ನೆನೆಸಿಟ್ಟ ಬಾದಾಮಿಯಲ್ಲಿದೆ ಹಲವಾರು ಪ್ರಯೋಜನಗಳು…

(ನ್ಯೂಸ್‌ ಕಡಬ) newskadaba.com, ಆ.19: ಬಾದಾಮಿ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನುವುದಾದರೆ ಮೊದಲು ಅವುಗಳನ್ನು ನೆನೆಸಿಡಬೇಕಾಗುತ್ತದೆ. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಯಾವೆಲ್ಲ ರೀತಿಯ ಆರೋಗ್ಯ ಪ್ರಯೋಗಳನು ಸಿಗುತ್ತದೆ ಎಂಬುವುದನ್ನು ತಿಳಿದುಕೊಳ್ಳಿ.

ಬಾದಾಮಿ ತಿನ್ನುವುದರಿಂದ ಫೈಬರ್‌, ಪ್ರೋಟೀನ್‌, ವಿಟಮಿನ್, ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಂ, ಮ್ಯಾಂಗನೀಸ್‌, ವಿಟಮಿನ್ಬಿ2, ರಂಜಕ ಹಾಗೂ ಕಬ್ಬಿಣ ದೊರೆಯುತ್ತದೆ. ಇವು ಮೆದುಳು, ಸ್ನಾಯು, ಹೊಟ್ಟೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

ಬಾದಾಮಿಯಲ್ಲಿ ಆಕ್ಸಿಡೇಟಿವ್ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುವ ಉತ್ಕರ್ಷಣ ನಿರೋಧಕಗಳಿವೆ. ಒತ್ತಡವು ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಹಾಗೂ ಬಹುತೇಕ ಎಲ್ಲಾ ದೀರ್ಘಕಾಲದ ಕಾಯಿಲೆಗಳ ಬೆಳವಣಿಗಳಿಗೆ ಕಾರಣವಾಗುತ್ತದೆ.

ಬಾದಾಮಿಯಲ್ಲಿ ಕೊಬ್ಬು ಕರಗುವ ವಿಟಮಿನ್ಇದ್ದು, ಇದು ಕೂದಲು, ಚರ್ಮ ಹಾಗೂ ಸ್ನಾಯುಗಳಿಗೆ ಅವಶ್ಯಕವಾಗಿದೆ. ಇದು ಜೀವಕೋಶಗಳ ರಚನೆಗೆ ಸಹಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಲು ಪ್ರಯೋಜನಕಾರಿಯಾಗಿದೆ.

ಬಾದಾಮಿ ಸೇವನೆಯು ಪದೇ ಪದೇ ಹಸಿವು ಹಾಗೂ ತೂಕವನ್ನು ನಿಯಂತ್ರಿಸುತ್ತದೆ. ಬಾದಾಮಿಯಲ್ಲಿರುವ ಫೈಬರ್ಹಾಗೂ ಪ್ರೋಟೀನ್ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ.

Scroll to Top