ರೈಲು ಪ್ರಯಾಣಿಕರ ಗಮನಕ್ಕೆ: ಆ.23, 24ರಂದು ಈ ರೈಲುಗಳ ಸಂಚಾರ ಬಂದ್‌

(ನ್ಯೂಸ್‌ ಕಡಬ) newskadaba.com, ಆ.19: ಆ.24ರಂದು ಅರಸೀಕೆರೆ–ಬಾಣಾವರ ಮತ್ತು ಅರಸೀಕೆರೆ–ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್‌ ಹಾಗೂ ಬ್ಲಾಕ್‌ ಇನ್‌ಸ್ಟ್ರುಮೆಂಟ್‌ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಕೆಲವು ರೈಲುಗಳ ಪ್ರಯಾಣದ ಸಮಯವನ್ನು ಮರು ನಿಗದಿಪಡಿಸಲಾಗುತ್ತದೆ ಹಾಗೂ ನಿಯಂತ್ರಿಸಲಾಗಿದೆ ಎಂದು ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.

ಆ.23ರಂದು ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು–ಮೈಸೂರು ಡೈಲಿ ಪ್ಯಾಸೆಂಜರ್‌ ರೈಲು ರದ್ದಾಗಲಿದೆ. ಆ.24ರಂದು ರೈಲು ಸಂಖ್ಯೆ 06269 ಮೈಸೂರು–ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್‌, ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್–ಮೈಸೂರು ಡೈಲಿ ಎಕ್ಸ್‌ಪ್ರೆಸ್‌, ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್‌ ಡೈಲಿ ಎಕ್ಸ್‌ಪ್ರೆಸ್‌, ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್(56267), ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್(56268)‌, ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್(56266)‌, ಹಾಗೂ ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್(56265)‌ ರೈಲುಗಳ ಸಂಚಾರ ಒಂದು ದಿನದ ಮಟ್ಟಿಗೆ ರದ್ದುಪಡಿಸಲಾಗಿದೆ.

ಆ.24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟನ್–ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್‌ ರೈಲು ಶಿವಮೊಗ್ಗ ಟೌನ್‌ ಹಾಗೂ ಬೀರೂರು ಮಧ್ಯೆ ಭಾಗಶಃ ರದ್ದುಗೊಳ್ಳಲಿದೆ. ಬೀರೂರಿನಿಂದ ನಿಗದಿತ ಸಮಯದಲ್ಲಿ ಈ ರೈಲು ಪ್ರಯಾಣ ಆರಂಭಿಸಲಿದೆ.

ಆ.24ರಂದು ಹೊರಡುವ ರೈಲು ಸಂಖ್ಯೆ 16587 ಯಶವಂತಪುರ–ಬಿಕಾನೇರ್‌ ದ್ವಿ–ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಹಾಗೂ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಯಶವಂತಪುರ–ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್(18112)‌, ಯಶವಂತಪುರ–ಹಜರತ್‌ ನಿಜಾಮುದ್ದೀನ್‌ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌(12649), ಕೆಎಸ್‌ಆರ್‌ ಬೆಂಗಳೂರು–ಧಾರವಾಡ ಸಿದ್ದಗಂಗಾ ದೈನಿಕ ಎಕ್ಸ್‌ಪ್ರೆಸ್‌ ರೈಲು(12725)ಗಳನ್ನು ಮಾರ್ಗಮಧ್ಯೆ 60-75 ನಿಮಿಷಗಳ ನಿಯಂತ್ರಿಸಲಾಗುತ್ತದೆ. ಬೆಳಗಾವಿ–ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್(17325)‌ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ ಎಂದು ನೈರುತ್ಯ ರೈಲ್ಯ ವಲಯ ಅಧಿಕಾರಿಗಳು ತಿಳಿಸಿದ್ದಾರೆ.

Scroll to Top