ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜು.26. ಹಣದ ವಿಚಾರದಲ್ಲಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯಾಹ್ಯ ಕೊಕ್ಕಡ ಎಂಬವರು ನೀಡಿದ ದೂರಿನಂತೆ ಶಿವಪ್ರಸಾದ್ ಪಿ.ಎಂ ಹಾಗೂ ಗಣೇಶ್ ಎಂಬವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ನಿವಾಸಿ ಯಾಹ್ಯ ನೀಡಿದ  ದೂರಿನಂತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಯಾಹ್ಯ ಅವರಿಂದ ಶಿವಪ್ರಸಾದ್ ಎಂಬವರು ಅಂದಾಜು 46 ಲಕ್ಷ ಪಡೆದುಕೊಂಡಿದ್ದು, ಈ ಕುರಿತು ಕರಾರು ಪತ್ರ ಮತ್ತು ಚೆಕ್ ಗಳನ್ನು ನೀಡಿದ್ದಾರೆ. ಈ ಹಣವನ್ನು ವಾಪಾಸು ಕೊಡುವಂತೆ ಹಲವು ಬಾರಿ ಕೇಳಿದರೂ ಇವತ್ತು, ನಾಳೆ ಎಂದು ದಿನ ಮುಂದೂಡುತ್ತಿದ್ದಾರೆ. ಶಿವಪ್ರಸಾದ್ ಕರೆ ಮಾಡಿ ಗೋಳಿತೊಟ್ಟು ಎಂಬಲ್ಲಿಗೆ ಬಾ, ಹಣದ ವಿಚಾರದಲ್ಲಿ ಮಾತನಾಡೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

 

Scroll to Top