news kadaba desk

ರಂಗಭೂಮಿ ಕಲಾವಿದ ಶೇಷಪ್ಪ ಚಿಟ್ಟಾ ರವರಿಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೀದರ್, ಡಿ. 16. ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರ ಬೀದರ್ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 3 ದಶಕಗಳ ರಂಗಭೂಮಿ ಸೇವೆಯಲ್ಲಿ ಪರಿಗಣಿಸಲಾದ ಶೇಷಪ್ಪ ಚಿಟ್ಟಾರವರಿಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕರ್ನಾಟಕ ಪರಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ.ವಿಶ್ವನಾಥ ಜಿ.ಪಿ, ಮಹೇಶ್ವರ ತಾತಾ, ಚಿತ್ರನಟಿ ಲಕ್ಷಿತಾ, ಪುಷ್ಪಾ ಹಿರೇಮಠ, ಹಿರಿಯ ಸಾಹಿತಿಗಳಾದ ಡಾ.ಎಂ.ಜಿ. ದೇಶಪಾಂಡೆ, ಸಮಾಜ ಸೇವಕರಾದ ಶಶಿಕುಮಾರ್ ಪೊಲೀಸ್ ಪಾಟೀಲ್, […]

ರಂಗಭೂಮಿ ಕಲಾವಿದ ಶೇಷಪ್ಪ ಚಿಟ್ಟಾ ರವರಿಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ Read More »

ಕರ್ನಾಟಕ

ಕಡಬ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಿತಿನ್ ಕುಮಾರ್ ಗೆ ಕಡಬ ಪೊಲೀಸ್ ಠಾಣೆಯಲ್ಲಿ ಸನ್ಮಾನ        

(ನ್ಯೂಸ್ ಕಡಬ) newskadaba.com ಕಡಬ, ಡಿ. 16. ಖೋಖೋ ಪಂದ್ಯಾಟದಲ್ಲಿ ರಾಷ್ಡ್ರಮಟ್ಟಕ್ಕೆ ಆಯ್ಕೆಯಾದ ಕೋಡಿಂಬಾಳದ ನಿತಿನ್ ಕುಮಾರ್ ಅವರನ್ನು ಕಡಬ ಠಾಣೆಯಲ್ಲಿ ಸನ್ಮಾನಿಸಲಾಯಿತು. ಎಸ್.ಐ ಆಂಜನೇಯ ರೆಡ್ಡಿಯವರು ನಿತಿನ್ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿ, ಪೊಲೀಸರು ತಪ್ಪು ಮಾಡಿದವರನ್ನು ಶಿಕ್ಷಿಸಲು ಮಾತ್ರ ಇರುವವರಲ್ಲ, ಉತ್ತಮ ಸಾಧನೆ ಮಾಡಿದವರನ್ನು ಗುರುತಿಸುವುದು ಸಹ ನಮ್ಮ ಕರ್ತವ್ಯ. ಯಾವುದೇ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಿದಾಗ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನಿತಿನ್ ಕುಮಾರ್ ತಂದೆ ರಮೇಶ್,

ಕಡಬ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಿತಿನ್ ಕುಮಾರ್ ಗೆ ಕಡಬ ಪೊಲೀಸ್ ಠಾಣೆಯಲ್ಲಿ ಸನ್ಮಾನ         Read More »

ಕರಾವಳಿ, ಕರ್ನಾಟಕ

ಚಲಿಸುತ್ತಿದ್ದ ಲಾರಿಯ ಟ್ರಾಲಿ ಕುಸಿತ- ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 16. ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ ಘಟನೆ ಮಂಗಳೂರು –ಮಿಲ್ಲುಪುರಂ ರಸ್ತೆಯ ರಾಷ್ಟ್ರೀಯ 73ರ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ನಡೆದಿದೆ. ಲಾರಿಯು ಬೆಂಗಳೂರಿನಿಂದ ಮಂಗಳೂರಿಗೆ ನಿಗದಿತ ಭಾರದ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಅಂಬಡ್ತ್ಯಾರು ಸಮೀಪಿಸುತ್ತಿದಂತೆಯೇ ಲಾರಿಯ ಹಿಂಬದಿ ಕಬ್ಬಿಣದ ಟ್ರಾಲಿ ಬಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ರಸ್ತೆಯ ಅಂಚಿನಲ್ಲಿದ್ದ ಕ್ಯಾಂಟೀನ್ ಸಮೀಪ ಹೋಗಿ ನಿಂತಿದೆ. ಲಾರಿಯ ಟ್ರಾಲಿ

ಚಲಿಸುತ್ತಿದ್ದ ಲಾರಿಯ ಟ್ರಾಲಿ ಕುಸಿತ- ತಪ್ಪಿದ ಅನಾಹುತ Read More »

ಕರ್ನಾಟಕ

ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಮೃತ್ಯು          

(ನ್ಯೂಸ್ ಕಡಬ) newskadaba.com ವಿಜಯಪುರ, ಡಿ. 16. 5 ವರ್ಷದ ಬಾಲಕನೋರ್ವನ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. ಮೃತ ಬಾಲಕನನ್ನು ಹೂಡ್ಕೋ ಬಡಾವಣೆಯ ಶ್ರೇಯಸ್ (5) ಎಂದು ಗುರುತಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹ ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಮೃತ್ಯು           Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಗ್ರರ ದಾಳಿ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಶ್ರೀನಗರ, ಡಿ. 16. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಪೊಲೀಸರು, ರಕ್ಷಣಾ ಪಡೆಗಳು ಮತ್ತು ನಾಗರಿಕ ಆಡಳಿತ ಅಧಿಕಾರಿ ಸ್ಥಳದಲ್ಲಿದ್ದರು ಎಂದು ಸೇನಾ ಘಟಕ ಮಾಹಿತಿ ನೀಡಿದೆ.

ಉಗ್ರರ ದಾಳಿ ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ..!  ➤ ಹೈಕೋರ್ಟ್ ನಿಂದ ಆದೇಶ     

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.16   ಈ ವರ್ಷ ಹೊಂಡ-ಗುಂಡಿ ಬಿದ್ದ ರಸ್ತೆಗಳಲ್ಲಿ ಆಗಿರುವ ಗಂಡಾಂತರಗಳು  ಒಂದೆರಡಲ್ಲ. ಈ ಸಂಧರ್ಭಗಳಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಾರೆ.ಮಹಾನಗರ ಪಾಲಿಕೆ ಸರಿಯಾಗಿ ಕೆಲಸ ಮಾಡಿಸುತ್ತಿಲ್ಲ. ಗುತ್ತಿಗೆದಾರರು ಕೇವಲ ಹಣ ಮಾಡಲು ನೋಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುತ್ತದೆ ಎಂದು ತಿಳಿದುಬಂದಿದೆ. ಗುಂಡಿಗಳು ಮತ್ತು ರಸ್ತೆಗಳ ದುಸ್ಥಿತಿಯಿಂದಾಗಿ ಜನರು ಗಂಭೀರ ಗಾಯಗೊಂಡರೆ ಅಥವಾ ಸಾವು ಸಂಭವಿಸುವುದನ್ನು ಗಂಭೀರವಾಗಿ ಪರಿಗಣಿಸುವ ಹೈಕೋರ್ಟ್, ಈ ಕುರಿತು ಯಾವುದೇ ನಾಗರಿಕರು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎಫ್ಐಆರ್ ದಾಖಲಿಸಲು

ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ..!  ➤ ಹೈಕೋರ್ಟ್ ನಿಂದ ಆದೇಶ      Read More »

ಕರ್ನಾಟಕ

ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಭಟ್ಕಳ, ಡಿ. 16. ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66 ರ ಮೂಡ್ ಬೈಪಾಸ್ ಬಳಿ ನಡೆದಿದೆ. ಮೃತಪಟ್ಟವರನ್ನು ತಲಾಂದಸಬ್ಬತ್ತಿ ನಿವಾಸಿ ಶೇಖರ್ ಸುಬ್ರಮಣ ನಾಯ್ಕ (25) ಹಾಗೂ ಲೋಕೇಶ್ ಮಂಜುನಾಥ್ ನಾಯ್ಕ(30) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಊಟ ಮುಗಿಸಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಲು ಶಂಶುದ್ದೀನ್ ಸರ್ಕಲ್ ಗೆ ಹೋಗುತ್ತಿದ್ದ ವೇಳೆ

ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೊಬೈಲ್ ಸ್ಫೋಟ ➤ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com  ದಾವಣಗೆರೆ, ಡಿ. 16. ಮೊಬೈಲ್ ಸ್ಫೋಟಗೊಂಡ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಜರ್ಮನಿಯಲ್ಲಿ ಸಂಭವಿಸಿದೆ. ಮೃತನನ್ನು ದಾವಣಗೆರೆ ನಿವಾಸಿಯಾದ ಕೆ.ರೇವಪ್ಪ ಅವರ ಪುತ್ರ ಸಂತೋಷ್ ಕುಮಾರ್ ಕೆ .ಆರ್(30) ಎಂದು ಗುರುತಿಸಲಾಗಿದೆ. ಈತ ಜರ್ಮನಿಯ ಕೆಮ್ ನಿಟ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಓದುತ್ತಿದ್ದ ಈತ, ನಗರದ ಪಿ.ಜಿ. ಒಂದರಲ್ಲಿ ವಾಸವಾಗಿದ್ದ. ರಾತ್ರಿ ವೇಳೆ ಮೊಬೈಲ್ ಅನ್ನು ಜಾರ್ಜ್ ಗೆ ಇಟ್ಟಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿದ್ದು, ಇದರಿಂದ ಕೊಠಡಿಯಲ್ಲಿ ಹೊಗೆ ಆವರಿಸಿಕೊಂಡು ಉಸಿರುಗಟ್ಟಿ ಯುವಕ ಮೃತಪಟ್ಟಿದ್ದಾರೆ

ಮೊಬೈಲ್ ಸ್ಫೋಟ ➤ ವಿದ್ಯಾರ್ಥಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: ಹೆಚ್ಚಿದ ಡೆಂಗ್ಯೂ, ಝಿಕಾ ವೈರಸ್ ಆತಂಕ  ➤ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ     

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ರಾಜ್ಯದಲ್ಲಿ ಡೆಂಗೀ ಹಾಗೂ ಝಿಕಾ ವೈರಸ್ ಕುರಿತು ಆತಂಕ ಹೆಚ್ಚಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವ ಹಾಗೂ ಹರಡುವಿಕೆ ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆ ಕೆಲವು ಕ್ರಮಗಳನ್ನು ಬಿಡುಗಡೆ ಮಾಡಿದೆ. ಸೊಳ್ಳೆ ಪರದೆಯ ಕೆಳಗೆ ಮಲಗುವುದು, ಸೊಳ್ಳೆ ನಿವಾರಕಗಳನ್ನು ಬಳಸುವುದು ಮತ್ತು ಆದಷ್ಟು ಮುಚ್ಚುವ ಬಟ್ಟೆಗಳನ್ನು ಧರಿಸುವುದು ಹಾಗೂ ಹೆಚ್ಚು ಸೋಂಕಿರುವ ಪ್ರದೇಶಗಳಿಗೆ ಪ್ರಯಾಣವನ್ನು ಮುಂದೂಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ

ಬೆಂಗಳೂರು: ಹೆಚ್ಚಿದ ಡೆಂಗ್ಯೂ, ಝಿಕಾ ವೈರಸ್ ಆತಂಕ  ➤ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ      Read More »

ಕರ್ನಾಟಕ

ಸುಳ್ಯ: ವ್ಯಾನ್ ಮತ್ತು ಕಾರಿನ ನಡುವೆ ಭೀಕರ ಅಪಘಾತ !!!      

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 16. ಸುಳ್ಯದಿಂದ ಗುತ್ತಿಗಾರಿಗೆ ಬರುತ್ತಿದ್ದ ವ್ಯಾನ್ ಮತ್ತು ಸುಳ್ಯದ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಸಂಭವಿಸಿದ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಜಖಂಗೊಂಡಿದ್ದು, ಕಾರು ಚಾಲಕ ಬೆಟ್ಟ ಮರಿಯಪ್ಪ ಎಂಬವರ ಕೈಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.    

ಸುಳ್ಯ: ವ್ಯಾನ್ ಮತ್ತು ಕಾರಿನ ನಡುವೆ ಭೀಕರ ಅಪಘಾತ !!!       Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top