news kadaba desk

‘ಸೋಲು-ಗೆಲುವು ಹೊಸದೇನಲ್ಲ’ ಎಂದ ಮಾಜಿ ಸಿಎಂ.!➤ ಎಚ್​​ಡಿ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ .13  ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸೋಲು-ಗೆಲುವು  ಹೊಸದೇನಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಎಚ್​​ಡಿಕೆ ಹೇಳಿದ್ದಾರೆ. ಕಾಂಗ್ರೆಸ್​ ಸ್ಪಷ್ಟ ಬಹುಮತದತ್ತ ಮುನ್ನಡೆ ಸಾಧಿಸಿದೆ. […]

‘ಸೋಲು-ಗೆಲುವು ಹೊಸದೇನಲ್ಲ’ ಎಂದ ಮಾಜಿ ಸಿಎಂ.!➤ ಎಚ್​​ಡಿ ಕುಮಾರಸ್ವಾಮಿ Read More »

ಕರ್ನಾಟಕ

ಓವರ್‌ಚಾರ್ಜ್‌ನಿಂದ ಇ–ರಿಕ್ಷಾ ಬ್ಯಾಟರಿ ಸ್ಪೋಟ.! ➤ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಲಕ್ನೋ,ಮೇ.13 ಮನೆಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಇ–ಆಟೋ ರಿಕ್ಷಾದ ಬ್ಯಾಟರಿ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇ-ರಿಕ್ಷಾವೊಂದರ ಬ್ಯಾಟರಿಯು ಓವರ್‌ಚಾರ್ಜ್‌ನಿಂದ ಸ್ಫೋಟಗೊಂಡಿದೆ ಎಂದು ಪೂರ್ವ ಡಿಸಿಪಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ. ಸ್ಫೋಟದ ಶಬ್ದವನ್ನು ಕೇಳಿ ಅಂಕಿತ್‌ ತನ್ನ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಅಂಕಿತ್‌ ಅವರ ಪತ್ನಿ ರೇಣು ಮಗ ಕುಂಜ್, ಸೊಸೆ ರಿಯಾ ಸುಟ್ಟಗಾಯದಿಂದ ಬಿದ್ದಿರುವುದನ್ನು ನೋಡಿದ್ದಾರೆ.

ಓವರ್‌ಚಾರ್ಜ್‌ನಿಂದ ಇ–ರಿಕ್ಷಾ ಬ್ಯಾಟರಿ ಸ್ಪೋಟ.! ➤ ಮೂವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಡ್ರೈವಿಂಗ್ ಕಲಿಯುವಾಗ ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಕಾರು ನಿಲ್ಲಿಸಿದ ಚಾಲಕಿ

(ನ್ಯೂಸ್ ಕಡಬ) Newskadaba.com ಕಾನ್ಪುರ,ಮೇ.13 ವಾಹನ ಚಾಲನೆ ಎಂಬುದು ಸೂಕ್ಷ್ಮ ಜವಾಬ್ದಾರಿ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ, ನಿರ್ಲಕ್ಷ್ಯ ವಹಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಾನ್ಪುರದಲ್ಲಿ ಯುವತಿಯೊಬ್ಬಳು  ಕಾರನ್ನು ಚಲಾಯಿಸಲು ಹೋಗಿ ಪಾರ್ಕ್‌ ಮಾಡಿದ್ದ ಬೈಕ್, ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದ್ದಾಳೆ. ಈ ದೃಶ್ಯವನ್ನು ನೋಡುವಾಗಲೇ ದಿಗಿಲಾಗುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಹೋಗಿ ನಿಂತಿರುವುದು ಕಾಣಿಸುತ್ತದೆ. ಚಾಲಕಿ ಕಾರಿನಲ್ಲೇ ಇರುವುದು ಕಾಣಿಸುತ್ತದೆ.

ಡ್ರೈವಿಂಗ್ ಕಲಿಯುವಾಗ ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಕಾರು ನಿಲ್ಲಿಸಿದ ಚಾಲಕಿ Read More »

ರಾಷ್ಟ್ರೀಯ ನ್ಯೂಸ್

ಅಥಣಿಯಲ್ಲಿ ಲಕ್ಷ್ಮಣ್‌ ಸವದಿಗೆ ಭರ್ಜರಿ ಜಯ..!

(ನ್ಯೂಸ್ ಕಡಬ) Newskadaba.com ಬೆಳಗಾವಿ,ಮೇ.13 ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಟಿಕೆಟ್‌ ಸಿಗದೇ ಕಾಂಗ್ರೆಸ್‌ ಸೇರಿದ್ದ ಲಕ್ಷ್ಮಣ್‌ ಸವದಿ ಅಥಣಿಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ರೋಚಕ ಹಣಾಹಣಿಯಿಂದ ಕರ್ನಾಟಕದ ಗಮನ ಸೆಳೆದಿದ್ದ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಲಕ್ಷ್ಮೀಯನ್ನು ಲಕ್ಷ್ಮಣ್‌ ಸವದಿ ತಮ್ಮದಾಗಿಸಿಕೊಂಡಿದ್ದಾರೆ. ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿಯಾಗಿದ್ದರೂ ಲಕ್ಷ್ಮಣ್‌ ಸವದಿ ಹಾಗೂ ರಮೇಶ್‌ ಜಾರಕಿಹೊಳಿ ನಡುವಿನ ಕದನ ರಾಜ್ಯದ ಜನರನ್ನು ಆಕರ್ಷಿಸಿತ್ತು.ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ

ಅಥಣಿಯಲ್ಲಿ ಲಕ್ಷ್ಮಣ್‌ ಸವದಿಗೆ ಭರ್ಜರಿ ಜಯ..! Read More »

ಕರ್ನಾಟಕ

ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ➤ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 2023-24ರ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿಯುಸಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಒಬಿಸಿ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಪದವಿ ಪೂರ್ವ ಕಾಲೇಜು ಮತ್ತು ಡಾ.ಎ.ಪಿ.ಜಿ. ಅಬ್ದುಲ್ ಕಲಾಂ ವಸತಿ ಶಾಲೆಗಳ (ಸಿಬಿಎಸ್‌ಇ) ಉಚಿತ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ➤ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಕರ್ನಾಟಕ

ಚಾಮರಾಜನಗರದಲ್ಲಿ ಬಿಜೆಪಿಯ ವಿ.ಸೋಮಣ್ಣಗೆ ಸೋಲು..!

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಸುತ್ತಿನಲ್ಲಿ ಹಾವು- ಏಣಿ ಆಟ ಮುಂದುವರೆದಿದೆ. ಸಿಎಂ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರಾಗಿರುವ ವಿ. ಸೋಮಣ್ಣ ಅವರು ಬಿಜೆಪಿ ವರಿಷ್ಠರ ಸೂಚನೆಯಂತೆ ಚಾಮರಾಜನಗರ ಹಾಗು ಮೈಸೂರಿನ ವರುಣಾದಿಂದ ಸ್ಪರ್ಧಿಸಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ವಿರುದ್ಧ ಸೋಲನುಭವಿಸಿದ್ದಾರೆ. ವರುಣಾದಲ್ಲಿ ಸಿದ್ಧರಾಮಯ್ಯ ವಿರುದ್ಧವೂ ಸೋಲನುಭವಿಸಿದ್ದಾರೆ. ಆರಂಭಿಕ ಮತ ಎಣಿಕೆಯಲ್ಲಿ ಹಿನ್ನಡೆ ಸಾಧಿಸಿದಾಗ ಸೋಲಿನ ಭೀತಿ ಎದುರಾಗುತ್ತಿದ್ದಂತೆ ಮತ ಕೇಂದ್ರದಿಂದ ಹೊರ

ಚಾಮರಾಜನಗರದಲ್ಲಿ ಬಿಜೆಪಿಯ ವಿ.ಸೋಮಣ್ಣಗೆ ಸೋಲು..! Read More »

ಕರ್ನಾಟಕ

ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ➤ಕಮಲ ಪಾಳಯದಲ್ಲಿ ಆತಂಕ..!

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಗೆಲುವಿನ ಲೆಕ್ಕಾಚಾರಗಳು ಸಹ ಗರಿಗೆದರಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚಸಲಿದ್ದು, ಬಿಜೆಪಿ ಕೇವಲ 85 ಸೀಟ್‌ಗಳನ್ನು ಮಾತ್ರ ತೆಗೆದುಕೊಳ್ಳಲಿದೆ ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಕರುನಾಡಿನಲ್ಲಿ ತನ್ನ ಅಧಿಪತ್ಯವನ್ನು ಸಾಧಿಸುತ್ತೇವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ ಕಮಲ

ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ➤ಕಮಲ ಪಾಳಯದಲ್ಲಿ ಆತಂಕ..! Read More »

ಕರ್ನಾಟಕ

ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಶೋಕ್ ರೈಗೆ ಮುನ್ನಡೆಯಾಗಿದೆ.ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾಗೆ ಮುನ್ನಡೆಯಾಗಿದೆ. ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಈಗ 115 ಕ್ಷೇತ್ರಗಳ್ಲಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ, 24 ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ Read More »

ಕರ್ನಾಟಕ

ಬಂಟ್ವಾಳ: ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ➤ ತಾಯಿ, ಮಗನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 13.  ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಚೆಂಡ್ತಿಮಾರ್ ಎಂಬಲ್ಲಿ ವರದಿಯಾಗಿದೆ. ಗಾಯಗೊಂಡವರನ್ನು ಸರಪಾಡಿ ಗ್ರಾಮದ ವಚ್ಚಾರ್ ನಿವಾಸಿಯಾಗಿರುವ ರಾಜೀವ ಹಾಗೂ ಅವರ ಮಗ ಸಂತೋಷ್ ಅಂಚರ್ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಟ್ವಾಳ: ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ➤ ತಾಯಿ, ಮಗನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಟ್ರಾಕ್ಟರ್ ಮಗುಚಿ ಚಾಲಕ ಮೃತ್ಯು..!!

(ನ್ಯೂಸ್ ಕಡಬ) newskadaba.com  ಕಾಸರಗೋಡು, ಜ.13. ಟ್ರಾಕ್ಟರೊಂದು ಮಗುಚಿ ಬಿದ್ದ ಪರಿಣಾಮ ಚಾಲಕನೋರ್ವ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ.   ಮೃತಪಟ್ಟ ಚಾಲಕನನ್ನು ನೇಪಾಳದ ರುನ್ಕಾವ್ ನಿವಾಸಿ ಸುರೇಶ್ ಪೊನ್ ಎಂದು ಗುರುತಿಸಲಾಗಿದೆ.   ಕಾಸರಗೋಡಿನ ಪೈವಳಿಕೆ- ಚೇವಾರ್ ರಸ್ತೆಯಲ್ಲಿರುವ ಕಟ್ಟದಮನೆ ಸೇತುವೆ ಬಳಿ ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಟ್ರ್ಯಾಕ್ಚರ್ ಮಗುಚಿ ಬಿದ್ದಾಗ ಸುರೇಶ್ ಅವರು ಅದರಡೆಯಲ್ಲಿ ಸಿಲುಕಿದ್ದು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಈತ

ಟ್ರಾಕ್ಟರ್ ಮಗುಚಿ ಚಾಲಕ ಮೃತ್ಯು..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top