Ashitha Soodlu

ನೆನೆಸಿಟ್ಟ ಬಾದಾಮಿಯಲ್ಲಿದೆ ಹಲವಾರು ಪ್ರಯೋಜನಗಳು…

(ನ್ಯೂಸ್‌ ಕಡಬ) newskadaba.com, ಆ.19: ಬಾದಾಮಿ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನುವುದಾದರೆ ಮೊದಲು ಅವುಗಳನ್ನು ನೆನೆಸಿಡಬೇಕಾಗುತ್ತದೆ. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಯಾವೆಲ್ಲ ರೀತಿಯ ಆರೋಗ್ಯ ಪ್ರಯೋಗಳನು ಸಿಗುತ್ತದೆ ಎಂಬುವುದನ್ನು ತಿಳಿದುಕೊಳ್ಳಿ. ಬಾದಾಮಿ ತಿನ್ನುವುದರಿಂದ ಫೈಬರ್‌, ಪ್ರೋಟೀನ್‌, ವಿಟಮಿನ್‌ ಇ, ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಂ, ಮ್ಯಾಂಗನೀಸ್‌, ವಿಟಮಿನ್‌ ಬಿ2, ರಂಜಕ ಹಾಗೂ ಕಬ್ಬಿಣ ದೊರೆಯುತ್ತದೆ. ಇವು ಮೆದುಳು, ಸ್ನಾಯು, ಹೊಟ್ಟೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು […]

ನೆನೆಸಿಟ್ಟ ಬಾದಾಮಿಯಲ್ಲಿದೆ ಹಲವಾರು ಪ್ರಯೋಜನಗಳು… Read More »

ಆರೋಗ್ಯ ಮಾಹಿತಿ

Asia Cup 2025: ಇಂದು ಭಾರತ ತಂಡ ಪ್ರಕಟ

(ನ್ಯೂಸ್‌ ಕಡಬ) newskadaba.com, ಆ.19: 2025ರ ಏಷ್ಯಾಕಪ್‌ ಸೆ.9ರಿಂದ ಆರಂಭವಾಗಲಿದೆ. ಈ ಟೂರ್ನಮೆಂಟ್‌ಗಾಗಿ ಭಾರತೀಯ ತಂಡವನ್ನು ಇಂದು ಬಿಸಿಸಿಐ ಸಭೆ ಕರೆದು ಘೋಷಣೆ ಮಾಡಲಿದೆ. ಮೊದಲು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು, ಬಳಿಕ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಹಾಗೂ ತಂಡದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ತಂಡವನ್ನು ಘೋಷಣೆ ಮಾಡಲಿದ್ದಾರೆ. ಇದರೊಂದಿಗೆ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ಗೆ ಕೂಡ ಟೀಂ ಇಂಡಿಯಾವನ್ನು ಹೆಸರಿಸಲಿದ್ದಾರೆ. ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಇಂದು ಮಹತ್ವದ ಸಭೆ

Asia Cup 2025: ಇಂದು ಭಾರತ ತಂಡ ಪ್ರಕಟ Read More »

ಕ್ರೀಡಾ ನ್ಯೂಸ್

ರೈಲು ಪ್ರಯಾಣಿಕರ ಗಮನಕ್ಕೆ: ಆ.23, 24ರಂದು ಈ ರೈಲುಗಳ ಸಂಚಾರ ಬಂದ್‌

(ನ್ಯೂಸ್‌ ಕಡಬ) newskadaba.com, ಆ.19: ಆ.24ರಂದು ಅರಸೀಕೆರೆ–ಬಾಣಾವರ ಮತ್ತು ಅರಸೀಕೆರೆ–ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್‌ ಹಾಗೂ ಬ್ಲಾಕ್‌ ಇನ್‌ಸ್ಟ್ರುಮೆಂಟ್‌ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಕೆಲವು ರೈಲುಗಳ ಪ್ರಯಾಣದ ಸಮಯವನ್ನು ಮರು ನಿಗದಿಪಡಿಸಲಾಗುತ್ತದೆ ಹಾಗೂ ನಿಯಂತ್ರಿಸಲಾಗಿದೆ ಎಂದು ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ. ಆ.23ರಂದು ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು–ಮೈಸೂರು ಡೈಲಿ ಪ್ಯಾಸೆಂಜರ್‌

ರೈಲು ಪ್ರಯಾಣಿಕರ ಗಮನಕ್ಕೆ: ಆ.23, 24ರಂದು ಈ ರೈಲುಗಳ ಸಂಚಾರ ಬಂದ್‌ Read More »

ಕರ್ನಾಟಕ

Karnataka Rains: ಇಂದು 3 ಜಿಲ್ಲೆಗಳಿಗೆ ರೆಡ್‌ ಅಲರ್ಟ್

(ನ್ಯೂಸ್‌ ಕಡಬ) newskadaba.com, ಆ.19:‌‌ ಭಾರೀ ಮಳೆಯ ಹಿನ್ನೆಲೆ ಇಂದು 3 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌, 6 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಉಡುಪಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದ್ದರೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ತುಮಕೂರು, ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Karnataka Rains: ಇಂದು 3 ಜಿಲ್ಲೆಗಳಿಗೆ ರೆಡ್‌ ಅಲರ್ಟ್ Read More »

ಕರ್ನಾಟಕ

ಬಿ. ಕೆ. ಹರಿಪ್ರಸಾದ್‌ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ

(ನ್ಯೂಸ್‌ ಕಡಬ) newskadaba.com, ಆ.18: ಒಂದು ಕಾಲದ ಬೀದಿ ರೌಡಿ, ಕೊತ್ವಾಲ್‌ಪುರದ ಶಿಷ್ಯ, ಚಮಚಾಗಿರಿ ಮಾಡಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡ ಬಿ.ಕೆ ಹರಿಪ್ರಸಾದ್ ಇಂದು ಖಾದಿ ಬಟ್ಟೆ ಹಾಕಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡ ಬಿಜೆಪಿ, ಬಿ. ಕೆ. ಹರಿಪ್ರಸಾದ್‌ ಅವರಿಗೆ ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿಯೇ ರಾಜಕೀಯ ಸ್ಥಾನಮಾನ ಗಿಟ್ಟಿಸಬೇಕೇ

ಬಿ. ಕೆ. ಹರಿಪ್ರಸಾದ್‌ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ Read More »

ಕರ್ನಾಟಕ

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌

(ನ್ಯೂಸ್‌ ಕಡಬ) newskadaba.com, ಆ.18: ದುಲೀಪ್‌ ಟ್ರೋಫಿಯಿಂದ ಇಶಾನ್‌ ಕಿಶನ್‌ ಹೊರಬಿದ್ದಿದ್ದಾರೆ. ಪೂರ್ವ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಇಶಾನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಅವರ ಬದಲಿಗೆ ಅಭಿಮನ್ಯು ಈಶ್ವರನ್‌ ಅವರಿಗೆ ಕ್ಯಾಪ್ಟನ್‌ ಸ್ಥಾನ ನೀಡಲಾಗಿದೆ. ಇಶಾನ್‌ ಕಿಶನ್‌ ಸ್ಥಾನಕ್ಕೆ ವಿಕೆಟ್‌ ಬ್ಯಾಟರ್‌ ಆಶೀರ್ವಾದ್‌ ಸ್ವೈನ್‌ ಆಯ್ಕೆಯಾಗಿದ್ದಾರೆ. ಆಶೀರ್ವಾದ್‌ ಅವರು ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ.21 ಇನ್ನಿಂಗ್ಸ್‌ನಲ್ಲಿ ಆಡಿರುವ ಅವರು 30.75 ಸರಾಸರಿಯಲ್ಲಿ ಒಟ್ಟು 615 ರನ್‌ ಗಳಿಸಿದ್ದಾರೆ. ಇದರೊಂದಿಗೆ ವಿಕೆಟ್‌ ಕೀಪಿಂಗ್‌ನಲ್ಲಿ

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌ Read More »

ಕ್ರೀಡಾ ನ್ಯೂಸ್

ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

(ನ್ಯೂಸ್‌ ಕಡಬ) newskadaba.com, ಆ.18: ಸಿಎಂ ಸಿದ್ದರಾಮಯ್ಯ ಅವರು ಕೊಲೆಗಳನ್ನು ಮಾಡಿಸಿದ್ದಾರೆ ಎಂದು ಮಹೇಶ್‌ ತಿಮರೋಡಿ ಆರೋಪ ಮಾಡಿದ್ದಾರೆ. ಅವರು ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಎಂದರೆ ನಾನು ನಂಬುವುದಿಲ್ಲ. ಈ ಬಗ್ಗೆಯೂ ತನಿಖೆ ನಡೆಯಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದವರ ವಿರುದ್ದ ತನಿಖೆ ನಡೆಸದಿದ್ದಲ್ಲಿ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಎಂದು ನಾವು ಅನುಮಾನ ಪಡಬೇಕಾಗುತ್ತದೆ ಎಂದಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು,

ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ Read More »

ಕರ್ನಾಟಕ

ಹೆಬ್ಬಾಳ ಫ್ಲೈಓವರ್‌ ಲೋಕಾರ್ಪಣೆ ಮಾಡಿದ ಸಿಎಂ, ಡಿಸಿಎಂ

(ನ್ಯೂಸ್‌ ಕಡಬ) newskadaba.com, ಆ.18: ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್‌.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಲೋಕಾರ್ಪಣೆಗೊಳಿಸಿದರು. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡ ಡಿಕೆ ಶಿವಕುಮಾರ್‌, ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್‌.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಲೋಕಾರ್ಪಣೆಗೊಳಿಸಲಾಯಿತು ಎಂದು ತಿಳಿಸಿದರು. ಇಂದಿನಿಂದ ಹೆಬ್ಬಾಳದ ಹೊಸ ಮೇಲ್ಸೇತುವೆ ರ‍್ಯಾಂಪ್ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ

ಹೆಬ್ಬಾಳ ಫ್ಲೈಓವರ್‌ ಲೋಕಾರ್ಪಣೆ ಮಾಡಿದ ಸಿಎಂ, ಡಿಸಿಎಂ Read More »

ಕರ್ನಾಟಕ

ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ…

(ನ್ಯೂಸ್‌ ಕಡಬ) newskadaba.com, ಆ.18: ಹಾಲು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಲಿನಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಹಾಲು ಕುಡಿದ ಬಳಿಕ ಕೆಲವು ಆಹಾರಗಳನ್ನು ಸೇವಿಸಬಾರದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಾದರೆ ಆ ಆಹಾರಗಳು ಯಾವುದು, ಏಕೆ ಒಳ್ಳೆಯದಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ. ಹಾಲು ಕುಡಿದ ಬಳಿಕ ಅನೇಕ ಮಂದಿ ಚಿಪ್ಸ್‌, ಖಾರದ ಬಿಸ್ಕತ್ತುಗಳು ಹಾಗೂ ಜಂಕ್‌ ಫುಡ್‌ಗಳನ್ನು ತಿನ್ನುತ್ತಾರೆ. ನಿಮಗೆ ಈ ಅಭ್ಯಾಸ ಇದ್ದಲ್ಲಿ ಕೂಡಲೇ ಇದನ್ನು ಬಿಟ್ಟುಬಿಡಿ. ಆರೋಗ್ಯ

ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ… Read More »

ಆರೋಗ್ಯ ಮಾಹಿತಿ

ಸೆ.1ರಂದು ಮೈಸೂರಿಗೆ ದ್ರೌಪದಿ ಮುರ್ಮು ಭೇಟಿ

(ನ್ಯೂಸ್‌ ಕಡಬ) newskadaba.com, ಆ.18: ಸೆ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮಾನಸ ಗಂಗೋತ್ರಿಯ ಅಖಿಲ ಭಾರತ ವಾಕ್‌ ಹಾಗೂ ಶ್ರವಣ ಸಂಸ್ಥೆ ವಜ್ರ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿಗಳು ಅಲ್ಲಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ದ್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸುತ್ತಿರುವುದು ಇದು 2ನೇ ಬಾರಿ. 2022ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ದ್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸಿದ್ದರು.

ಸೆ.1ರಂದು ಮೈಸೂರಿಗೆ ದ್ರೌಪದಿ ಮುರ್ಮು ಭೇಟಿ Read More »

ಕರ್ನಾಟಕ
Scroll to Top