news kadaba desk

ಜಾನುವಾರುಗಳಿಗೆ ಚರ್ಮಗಂಟು ರೋಗ ➤ ಆಕಳು ಮೃತ್ಯು

(ನ್ಯೂಸ್ ಕಡಬ) newskadaba.com ಭಟ್ಕಳ, ಡಿ. 17. ಭಟ್ಕಳ ತಾಲೂಕಿನ ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಹೈನುಗಾರ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ಹತ್ತಾರು ದಿನಗಳಿಂದ ಈ ಭಾಗದ ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಗಣಪತಿ ಹೆಗ್ಡೆ ಎಂಬವರಿಗೆ ಸೇರಿದ ಸುಮಾರು 50 ಸಾವಿರ ರೂ. ಮೌಲ್ಯದ ಗಿರ್ ತಳಿಯ ಆಕಳೊಂದು ರೋಗಬಾಧೆಯಿಂದ ಮೃತಪಟ್ಟಿದೆ ಎನ್ನಲಾಗಿದೆ.

ಜಾನುವಾರುಗಳಿಗೆ ಚರ್ಮಗಂಟು ರೋಗ ➤ ಆಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ. 17. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆಯಾಗಿದ್ದು, ಮೃತ ಯುವತಿಯನ್ನು ಸೃಷ್ಟಿ ಮಾರುತಿ (21) ಎಂದು ಗುರುತಿಸಲಾಗಿದೆ. ಸೃಷ್ಟಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ. ಕಾಲೇಜಿಗೆ ಹೋಗಿದ್ದ ಯುವತಿ ಸಂಜೆಯಾದ್ರು ಮನೆಗೆ ಬಂದಿರಲಿಲ್ಲ, ಈ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಇದೀಗ ಸೃಷ್ಟಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಮೃತದೇಹ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು

ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಡಿ. 17. ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ. ಮೃತರನ್ನು ದುರ್ಗಮ್ಮ (25), ಆಕೆಯ ಮಗ ಅಜ್ಜಯ್ಯ (6) ಹಾಗೂ ಮಗಳು ಸೇವಂತಿ (4) ಎಂದು ಗುರುತಿಸಲಾಗಿದೆ. ಬೋಸೇದೇವರಹಟ್ಟಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಪತಿ ಮಹಾಂತೇಶ ಕರೆತಂದು ಬಳಿಕ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಮಹಾಂತೇಶ ಕರೆದುಕೊಂಡು ಹೋಗಿದ್ದ. ಆಗ ಪತ್ನಿ ಮತ್ತು ಮಕ್ಕಳನ್ನು ಕೆರೆ ತಳ್ಳಿಗೆ ಪತಿಯೇ

ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೋನಿಗೆ ಬಿದ್ದ ಚಿರತೆ  ➤ ನಿಟ್ಟುಸಿರು ಬಿಟ್ಟ ಸ್ಥಳೀಯರು                       

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 17. ಮೈಸೂರಿನ ಜನರ ನಿದ್ದೆಗೆಡಿಸಿದ್ದ ಮತ್ತೊಂದು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿ ಉಂಟು ಮಾಡಿತ್ತು ಎನ್ನಲಾಗಿದೆ. ಸುರೇಂದ್ರ ಕುಮಾರ್ ಹಾಗೂ ವಿಜಯ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿ ಗ್ರಾಮದಲ್ಲಿ ಒಂದು ಬೋನ್ ಅನ್ನು ಇರಿಸಲಾಗಿತ್ತು. ಸದ್ಯ ಈ ಬೋನಿಗೆ ಚಿರತೆ ಬಿದ್ದಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಬೋನಿಗೆ ಬಿದ್ದ ಚಿರತೆ  ➤ ನಿಟ್ಟುಸಿರು ಬಿಟ್ಟ ಸ್ಥಳೀಯರು                        Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ರಾಮನಗರ, ಡಿ. 17. ವೇಗವಾಗಿ ಬಂದ ಲಾರಿಯೊಂದು ತಿರುವಿನಲ್ಲಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ, ಬೆಜ್ಜರಹಳ್ಳಿ ಕಟ್ಟೆ ಮಾರ್ಗ ಮಧ್ಯೆ ಸಂಭವಿಸಿದೆ. ಮೃತಪಟ್ಟವರನ್ನು ಸುಗ್ಗನಹಳ್ಳಿ ಗ್ರಾಮದ ನಿವಾಸಿ ಮಲ್ಲೇಶಯ್ಯ (52) ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಮಾಗಡಿಗೆ ತೆರಳುವ ವೇಳೆ ಎಂದಿನಂತೆ ತಮ್ಮ ಮಗಳನ್ನು ಬೆಜ್ಜರಹಳ್ಳಿ ಕಟ್ಟೆ ಗ್ರಾಮದ ಬಳಿ ಡ್ರಾಪ್ ಮಾಡಲು ಮಲ್ಲೇಶಯ್ಯ ಅವರು ದ್ವಿಚಕ್ರ ವಾಹನದಲ್ಲಿ

ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಡರಾತ್ರಿ ಭೀಕರ ಬೆಂಕಿ ಅವಘಢ  ➤ ಒಂದೇ ಕುಟುಂಬದ 6 ಮಂದಿ ಸಜೀವ ದಹನ     

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ. 17. ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಯಜಮಾನ ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಮನೆಯ ಯಜಮಾನ ಶಿವಯ್ಯ (50), ಪತ್ನಿ ಪದ್ಮಾ (45) ಹಾಗೂ ಇಬ್ಬರು ಮಕ್ಕಳು, ಪದ್ಮಾರವರ ಅಕ್ಕನ ಮಗಳು ಮೌನಿಕ ಸೇರಿ ಶಾಂತಯ್ಯ ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಡರಾತ್ರಿ ಭೀಕರ ಅಗ್ನಿ ಅವಘಢ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ

ತಡರಾತ್ರಿ ಭೀಕರ ಬೆಂಕಿ ಅವಘಢ  ➤ ಒಂದೇ ಕುಟುಂಬದ 6 ಮಂದಿ ಸಜೀವ ದಹನ      Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ!

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 17. ಮೈಸೂರಿನ ವಿಶ್ವವಿಖ್ಯಾತ ಜಂಜೂ ಸವಾರಿಯಲ್ಲಿ 14 ಭಾರಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತಿದ್ದ ಬಲರಾಮನಿಗೆ ಗುಂಡು ಹಾಕಿದ್ದ ಜಮೀನಿನ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿನ ಮಾಲೀಕನಾಗಿರುವ ಸುರೇಶ್, ತನ್ನ ಜಮೀನಿಗೆ ಅನೆ ಬಂದಿದೆ ಎಂದು ಸಿಟ್ಟಿನಿಂದ ಗುಂಡು ಹಾರಿಸಿದ್ದಾನೆ. ಆತನಿಗೆ ಅದು ಮೈಸೂರಿನ ದಸರಾ ಆನೆ ಎಂದು ತಿಳಿದಿರಲಿಲ್ಲ. ಬಲರಾಮನ ತೊಡೆಗೆ

ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ! Read More »

ಕರ್ನಾಟಕ

ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ ➤ ಹೈಕೋರ್ಟ್ ಮಹತ್ವದ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ಈ ವರ್ಷ ಹೊಂಡ-ಗುಂಡಿ ಬಿದ್ದ ರಸ್ತೆಗಳಲ್ಲಿ ಆಗಿರುವ ಗಂಡಾಂತರಗಳು ಒಂದೆರಡಲ್ಲ. ಈ ಸಂಧರ್ಭಗಳಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಾರೆ. ಮಹಾನಗರ ಪಾಲಿಕೆ ಸರಿಯಾಗಿ ಕೆಲಸ ಮಾಡಿಸುತ್ತಿಲ್ಲ. ಗುತ್ತಿಗೆದಾರರು ಕೇವಲ ಹಣ ಮಾಡಲು ನೋಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುತ್ತದೆ.   ಆದುದರಿಂದ ಗುಂಡಿಗಳು ಮತ್ತು ರಸ್ತೆಗಳ ದುಸ್ಥಿತಿಯಿಂದಾಗಿ ಜನರು ಗಂಭೀರ ಗಾಯಗೊಂಡರೆ ಅಥವಾ ಸಾವು ಸಂಭವಿಸುವುದನ್ನು ಗಂಭೀರವಾಗಿ ಪರಿಗಣಿಸುವ ಹೈಕೋರ್ಟ್, ಈ ಕುರಿತು ಯಾವುದೇ ನಾಗರಿಕರು ವ್ಯಾಪ್ತಿಯ ಪೋಲೀಸ್ ಠಾಣೆಯನ್ನು ಸಂಪರ್ಕಿಸಿ

ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ ➤ ಹೈಕೋರ್ಟ್ ಮಹತ್ವದ ಆದೇಶ Read More »

ಕರ್ನಾಟಕ

ಹೆಜ್ಜೇನು ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 16. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಮೃತಪಟ್ಟರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಪ್ರಕರಣ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಬೀಚ್ ಬಳಿ ನಡೆದಿದೆ. ಮೃತಪಟ್ಟವರನ್ನು ವಾಸುದೇವ ಡಿ. ಸಾಲಿಯಾನ್ (65) ಹಾಗೂ ಗಾಯಾಳುವನ್ನು ಚಂದ್ರಶೇಖರ್(65) ಎಂದು ಗುರುತಿಸಲಾಗಿದೆ. ಪಡುಬಿದ್ರೆ ಬೀಚ್ ಬಳಿ ಅಡ್ಡಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಹೆಜ್ಜೇನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ.

ಹೆಜ್ಜೇನು ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಡಾರ- ರೆಬೆಲ್ಲಾ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಹಾಕಿಸುವಂತೆ ಮನವಿ  ➤ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ                                        

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ. 16. ಚಿಕ್ಕಮಕ್ಕಳಿಂದ 18ನೇ ವಯೋಮಾನದವರೆಗಿನ ಮಕ್ಕಳನ್ನು ಕಾಡುವ ದಡಾರ –ರೆಬೆಲ್ಲಾ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಸಾರ್ವಜನಿಕರು ಸಕಾಲದಲ್ಲಿ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು. ಅವರು ದಡಾರ-ರುಬೆಲ್ಲಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಲಸಿಕಾ ಅಭಿಯಾನ ಹಾಗೂ ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಸಿಕೆಯನ್ನು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಅಂಗನವಾಡಿಗಳಲ್ಲಿ, ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು

ದಡಾರ- ರೆಬೆಲ್ಲಾ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಹಾಕಿಸುವಂತೆ ಮನವಿ  ➤ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ                                         Read More »

ಕರ್ನಾಟಕ
Scroll to Top