news kadaba desk

ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ

(ನ್ಯೂಸ್ ಕಡಬ)newskadaba.com ಸುಳ್ಯ, ಜು.26. ಅಂತಾರಾಜ್ಯ ರಸ್ತೆಯಲ್ಲಿ ಕಾಂಞಂಗಾಡ್-ಪಾಣತ್ತೂರು- ಕಲ್ಲಪಳ್ಳಿ-ಸುಳ್ಯ ಮಾರ್ಗದಲ್ಲಿ ಜು.27ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇನ್ನೊಂದು ಬಸ್ ಸಂಚಾರ ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಪಾಣತ್ತೂರಿನಿಂದ ಬೆಳಿಗ್ಗೆ 5:50 ಹೊರಟು ಸುಳ್ಯ6:40ಕ್ಕೆ ತಲುಪಲಿದೆ. ಸುಳ್ಯದಿಂದ ಬೆಳಿಗ್ಗೆ 6:50ಕ್ಕೆ ಹೊರಟು ಪಾಣತ್ತೂರಿಗೆ 7:40ಕ್ಕೆ ತಲುಪಲಿದೆ. ಬೆಳಿಗ್ಗೆ ಪಾಣತ್ತೂರಿನಿಂದ 7:50ಕ್ಕೆ ಹೊರಟು 9.20ಕ್ಕೆ ಕಾಂಞಂಗಾಡು 9: 30ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ. ಸುಳ್ಯ-ಪಾಣತ್ತೂರು- ಕಾಞಂಗಾಡ್ ರಸ್ತೆಯಲ್ಲಿ ಈಗಾಗಲೇ ಒಂದು ಬಸ್ ಓಡಾಟ ನಡೆಸುತಿದೆ ಎಂದು ತಿಳಿದುಬಂದಿದೆ.

ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ Read More »

ಕರಾವಳಿ

(ಜು.31)ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸಿಎಂ ಭೇಟಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ ಮನೆಗಳು, ರಸ್ತೆ ಕುಸಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ರಾಜ್ಯದ ಮಳೆಪೀಡಿತ ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸೋಮವಾರ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಲಾಗುವುದು. ಸಚಿವ ಕೃಷ್ಣ

(ಜು.31)ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸಿಎಂ ಭೇಟಿ Read More »

ಕರ್ನಾಟಕ

ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ವಂಚನೆ – ಸೈಬರ್ ಸೆಂಟರ್ ಮಾಲೀಕ ಅರೆಸ್ಟ್

(ನ್ಯೂಸ್ ಕಡಬ)newskadaba.com ಮೈಸೂರು, ಜು.26. ಗೃಹಲಕ್ಷ್ಮಿ ಯೋಜನೆ ನಕಲಿ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲಿಕನೊಬ್ಬನನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ನಕುಲ್ ನೆಟ್ ವರ್ಕ್ ಹೆಸರಿನಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಎನ್ನಲಾಗಿದೆ. ಗೃಹಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ ಸಿದ್ದಪಡಿಸಿ ಜನರನ್ನು ಯಾಮಾರಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಸುಕೇಶ್ ಕುಮಾರ್ ದೂರು ನೀಡಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.  

ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ವಂಚನೆ – ಸೈಬರ್ ಸೆಂಟರ್ ಮಾಲೀಕ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ – ಐದು ವಾಹನಗಳು ಜಖಂ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ಜಿಟಿ ಜಿಟಿ ಮಳೆ ನಡುವೆ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದ್ದು, ಐದು ವಾಹನಗಳು ಜಖಂಗೊಂಡಿರುವ ಘಟನೆ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ಸರ್ಕಲ್​​ನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿಯ ಸಿಗ್ನಲ್​​​ ನಲ್ಲಿ ವಾಹನಗಳು ನಿಂತಿದ್ದ ವೇಳೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ನಂತರ ಮೂರು ಕಾರು ಒಂದು ಆಟೋ‌ ಕೂಡಾ ಬಂದು ಗುದ್ದಿವೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಸರಣಿ ಅಪಘಾತ

ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ – ಐದು ವಾಹನಗಳು ಜಖಂ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮುಖದ ಅಂದಕ್ಕೆ ಶ್ರೀಗಂಧದ ಎಣ್ಣೆ ಹಚ್ಚುವುದರಿಂದ ಇರುವ ಲಾಭ.! – ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಜು.26. ನಿಮ್ಮ ತ್ವಚೆಗೆ ಶ್ರೀಗಂಧದ ಎಣ್ಣೆಯನ್ನು ಹಚ್ಚುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ? ಶ್ರೀಗಂಧದಲ್ಲಿ ಹಲವು ರೀತಿಯ ಔಷಧಿ ಗುಣಗಳಿದ್ದು ವಿಶಿಷ್ಟ ಪರಿಮಳವನ್ನು ಬೀರುತ್ತದೆ. ಇದು ನಿಮ್ಮ ತ್ವಚೆಯನ್ನು ಕಾಂತಿಯುತವಾಗಿರುವ ಅತ್ಯುತ್ತಮ ನೈಸರ್ಗಿಕ ಎಣ್ಣೆಯಾಗಿದೆ. ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಆರೈಕೆಗೆ ಬಳಸಿ. ಅಂದರೆ ಈ ಎಣ್ಣೆಯನ್ನು ನಿಮ್ಮ ಮುಖ, ಕೈ ಕಾಲುಗಳಿಗೆ ತೆಳುವಾಗಿ ಸವರಿಕೊಳ್ಳಿ. ಮುಖದಲ್ಲಿ ಮೊಡವೆಗಳು ಹೆಚ್ಚಿದ್ದರೆ ಶ್ರೀಗಂಧದ ಎಣ್ಣೆಯನ್ನು ಹಾಕಿ. ಇದು ಉರಿಯುತದ ಗುಣಲಕ್ಷಣಗಳನ್ನು ಹೊಂದಿದೆ ಹಾಗಾಗಿ

ಮುಖದ ಅಂದಕ್ಕೆ ಶ್ರೀಗಂಧದ ಎಣ್ಣೆ ಹಚ್ಚುವುದರಿಂದ ಇರುವ ಲಾಭ.! – ಇಲ್ಲಿದೆ ಮಾಹಿತಿ Read More »

ಲೈಫ್‍ಸ್ಟೈಲ್

ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ

(ನ್ಯೂಸ್ ಕಡಬ)newskadaba.com ಜು.26. ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಾನು ತುಂಬಾ ಚಂದದ ಡ್ರೆಸ್ ಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತ ಮೇಕಪ್, ಲಿಪ್ಸ್ಟಿಕ್ ಹಚ್ಚಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಮುಖದ ಸೌಂದರ್ಯವನ್ನ ಹೆಚ್ಚಿಸೋ ನಿಮ್ಮ ತುಟಿಗಳು ಆರೋಗ್ಯವಾಗಿಲ್ಲ ಅಂದರೆ ನೀವು ಅದೆಷ್ಟೇ ಮೇಕಪ್ ಮಾಡಿದ್ರೂ ವ್ಯರ್ಥ. ನಯವಾದ ತುಟಿಗಳನ್ನ ಹೊಂದಬೇಕು ಅಂದರೆ ತುಟಿಗಳ ಆರೈಕೆ ಮಾಡೋದೂ ಕೂಡ ಅಷ್ಟೇ ಅವಶ್ಯಕ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಾದದ್ದು ಏನೂ ಇಲ್ಲ. ತುಟಿ ಒಣಗಿದ ಹಾಗೆ ಇದ್ದಂತೆಯೇ ನಾವು ನಾಲಗೆಯಿಂದ

ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ Read More »

ಲೈಫ್‍ಸ್ಟೈಲ್

ಪೊಲೀಸರಿಗೆ ಗುಡ್ ನ್ಯೂಸ್ – ಹುಟ್ಟು ಹಬ್ಬದ ದಿನ ರಜೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ ನೀಡಲಾಗುವುದು. ರಾಜಧಾನಿ ಬೆಂಗಳೂರಿನ ಪೊಲೀಸರಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಶುಭ ಸುದ್ದಿ ನೀಡಿದ್ದು, ತಮ್ಮ ಹುಟ್ಟಿದ ದಿನವೂ ಕುಟುಂಬದವರೊಂದಿಗೆ ಸಮಯ ಕಳೆಯಲಾಗದೇ ಪರದಾಡುತ್ತಿದ್ದ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಪೊಲೀಸರಿಗೆ ಇನ್ನು ಮುಂದೆ ಹುಟ್ಟು ಹಬ್ಬದ ದಿನ ರಜೆ ನೀಡಲಾಗುವುದು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಒಂದು ದಿನ ರಜೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.  

ಪೊಲೀಸರಿಗೆ ಗುಡ್ ನ್ಯೂಸ್ – ಹುಟ್ಟು ಹಬ್ಬದ ದಿನ ರಜೆ Read More »

ಕರ್ನಾಟಕ

ಚಂದ್ರಯಾನ-3 ನೌಕೆಯ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ – ಆ.1ರಿಂದ ಚಂದ್ರನತ್ತ ಪ್ರಯಾಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ಶ್ರೀಹರಿಕೋಟಾದ ಉಡ್ಡಯನ ನಲೆಯಿಂದ ಹಾರಿಬಿಡಲಾಗಿದ್ದ ಚಂದ್ರಯಾನ-3 ನೌಕೆ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂಬುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ತಿಳಿಸಿದೆ. ಚಂದ್ರಯಾನ-3 ನೌಕೆಯು 127609 ಕಿಲೋಮೀಟರ್ X236 ಕಿ.ಮೀ ಕಕ್ಷೆಯನ್ನು ಸೇರಿಕೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಮುಂದಿನ ಹಂತದಲ್ಲಿ ಆಗಸ್ಟ್ 1ರಂದು ಮಧ್ಯರಾತ್ರಿ 12 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ನೌಕೆಯು ಭೂಮಿ ಸುತ್ತುವರೆಯುವುದನ್ನು

ಚಂದ್ರಯಾನ-3 ನೌಕೆಯ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ – ಆ.1ರಿಂದ ಚಂದ್ರನತ್ತ ಪ್ರಯಾಣ Read More »

ಕರ್ನಾಟಕ

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸೋರಿಕೆ – 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.26. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಸೋರಿಕೆಯಾಗುತ್ತಿದ್ದು, ಈ ಕುರಿತು ಕಟ್ಟಡದ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರನ್ನು ಶಾಸಕರು ತರಾಟೆಗೆತ್ತಿಕೊಂಡು ತನ್ನ ಕಚೇರಿಗೆ ಬರುವಂತೆ ತಿಳಿಸಿದ್ದರು. ಕಚೇರಿಗೆ ಬಂದ ಸಂಸ್ಥೆಯವರನ್ನು ಶಾಸಕರು ಮತ್ತೇ ಎತ್ತಿಕೊಂಡಿದ್ದು, ಕಾಮಗಾರಿ ಕಳಪೆಯಾಗದಂತೆ ಮತ್ತು ಎಲ್ಲಾ ಕೆಲಸಗಳನ್ನು 15 ದಿನದೊಳಗೆ ಪೂರ್ಣ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಲೇಜಿಗೆ ಭೇಟಿ ನೀಡಿದ ಶಾಸಕರು ನೀರು ಹರಿಯುತ್ತಿರುವುದನ್ನು ಕಂಡು ಆಕ್ರೋಶಗೊಂದ್ದರು.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸೋರಿಕೆ – 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ Read More »

ಕರಾವಳಿ

ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜು.26. ಹಣದ ವಿಚಾರದಲ್ಲಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯಾಹ್ಯ ಕೊಕ್ಕಡ ಎಂಬವರು ನೀಡಿದ ದೂರಿನಂತೆ ಶಿವಪ್ರಸಾದ್ ಪಿ.ಎಂ ಹಾಗೂ ಗಣೇಶ್ ಎಂಬವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ನಿವಾಸಿ ಯಾಹ್ಯ ನೀಡಿದ  ದೂರಿನಂತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಯಾಹ್ಯ ಅವರಿಂದ ಶಿವಪ್ರಸಾದ್ ಎಂಬವರು ಅಂದಾಜು 46 ಲಕ್ಷ ಪಡೆದುಕೊಂಡಿದ್ದು, ಈ ಕುರಿತು ಕರಾರು ಪತ್ರ ಮತ್ತು ಚೆಕ್ ಗಳನ್ನು ನೀಡಿದ್ದಾರೆ.

ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top