news kadaba desk

ಸಿಮೆಂಟ್ ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ವಿಟ್ಲ, ಜು.26. ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಸಾಗಾಟದ ಲಾರಿ ರಸ್ತೆಯಲ್ಲಿ ಉರುಳಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಕೊಟ್ಟಾರಿ ಕಟ್ಟೆ ಎಂಬಲ್ಲಿ ಸಂಭವಿಸಿದೆ. ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಕಲ್ಲಡ್ಕದಿಂದ ಪೆರ್ಲ ಕಡೆ ಸಿಮೆಂಟ್ ಸಾಗಾಟದ ಲಾರಿ ನಾಯಿಯೊಂದಕ್ಕೆ ಢಿಕ್ಕಿ ಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು […]

ಸಿಮೆಂಟ್ ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜು.26. ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟವು ಇಳಿಕೆಯಾಗತೊಡಗಿದ್ದು, ಇಲ್ಲಿನ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38  ಮೆಟ್ಟಿಲುಗಳಲ್ಲಿ 11 ಮೆಟ್ಟಿಲುಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ನಿನ್ನೆ 3 ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡಿದ್ದವು. ಪುತ್ತೂರು ತಹಶೀಲ್ದಾರ್ ಶಿವಶಂಕರ್ ದೇವಾಲಯದ ಬಳಿ ಆಗಮಿಸಿ ನದಿಗಳ ವೀಕ್ಷಣೆ ನಡೆಸಿದರು.

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ Read More »

ಕರಾವಳಿ

ಇಂದಿನಿಂದ ಮೂರು ದಿನ ‘ಯುವ ಕಾಂಗ್ರೆಸ್ ಸಮಾವೇಶ’

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರತೀಯ ಯುವ ಕಾಂಗ್ರೆಸ್ ನಿಂದ ಬೆಹ್ತರ್ ಭಾರತ್ ಕಿ ಬುನಿಯಾದ್ ಉತ್ತಮ ಭಾರತದ ಬುನಾದಿಗಾಗಿ ಯುವ ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ತಿಳಿದುಬಂದಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಈ ಯುವ ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಲಾಗಿದೆ. 10.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. 3 ದಿನಗಳ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ

ಇಂದಿನಿಂದ ಮೂರು ದಿನ ‘ಯುವ ಕಾಂಗ್ರೆಸ್ ಸಮಾವೇಶ’ Read More »

ಕರ್ನಾಟಕ

ಭರ್ಜರಿ ಏರಿಕೆ ಕಂಡ ಪೆಪ್ಪರ್ – 600ರ ಗಡಿ ದಾಟಿದ ಕಾಳುಮೆಣಸು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ಕೆಲ ದಿನಗಳ ಹಿಂದೆ ಕೆ.ಜಿ.ಗೆ 480ರಿಂದ 500 ರೂ. ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ಈಗ 600ರ ಗಡಿ ದಾಟಿದೆ. ಕಾಳುಮೆಣಸಿನ ಧಾರಣೆ ಏರಿಕೆ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು,  ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಕೆ.ಜಿ.ಯೊಂದಕ್ಕೆ ಗರಿಷ್ಠ 570ರೂ. ಧಾರಣೆ ದೊರೆತಿದೆ ಎನ್ನಲಾಗಿದೆ. ಕ್ಯಾಂಪ್ಕೋದಲ್ಲಿ 550 ರೂ ತನಕ ಧಾರಣೆ ಇತ್ತು. ಕಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ 40 ರಿಂದ 50 ರೂ ತನಕ ಧಾರಣೆ ಹೆಚ್ಚಿತ್ತು. ಕಳೆದ ಮೂರು

ಭರ್ಜರಿ ಏರಿಕೆ ಕಂಡ ಪೆಪ್ಪರ್ – 600ರ ಗಡಿ ದಾಟಿದ ಕಾಳುಮೆಣಸು Read More »

ಕರಾವಳಿ

ವಿಮಾ ಕಚೇರಿಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಾವುಟ ಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಎಸಿ ಮತ್ತಿತರ ಪರಿಕರಗಳು ಸುಟ್ಟು ಹೋಗಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ಶೂರೆನ್ಸ್ ಕಚೇರಿಯು ಕಟ್ಟಡದ ಮೂರನೇ ಅಂತಸ್ತಿನಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು,

ವಿಮಾ ಕಚೇರಿಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಲೇಜಿನ ಫೀಸ್ ಹಣದೊಂದಿಗೆ ಸಹಾಯಕ ಪ್ರಾಧ್ಯಾಪಕಿ ನಾಪತ್ತೆ – ವಿದ್ಯಾರ್ಥಿಗಳ ಪರದಾಟ

(ನ್ಯೂಸ್ ಕಡಬ)newskadaba.com ಮೈಸೂರು, ಜು.25. ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನ ಸಹಾಯಕ ಪ್ರಧ್ಯಾಪಕಿ ಹರ್ಷಿತಾ 200 ವಿದ್ಯಾರ್ಥಿಗಳಿಂದ ಫೀಸ್ ಹಣ ಎಂದು ಬರೋಬ್ಬರಿ 25 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಹರ್ಷಿತಾ ಪರೀಕ್ಷೆ ಫೀಸ್ ಸಂಗ್ರಹಿಸಿದ್ದಾರೆ. ನಗದು ಮಾತ್ರವಲ್ಲದೆ ವಿದ್ಯಾರ್ಥಿಗಳು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಇದಕ್ಕೆ ನಕಲಿ ರಶೀದಿ ನೀಡಿ ಹರ್ಷಿತಾ ಮೋಸ ಮಾಡಿದ್ದಾರೆ. ಈಗಾಗಲೇ

ಕಾಲೇಜಿನ ಫೀಸ್ ಹಣದೊಂದಿಗೆ ಸಹಾಯಕ ಪ್ರಾಧ್ಯಾಪಕಿ ನಾಪತ್ತೆ – ವಿದ್ಯಾರ್ಥಿಗಳ ಪರದಾಟ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹುಣಸೆ ಹುಳಿ ಗೊಜ್ಜು ! – ಹುಣಸೆ ಚಟ್ನಿ ಮಾಡೋದು ಹೇಗೆ ?

(ನ್ಯೂಸ್ ಕಡಬ)newskadaba.com ಜು.25. ಹುಣಸೆ ಹಣ್ಣು ಮುಂಚಿನಿಂದಲೂ ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಸ್ಥಾನ ಪಡೆದು ಅಡುಗೆಯ ರುಚಿ ಹೆಚ್ಚಿಸಲು ತನ್ನನ್ನು ತಾನು ಕರಗಿಸಿಕೊಳ್ಳುತ್ತಲೇ ಬಂದಿದೆ. ಈ ಹಣ್ಣು, ಎಲೆ, ತೊಗಟೆ ಎಲ್ಲವೂ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದರ ಕಾಂಡ ಗಡುಸಾಗಿರುವುದರಿಂದ ಒನಕೆ, ಚರಕಗಳ ತಯಾರಿಕೆಗೆ ಬಳಕೆಯಾಗುತ್ತದೆ. ಹುಣಸೆ ಹಣ್ಣಿನಿಂದ ಆರೋಗ್ಯಕ್ಕೆ ಕೂಡಾ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಟಾರ್ಟಾರಿಕ್ ಆಮ್ಲ, ವಿಟಮಿನ್‌ಗಳು, ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಮತ್ತು ಖನಿಜಗಳು ನೆರಿಗೆಗಳನ್ನು ನಿವಾರಿಸುವ ಜೊತೆಗೆ, ಕೂದಲುದುರುವುದನ್ನು ತಡೆಯಬಲ್ಲವು. ಹುಣಸೆ ಹುಳಿ ಉತ್ತಮ

ಹುಣಸೆ ಹುಳಿ ಗೊಜ್ಜು ! – ಹುಣಸೆ ಚಟ್ನಿ ಮಾಡೋದು ಹೇಗೆ ? Read More »

ಅಡುಗೆ

ಬಿಜೆಪಿ ಜೊತೆ ಮೈತ್ರಿಯೋ- ಸ್ವತಂತ್ರ ಸ್ಪರ್ಧೆಯೋ – ದೇವೇಗೌಡ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25. ಕಳೆದ ಕೆಲ ವಾರಗಳಿಂದ ಚರ್ಚೆಯ ವಿಚಾರವಾಗಿರುವ ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್ ಮೈತ್ರಿ ಸಾಧ್ಯತೆ ಕುರಿತಂತೆ ಜಾತ್ಯತೀತ ಜನತಾ ದಳ ವರಿಷ್ಟ ಎಚ್.ಡಿ ದೇವೇಗೌಡರು ಸ್ಪಷ್ಟನೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ನಡೆಸಲಿದೆ ಎಂದು ಹೇಳಿದರು. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನಾವು ಐದು, ಆರು, ಮೂರು, ಎರಡು ಅಥವಾ ಒಂದು ಸ್ಥಾನವನ್ನು ಗೆದ್ದರೂ ಪರವಾಗಿಲ್ಲ, ನಾವು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತೇವೆ. ನಮ್ಮ ಕಾರ್ಯತಕರ್ತರ

ಬಿಜೆಪಿ ಜೊತೆ ಮೈತ್ರಿಯೋ- ಸ್ವತಂತ್ರ ಸ್ಪರ್ಧೆಯೋ – ದೇವೇಗೌಡ ಸ್ಪಷ್ಟನೆ Read More »

ಕರ್ನಾಟಕ

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 25. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಫ್ಯಾನ್ ಬಳಗ ತುಂಬಾ ದೊಡ್ಡದು. ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸ್ಟೈಲಿಸ್ಟ್ ಸ್ಟಾರ್ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ. ಅಲ್ಲು ಅರ್ಜುನ್ ಅವರ ಅನೇಕ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗೆ ಆಗಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿವೆ. ಹಾಗಾಗಿ ಅವರಿಗೆ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಅಲ್ಲು ಅರ್ಜುನ್ ಇತ್ತೀಚೆಗೆ ಬಂದ ಮೆಟಾ

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

ಕೃಷಿ ಹೊಂಡದಲ್ಲಿ ಈಜಲು ಮೃತಪಟ್ಟ ಯುವತಿ

(ನ್ಯೂಸ್ ಕಡಬ)newskadaba.com ಕೇರಳ, ಜು.25. ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವತಿಯೊಬ್ಬಳು ದುರಂತವಾಗಿ ಮೃತಪಟ್ಟ ಘಟನೆ ಜರುಗಿದೆ. 19 ವರ್ಷದ ಸೋನಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ ಮನೆಯ ಸಮೀಪವೇ ಇರುವ ಕೃಷಿ ಉದ್ದೇಶಕ್ಕಾಗಿ ಮಣ್ಣನ್ನು ಅಗೆದು ನಿರ್ಮಾಣ ಮಾಡಿದ್ದ ಹೊಂಡದಲ್ಲಿ ಈ ಘಟನೆ ನಡೆದಿದೆ. ತಂದೆಯ ಜತೆ ಈಜುವಾಗ ಮಣ್ಣಿನಲ್ಲಿ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೇ ಸೋನಾ ಕೊನೆಯುಸಿರೆಳೆದಿದ್ದಾಳೆ. ಇದಕ್ಕೂ ಮುನ್ನ ಸ್ಥಳೀಯರಿಗೆ ಈ ಮಾಹಿತಿ ತಿಳಿದು ಸೋನಾಳನ್ನು ಕಾಪಾಡಲು ಸ್ಥಳಕ್ಕೆ ದೌಡಾಯಿಸಿದರೂ ಸಹ ಆಕೆಯನ್ನು

ಕೃಷಿ ಹೊಂಡದಲ್ಲಿ ಈಜಲು ಮೃತಪಟ್ಟ ಯುವತಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top