಂತೆ ತಡೆದಿದ್ದಾರೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top