news kadaba desk

ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ !

(ನ್ಯೂಸ್ ಕಡಬ)newskadaba.com ಕೊಲಂಬಿಯಾ, ಜು.15. ವಿಮಾನವೊಂದು ಪತನಗೊಂಡ ಬಳಿಕ 40 ದಿನ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಚಿಕಿತ್ಸೆ ಪಡೆದು ಒಂದು ತಿಂಗಳ ಬಳಿಕ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಕೊಲಂಬಿಯಾ ಸೇನೆ ‘ಆಪರೇಷನ್‌ ಆನ್‌ ಹೋಪ್‌’ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಲೆಸ್ಲಿ (13 ), ಸೊಲೀನಿ (9), ಟೈನ್ ನೊರಿಯಲ್ (4) […]

ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಡಬ: ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೇಮಕಾತಿಗೆ ಅರ್ಜಿ ಆಹ್ವಾನ   ➤ ತಕ್ಷಣಕ್ಕೆ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.15. ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್’ ಮತ್ತು ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. 17-01-2018 ರಂದು ಸರ್ಕಾರ ಹೊರಡಿಸಿದ ಆದೇಶದ ಅನುಸಾರ, ಕಡಬ ತಾಲೂಕು ಕಛೇರಿಯಲ್ಲಿ 1 ಬೆರಳಚ್ಚುಗಾರರು, ಡಾಟಾ ಎಂಟ್ರಿ ಆಪರೇಟರ್ ಮತ್ತು 3 ಡಿ ಗ್ರೂಪ್ ದರ್ಜೆ ನೌಕರರನ್ನು, ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ

ಕಡಬ: ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೇಮಕಾತಿಗೆ ಅರ್ಜಿ ಆಹ್ವಾನ   ➤ ತಕ್ಷಣಕ್ಕೆ ಅಪ್ಲೈ ಮಾಡಿ Read More »

ಉದ್ಯೋಗ, ಕರಾವಳಿ

ಜುಲೈ.21ಕ್ಕೆ ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಯ ಕೋರ್ಟ್ ತೀರ್ಪು ಪ್ರಕಟ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು.15. ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ವಾರಾಣಸಿ ಜಿಲ್ಲಾ ಕೋರ್ಟ್ ಜುಲೈ 21ಕ್ಕೆ ತೀರ್ಪು ಪ್ರಕಟಿಸಲಿದೆ. ಇದೀಗ ಎರಡೂ ಕಡೆಯ ವಾದ -ಪ್ರತಿವಾದ ಆಲಿಸಿರುವ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ಹಿಂದೂ ಪರ ಅರ್ಜಿದಾರರಿಂದ ಶಿವಲಿಂಗ ಪತ್ತೆ ಸ್ಥಳವಾದ ವಜುಖಾನಾ ಹೊರತುಪಡಿಸಿ ಇಡೀ ಗ್ಯಾನವ್ಯಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ

ಜುಲೈ.21ಕ್ಕೆ ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಯ ಕೋರ್ಟ್ ತೀರ್ಪು ಪ್ರಕಟ Read More »

ರಾಷ್ಟ್ರೀಯ ನ್ಯೂಸ್

ಜು. 19ರಿಂದ ‘ಭಾಗ್ಯಲಕ್ಷ್ಮೀ’ ಅರ್ಜಿ ಸ್ವೀಕಾರ ಆರಂಭ ➤ ಆಧಾರ್ ಲಿಂಕ್ ಆಗದಿದ್ರೂ ಬರುತ್ತೆ ಹಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.15. ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯು (ಜು. 19) ಜಾರಿಯಾಗಲಿದೆ ಎನ್ನಲಾಗಿದೆ. ಈ ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಆ. 18ರಿಂದ ನೀಡಲಾಗುತ್ತದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಚಾರ ತಿಳಿಸಿದರು.

ಜು. 19ರಿಂದ ‘ಭಾಗ್ಯಲಕ್ಷ್ಮೀ’ ಅರ್ಜಿ ಸ್ವೀಕಾರ ಆರಂಭ ➤ ಆಧಾರ್ ಲಿಂಕ್ ಆಗದಿದ್ರೂ ಬರುತ್ತೆ ಹಣ Read More »

ಕರ್ನಾಟಕ

ಆ.16 ರಂದು ಮಹಿಳೆಯರ ಖಾತೆಗೆ 2,000 ರೂ. ಪಾವತಿ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಗೃಹಲಕ್ಷ್ಮಿ ಯೋಜನೆಗೆ ನಾಲ್ಕೈದು ದಿನಗಳಲ್ಲಿ ಆ್ಯಪ್ ಬಿಡುಗಡೆ ಮಾಡಿ, ಅರ್ಜಿ ಸಲ್ಲಿಕೆ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ. ಅರ್ಜಿ ಸಲ್ಲಿಸಿದ ಪ್ರತಿ ಮನೆ ಯಜಮಾನಿಯ ಅಕೌಂಟಿಗೆ ಆ.16 ರಂದು ವರ್ಗಾವಣೆ ಮೂಲಕ 2,000 ರೂ. ಗ್ಯಾರಂಟಿ ಹಣ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆ.16 ರಂದು ಮಹಿಳೆಯರ ಖಾತೆಗೆ 2,000 ರೂ. ಪಾವತಿ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Read More »

ಕರ್ನಾಟಕ

ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಏರಿಕೆ- ಕೈ ಕಟ್ಟಿ ಕುಳಿತ ಪಾಲಿಕೆ

(ನ್ಯೂಸ್ ಕಡಬ) newskadaba.com ದಾವಣಗೆರೆ, ಜು. 15. ಮುಂಗಾರು ಮಳೆ ವೇಳೆ ಮನೆಯ ಸುತ್ತಲಿನ ಘನ ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗಿ, ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಡುವುದರಿಂದ ಕೀಟ ಜನ್ಯ ರೋಗಗಳು, ಸಾರ್ವಜನಿಕರನ್ನು ಹೆಚ್ಚಾಗಿ ಭಾದಿಸುತ್ತಿವೆ. ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ವೇಗದಲ್ಲಿ ಸಾಗುತ್ತಿದ್ದು, ಜನವರಿಯಿಂದ ಮೇ ತಿಂಗಳವರೆಗೆ 15ರ ಅಂಕಿ ದಾಟದ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಸಂಖ್ಯೆ, ಜೂನ್ ಮತ್ತು ಜುಲೈ ಮೊದಲ ವಾರದಲ್ಲಿ 41 ಕೇಸುಗಳು ಪತ್ತೆಯಾಗಿದೆ.

ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಏರಿಕೆ- ಕೈ ಕಟ್ಟಿ ಕುಳಿತ ಪಾಲಿಕೆ Read More »

ಕರ್ನಾಟಕ

ಫ್ರಾನ್ಸ್ ಬಿಟ್ಟು ಯುಎಇ’ಗೆ ತೆರಳಿದ ಮೋದಿ

(ನ್ಯೂಸ್ ಕಡಬ)newskadaba.com ನವದಹಲಿ, ಜು.15. ಫ್ರಾನ್ಸ್ ಪ್ರವಾಸ ಮುಗಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಈ ಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ , ವ್ಯಾಪಾರ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಫ್ರಾನ್ಸ್ ಬಿಟ್ಟು ಯುಎಇ’ಗೆ ತೆರಳಿದ ಮೋದಿ Read More »

ರಾಷ್ಟ್ರೀಯ ನ್ಯೂಸ್
Death, deadbody, Waterfall

ಸುರತ್ಕಲ್: ಮೀನು ಹಿಡಿಯಲು ನೀರಿಗಿಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಸುರತ್ಕಲ್, ಜು.15. ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುರತ್ಕಲ್ ನಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಪೋರ್ಕೊಡಿ ನಿವಾಸಿ ಪೂವಪ್ಪ(40) ಎಂದು ಗುರುತಿಸಲಾಗಿದೆ. ತೋಕೂರು ಬಳಿಯ ಜಾರಂದಾಯ ದೈವಸ್ಥಾನದ ಗುತ್ತಿನ ಮನೆಯ ಸಮೀಪದ ಕೆರೆಗೆ ಅಣ್ಣ ತಮ್ಮಂದಿರು ಮೀನು ಹಿಡಿಯಲೆಂದು ಇಳಿದಿದ್ದು, ಕೆಸರಿನಲ್ಲಿ ಹೂತು ಹೋದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.  

ಸುರತ್ಕಲ್: ಮೀನು ಹಿಡಿಯಲು ನೀರಿಗಿಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾರ್ಕಳ, ಜು.15. ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಾರ್ಕಳ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಸೌರವ್ ಕುಮಾರ್ (20) ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದು, ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಈತ ಹಾಗೂ ಈತನ ಸ್ನೇಹಿತರು ವಾಸಿಸುತ್ತಿದ್ದ ಕಟ್ಟಡದ ಆಸುಪಾಸಿನಲ್ಲಿ ಮಂಗಗಳ ಕಾಟ ಹೆಚ್ಚಾಗಿತ್ತು. ಕೆಲವು ವಸ್ತುಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ, ಯುವಕರು ಕಾಣೆಯಾದ ವಸ್ತುಗಳನ್ನು ಹುಡುಕಲು ಟೆರೇಸ್

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಟೊಮೆಟೋ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಸಾರ್ವಜನಿಕರ ನಿದ್ದೆಗೆಡಿಸಿರುವ ಟೊಮೆಟೋ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಟೊಮೆಟೋ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದ್ದು, ಟೊಮೆಟೋ ಬೆಲೆ ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದ್ದು, ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯದಿಂದ ಟೊಮೊಟೋ ಬೆಳೆ

ಟೊಮೆಟೋ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ..! Read More »

ಕರ್ನಾಟಕ
Scroll to Top