Keerthana

ಅಧಿಕಾರ ದುರುಪಯೋಗ: ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ

ವಾಷಿಂಗ್ಟನ್, ಡಿ.19:  ಅಧಿಕಾರ ದುರುಪಯೋಗದ ಆರೋಪದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಬುಧವಾರ ವಾಗ್ದಂಡನೆಗೆ ಗುರಿಪಡಿಸಿದೆ. ಮುಂದಿನ ತಿಂಗಳು ಅಮೇರಿಕಾ ಸಂಸತ್ತಿನ ಮೇಲ್ಮನೆ ಸೆನೆಟ್ ನಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯಲಿದ್ದು, ಸೆನೆಟ್ ನಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕ್ ಪಕ್ಷಕ್ಕೆ ಬಹುಮತ ಹೊಂದಿರುವ ಕಾರಣ ವಾಗ್ದಂಡನೆಗೆ ಹಿನ್ನಡೆಯಾಗಿ ಟ್ರಂಪ್ ಗೆ ಗೆಲುವಾಗುವ ಸಾಧ್ಯತೆಯಿದೆ. ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯಿತು. ಸುಮಾರು 6 ಗಂಟೆಗಳ ಕಾಲ ಸುದೀರ್ಘ ಚರ್ಚೆ […]

ಅಧಿಕಾರ ದುರುಪಯೋಗ: ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪೌರತ್ವ ಕಾಯ್ದೆ ಭಾರತೀಯ ನಾಗರಿಕರಿಗೆ ಅನ್ವಯಿಸುದಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ

ಹೊಸದಿಲ್ಲಿ, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು  ನಡೆಯುತ್ತಿರುವ ಹಿನ್ನಲೆಯಲ್ಲಿ “ ಈ ಕಾಯ್ದೆ ಭಾರತೀಯ ನಾಗರಿಕರಿಗೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಸ್ಪಷ್ಟ ಪಡಿಸಿದ್ದಾರೆ . ಟ್ವಿಟರ್‌ ನಲ್ಲಿ ಭಾರತದಲ್ಲಿನ ಪೌರತ್ವ ತಿದ್ದುಪಡಿ  ಕಾಯ್ದೆಗೆ  ಸಂಬಂಧಿಸಿದ ನಿಬಂಧನೆಗಳು ಮತ್ತು ಕಾಯ್ದೆಯ ವಸ್ತುಸ್ಥಿತಿಯ ಕುರಿತು ಗೃಹಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. ಜನನ, ಮೂಲ, ನೋಂದಣಿ, ನೈಸರ್ಗಿಕೀಕರಣ ಅಥವಾ ಭೂಪ್ರದೇಶದ ಸಂಯೋಜನೆಯಿಂದ ಭಾರತದ ಪೌರತ್ವವನ್ನು ಪಡೆಯಬಹುದು. ಅರ್ಹತೆ ಪಡೆದ ಯಾವುದೇ ವಿದೇಶಿಯನು ತನ್ನ

ಪೌರತ್ವ ಕಾಯ್ದೆ ಭಾರತೀಯ ನಾಗರಿಕರಿಗೆ ಅನ್ವಯಿಸುದಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್

ದ.ಕ., ಉಡುಪಿ ಜಿಲ್ಲೆಯಲ್ಲಿ ಡಿ.21ರವರೆಗೆ ನಿಷೇಧಾಜ್ಞೆ

ಮಂಗಳೂರು,/ ಉಡುಪಿ, ಡಿ.19: ಪೌರತ್ವ ಕಾಯ್ದೆ ವಿರುದ್ಧ ಹಲವು ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಿದ್ದು, ಇದರಿಂದ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಡಿ.21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.   ಡಿ.19 ರಿಂದ ಡಿ.20 ರ ರಾತ್ರಿ12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಆದೇಶಿಸಿದ್ದಾರೆ. ಅಲ್ಲದೆ

ದ.ಕ., ಉಡುಪಿ ಜಿಲ್ಲೆಯಲ್ಲಿ ಡಿ.21ರವರೆಗೆ ನಿಷೇಧಾಜ್ಞೆ Read More »

ಕರಾವಳಿ

ಬೈಕ್ ಅಪಘಾತ: ಕನ್ಯಾನ ಗ್ರಾಪಂ ಸದಸ್ಯ ಸಹಿತ ಇಬ್ಬರ ಮೃತ್ಯು

  ಬಂಟ್ವಾಳ, ಡಿ 18: ನಿಯಂತ್ರಣ ಕಳೆದುಕೊಂಡು ಬೈಕ್ ರಸ್ತೆಗೆ ಉರುಳಿದ ಪರಿಣಾಮ ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟ  ಘಟನೆ ವಿಟ್ಲದ ಕನ್ಯಾನ ಗ್ರಾಮದ ಕೆಳಗಿನಪೇಟೆಯಲ್ಲಿ ನಡೆದಿದೆ. ಮೃತರನ್ನು ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ, ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯ ವಾಲ್ಟರ್ ಡಿಸೋಜ(45) ಹಾಗೂ ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ವಿಲ್ಸನ್ ಡಿಸೋಜ(52) ಎಂದು ಗುರುತಿಸಲಾಗಿದೆ. ಇವರು ಕನ್ಯಾನ ಸರ್ಕಾರಿ ಆಸ್ಪತ್ರೆಯಿಂದ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದು

ಬೈಕ್ ಅಪಘಾತ: ಕನ್ಯಾನ ಗ್ರಾಪಂ ಸದಸ್ಯ ಸಹಿತ ಇಬ್ಬರ ಮೃತ್ಯು Read More »

ಕರಾವಳಿ

ಕುಂದಾಪುರ: ಅಕ್ರಮ ಚಿನ್ನ ಸಾಗಾಟ; ಮೂವರ ಬಂಧನ

ಕುಂದಾಪುರ, ಡಿ.18: ರೈಲಿನಲ್ಲಿ  ಅಕ್ರಮ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದ ಮೂವರನ್ನು ಬೈಂದೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭಟ್ಕಳ ಮೂಲದ ಇಸ್ಮಾಯಿಲ್‌, ಪಾಹೀಬ್‌ ಹಾಗೂ ಉಮೈರ್‌ ಎಂದು ಗುರುತಿಸಲಾಗಿದೆ. ಅವರಿಂದ 1.16 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈಲಿನಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಪ್ರಕಾರ ಎಎಸ್ಪಿ ಹರಿರಾಮ್‌ ಶಂಕರ್‌ ಅವರು ಪಿಎಸ್‌ಐ ಹರೀಶ್‌ ಹಾಗೂ ಸಿಬ್ಬಂದಿ, ಬೈಂದೂರು ಸಿಪಿಐ ಸುರೇಶ್‌ ಹಾಗೂ ಸಿಬ್ಬಂದಿಗಳ ತಂಡ ರಚನೆ ಮಾಡಿ ಕಾರ್ಯಚರಣೆ

ಕುಂದಾಪುರ: ಅಕ್ರಮ ಚಿನ್ನ ಸಾಗಾಟ; ಮೂವರ ಬಂಧನ Read More »

ಕರಾವಳಿ

ಎಷ್ಟೇ ವಿರೋಧವಿದ್ದರೂ ಪೌರತ್ವ ಕಾಯ್ದೆ ಜಾರಿಗೆ ಶತಸಿದ್ದ: ಅಮಿತ್ ಶಾ

ಹೊಸದಿಲ್ಲಿ, ಡಿ.18: ವಿಪಕ್ಷಗಳು ಎಷ್ಟೇ ವಿರೋಧಿಸಿದರೂ ಪೌರತ್ವ  ಕಾಯ್ದೆ ತಂದೇ ತರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವುದು ಮತ್ತು ಗೌರವದಿಂದ ದೇಶದಲ್ಲಿ ವಾಸಿಸುವುದನ್ನು ಮೋದಿ ಸರ್ಕಾರ ಖಚಿತಪಡಿಸುತ್ತದೆ ಎಂದು ಪ್ರತಿಪಾದಿಸಿದರು. ಈ ಹೊಸ ಕಾನೂನಿನ ವಿರುದ್ಧವಾಗಿರುವವರು ಈ ಕಾಯ್ದೆಯನ್ನು ತಮ್ಮಿಂದ ಸಾಧ್ಯವಾದಷ್ಟು ವಿರೋಧಿಸುವಂತೆ ಸವಾಲು ಹಾಕಿದರು. ಏನೇ ಬರಲಿ, ಈ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗುತ್ತದೆ ಮತ್ತು

ಎಷ್ಟೇ ವಿರೋಧವಿದ್ದರೂ ಪೌರತ್ವ ಕಾಯ್ದೆ ಜಾರಿಗೆ ಶತಸಿದ್ದ: ಅಮಿತ್ ಶಾ Read More »

ರಾಷ್ಟ್ರೀಯ ನ್ಯೂಸ್

ಕುಂದಾಪುರ: ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ

ಕುಂದಾಪುರ, ಡಿ.17: ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದ ಅಮಾನವೀಯ ಕೃತ್ಯ ಕುಂದಾಪುರ ನೇರಳಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕೊಲೆಯಾದವರನ್ನು ನೇರಳಕಟ್ಟೆ ವಾಲ್ತೂರು ಸಮೀಪದ ಜೋರ್‌ಮಕ್ಕಿ ನಿವಾಸಿ ನರಸಿಂಹ ಶೆಟ್ಟಿ ಎಂಬವರ ಪುತ್ರ ಬಾಬುಶೆಟ್ಟಿ(55) ಎಂದು ಗುರುತಿಸಲಾಗಿದೆ. ಬಾಬು ಶೆಟ್ಟಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ತನ್ನ ಮನೆಯಾದ ಜೋರ್‌ಮಕ್ಕಿಯಿಂದ ಕುಂದಾಪುರ್‍ಕಕೆ ಹೋಗಿ ಬರುವುದಾಗಿ ಹೇಳಿ ತನ್ನ ಬೈಕಿನಲ್ಲಿ ತೆರಳಿದ್ದರು ಎನ್ನಲಾಗಿದೆ. ಆದರೆ ಮಧ್ಯಾಹ್ನ 12.30ರ ಸುಮಾರಿಗೆ ಅವರ ರಕ್ತಸಿಕ್ತ ದೇಹ ಜಾಡಿಯ ಕಲ್ಕಂಬದಲ್ಲಿ

ಕುಂದಾಪುರ: ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ Read More »

ಕರಾವಳಿ

ಸುಳ್ಯ:  ಅಸ್ತಿ ವಿವಾದ; ಮಹಿಳೆಯ ಕೊಲೆ

   (ನ್ಯೂಸ್ ಕಡಬ) newskadaba.com ಸುಳ್ಯ, ಡಿ 17: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕೊಲೆಗೈದ ಘಟನೆ ಸುಳ್ಯದ ಜೋಡುಪಾಲದ ಅಬ್ಬಿಕೊಲ್ಲಿ ಎಂಬಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು  ಅಬ್ಬಿಕೊಲ್ಲಿ ನಿವಾಸಿ ಕುಡಿಯರ ಹೊನ್ನಮ್ಮ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 6 ಗಂಟೆ ವೇಳೆ ಆಸ್ತಿ ಮತ್ತು ಮನೆಗೆ ತೆರಳುವ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ  ಹೊನ್ನಮ್ಮ ಮತ್ತು ಕುಡಿಯರ ಆನಂದ ಇವರ ನಡುವೆ ವಾಗ್ವಾದ ನಡೆದಿದ್ದು, ಈ ಸಂಧರ್ಭ ಆಕ್ರೋಶಗೊಂಡಿದ್ದ ಆನಂದ ತನ್ನ ಬಳಿಯಿದ್ದ ಚೂರಿಯಿಂದ ಹೊನ್ನಮ್ಮಳನ್ನು ಇರಿದು

ಸುಳ್ಯ:  ಅಸ್ತಿ ವಿವಾದ; ಮಹಿಳೆಯ ಕೊಲೆ Read More »

ಕರಾವಳಿ

ದೇಶ ದ್ರೋಹ ಆರೋಪ: ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ

ಇಸ್ಲಮಾಬಾದ್, ಡಿ.17: ದೇಶ ದ್ರೋಹದ ಆರೋಪದಲ್ಲಿ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಪಾಕಿಸ್ಥಾನದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ಕು ವರ್ಷದ ಹಿಂದೆ ಲಂಡನ್ ಗೆ ಪರಾರಿಯಾಗಿದ್ದ ಮುಶ್ರಫ್ ನಂತರ ಕಳೆದ ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತ್ತೆ ಪಾಕಿಸ್ಥಾನಕ್ಕೆ ಆಗಮಿಸಿದ್ದರು. ಸದ್ಯ ದುಬೈನಲ್ಲಿ ನೆಲೆಸಿರುವ ಪರ್ವೇಜ್ ಮುಶ್ರಫ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಾಕಿಸ್ಥಾನದ ಸೇನಾಧಿಕಾರಿಯಾಗಿದ್ದ ಪರ್ವೇಜ್ ನಂತರ ದಂಗೆ ನಡೆಸಿ ದೇಶದ ಚುಕ್ಕಾಣಿ ಹಿಡಿದಿದ್ದರು. 1999ರಿಂದ 2008ರವರೆಗೆ

ದೇಶ ದ್ರೋಹ ಆರೋಪ: ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಧಾರ್ಮಿಕ ಭಾವನೆಗೆ ದಕ್ಕೆ ಆರೋಪಿಸಿ ಕಲ್ಲಡ್ಕ ಶ್ರೀರಾಮ ಶಾಲೆಯ ವಿರುದ್ದ ದೂರು

ಬಂಟ್ವಾಳ, ಡಿ.17: ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಮಾಲಕತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಡಿ.17ರಂದು ನಡೆದ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಧ್ವಂಸವನ್ನು ಮರುಸೃಷ್ಟಿ ಮಾಡಿಸಿದನ್ನು ಪ್ರಶ್ನಿಸಿ ಪಿಎಫ್ಐ ಕಲ್ಲಡ್ಕ ವಲಯದ ಅಬೂಬಕರ್ ಸಿದ್ದೀಕ್ ಬಂಟ್ವಾಳ ಪೊಲೀಸ್ ಠಾಣೆಗೆ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಆರೋಪಿಸಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರ್ಮಿಕ ಭಾವನೆಗೆ ದಕ್ಕೆ ಆರೋಪಿಸಿ ಕಲ್ಲಡ್ಕ ಶ್ರೀರಾಮ ಶಾಲೆಯ ವಿರುದ್ದ ದೂರು Read More »

ಕರಾವಳಿ
Scroll to Top