news kadaba desk

ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ➤ 15 ವಿದ್ಯಾರ್ಥಿಗಳು ಮೃತ್ಯು..!

(ನ್ಯೂಸ್ ಕಡಬ) newskadaba.com  ಮಣಿಪುರ , ಡಿ 21 :  ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಗಳು ನಿಯಂತ್ರಣ ಕಳೆದುಕೊಂಡು ಅಪಘಾತವಾದ ಭೀಕರ ಘಟನೆ ಮಣಿಪುರದ ನೋನಿ ಜಿಲ್ಲೆಯ ಲಾಂಗ್ಸಾಯ್ ತುಬುಂಗ್ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 15 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ  ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೋಗುತ್ತಿದ್ದ  ಎರಡು ಬಸ್ ಗಳು ಯಾರಿಪೋಕ್ ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಗೆ ಸೇರಿದ್ದು. ಈ ಬಸ್ಸುಗಳು ಅಧ್ಯಯನ ಪ್ರವಾಸಕ್ಕಾಗಿ […]

ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ➤ 15 ವಿದ್ಯಾರ್ಥಿಗಳು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ : ಕಸದ ತೊಟ್ಟಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಡಿ 21 : ಪೊಲೀಸರು ಧರಿಸುವ ನಾಲ್ಕು ಟೋಪಿಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಸುವರ್ಣ ಆರ್ಕೇಡ್ ಬಳಿ ನಡೆದಿದೆ. ಮೂರು ಖಾಕಿ ಟೋಪಿ ಹಾಗೂ ಒಂದು ಬಿಳಿ ಟೋಪಿ ಕಸದ ತೊಟ್ಟಿಯಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಪೊಲೀಸ್ ಸಮವಸ್ತ್ರ, ಬೆಲ್ಟ್, ಟೋಪಿಗೆ ಇದಕ್ಕೆಲ್ಲಾ ಅದರದ್ದೇ ಆದ ಕನೂನು ನಿಯಮಗಳಿವೆ. ಹಾಳಾದ ಟೋಪಿ ಅಥವಾ ಸಮವಸ್ತ್ರವನ್ನು ವಿಲೇವಾರಿ ಮಾಡುವಲ್ಲಿಯೂ ಅದರದ್ದೇ ಆದ ನಿಯಮವನ್ನು ಪಾಲಿಸಬೇಕು. ಈ ರೀತಿ

ಬೆಳ್ತಂಗಡಿ : ಕಸದ ತೊಟ್ಟಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ Read More »

ಕರಾವಳಿ

ಮನೆಗಳ್ಳತನ ಪ್ರಕರಣದ ಶಿವಮೊಗ್ಗ ಮೂಲದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 21. ಉಡುಪಿ ತಾಲೂಕು ಶಿವಳ್ಳಿಯಲ್ಲಿ ಡಿ.11 ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಎಂದು ಗುರುತಿಸಲಾಗಿದೆ. ಬಂಧನದ ವೇಳೆ ಈತ ಕಳವು ಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿದ್ದ 4 ಲಕ್ಷ 35 ಸಾವಿರ ರೂ. ಮೌಲ್ಯದ ವಜ್ರದ ಉಂಗುರ, ಚಿನ್ನಾಭರಣ, ಬೆಳ್ಳಿ ಗಟ್ಟಿ ಮುಂತಾದವುಗಳನ್ನು ವಶಕ್ಕೆ ಪಡೆಯಲಾಗಿದೆ. ನಂತರ

ಮನೆಗಳ್ಳತನ ಪ್ರಕರಣದ ಶಿವಮೊಗ್ಗ ಮೂಲದ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಗೃಹ ಪ್ರವೇಶದ ಮನೆಯಲ್ಲಿ ಕಳ್ಳನ ಕೈಚಳಕ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 21. ಕಳ್ಳನೋರ್ವ ಗೃಹ ಪ್ರವೇಶದ ಸಂದರ್ಭದಲ್ಲಿ ಎಲ್ಲರ ಮುಂದೆ ಕಳ್ಳತನ ಮಾಡಿ ನಂತರ ಅದೇ ದಿನ ರಾತ್ರಿ ನೆರೆ ಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗದನ್ನು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ. ಈತ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿ ಬ್ಯಾಗಲ್ಲಿದ್ದ ರೂ 15,000 ನಗದು, ಮೊಬೈಲ್ ಜಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕಳವು ಮಾಡಿ ಹೊರಬಂದ ದೃಶ್ಯ ಹಾಗೂ ಅದೇ ದಿನ

ಉಳ್ಳಾಲ: ಗೃಹ ಪ್ರವೇಶದ ಮನೆಯಲ್ಲಿ ಕಳ್ಳನ ಕೈಚಳಕ Read More »

ಕರಾವಳಿ, ಕರ್ನಾಟಕ

ಯುವಕನ ಬರ್ಬರ ಕೊಲೆ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಯುವಕನೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಗಡೆನಗರದ ಬಾಲಾಜಿ ಲೇಔಟ್ ಬಳಿ ಸಂಭವಿಸಿದೆ. ಕೊಲೆಯಾದ ಯುವಕನನ್ನು ಹೆಗಡೆನಗರ ನಿವಾಸಿ ಸಲ್ಮಾನ್ (17) ಎಂದು ಗುರುತಿಸಲಾಗಿದೆ. ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಂದ ಹಂತಕರು ಯುವಕನನ್ನು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಯುವಕನ ಬರ್ಬರ ಕೊಲೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರಿ ನಲ್ಲೇ ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ. 21. ಕಾರಿನಲ್ಲೇ ಸಾಫ್ಟ್ ವೇರ್ ಉದ್ಯೋಗಿಯೋರ್ವರು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಮೃತರನ್ನು ವಿಜಯ್ ಕುಮಾರ್ (51) ಎಂದು ಗುರುತಿಸಲಾಗಿದೆ. ಇವರು ಐಟಿ ಎಂಜಿನಿಯರ್ ಆಗಿದ್ದರು. ಇವರು ಮಹಾಲಕ್ಷ್ಮಿ ಲೇಔಟ್ ನ ಕುರುಬರಹಳ್ಳಿ ಜಂಕ್ಷನ್ ನಲ್ಲಿ ಕಾರಿನ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡಿ, ಗ್ಲಾಸ್ ಕ್ಲೋಸ್  ಮಾಡಿಕೊಂಡು ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡಿರೋದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸಾವು ಬದುಕಿನ ನಡುವೆ

ಕಾರಿ ನಲ್ಲೇ ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೊಲೆರೋ ವಾಹನ ಅಪಘಾತ ➤ 16 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 21. ಹತ್ತಿ ಬಿಡಿಸುವ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿ 16 ಮಂದಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಸಂಭವಿಸಿದೆ. ಇದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ಬೊಲೆರೋ ವಾಹನ ಅಪಘಾತ ➤ 16 ಮಂದಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಧಿಕಾರಿಯವರಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಸಮುದಾಯದ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ದುರುಪಯೋಗ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಹಿನ್ನಲೆ ಸಮಾಜದ ಹಿತದೃಷ್ಟಿಯಿಂದ ಆ ಗುರುತಿನ ಚೀಟಿಯನ್ನು ದುರುಪಯೋಗ ಮಾಡದಂತೆ ಹಾಗೂ ಮುಂದಿನ ದಿನಗಳಲ್ಲಿ ದುರುಪಯೋಗ ಮಾಡುವುದು ಕಂಡು ಬಂದಲ್ಲಿ ಗುರುತು ಚೀಟಿಯನ್ನು ರದ್ದುಪಡಿಸಲಾಗುವುದು. ಮಂಗಳೂರು ತಾಲೂಕಿನ ಸುತ್ತಮುತ್ತಲು ಮತ್ತು ವಿಶೇಷವಾಗಿ ಮಹಿಳೆಯರು ಲಿಂಗತ್ವ ಅಲ್ಪಸಂಖ್ಯಾತರಂತೆ ವರ್ತಿಸಿ ಜನರಿಂದ ಹಣ ಹಾಗೂ ಇತರೆ

ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು : 7ನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ. 21. ಕಟ್ಟಡದ 7 ನೇ ಮಹಡಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಆವರಣದಲ್ಲಿ ಸಂಭವಿಸಿದೆ. ಮೃತ ಕಾರ್ಮಿಕರನ್ನು ಪಶ್ಚಿಮ ಬಂಗಾಳದ ಮೂಲದ ಎಸ್.ಕೆ.ಜಿಯಾರುಲ್ (24) ಎಂದು ಗುರುತಿಸಲಾಗಿದೆ. ಮಗನ ಸಾವಿನ ಕುರಿತು ತಾಯಿ ನೀಡಿರುವ ದೂರಿನನ್ವಯ, ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಎವಿಎಸ್ ಕಂಪನಿಯ ಜವಾಹರ್, ಎಂಜಿನಿಯರ್ ನಂಬಿರಾಜನ್, ಉಸ್ತುವಾರಿ ಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು : 7ನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬ್ರಹ್ಮಾವರ: ಮನೆ ಕಳವು ಆರೋಪಿಯ ಬಂಧನ  ➤ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ    

(ನ್ಯೂಸ್ ಕಡಬ) newskadaba.com  ಬ್ರಹ್ಮಾವರ, ಡಿ.21. ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಈತ ಹೊಂಡಾ ಮ್ಯಾಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಡೆದು ಪರಿಶೀಲನೆ ನಡೆಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಆತನ ಜೊತೆಯಿದ್ದು, ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ

ಬ್ರಹ್ಮಾವರ: ಮನೆ ಕಳವು ಆರೋಪಿಯ ಬಂಧನ  ➤ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ     Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top