(ನ್ಯೂಸ್ ಕಡಬ) newskadaba.com ಡಿ. 19 ಬಂಟ್ವಾಳ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ ವಾಹನವೊಂದು ಪಲ್ಟಿಯಾಗಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿರುವ ಟಿ.ಟಿ.ವಾಹನ ಬೆಳಿಗ್ಗೆ 6:30ರ ಸುಮಾರಿಗೆ ಫರಂಗಿಪೇಟೆ ಜಂಕ್ಷನ್ ನಲ್ಲಿ ಡಿವೈಡರ್ ಮೇಲೆ ಏರಿ ಬಳಿಕ ಹೆದ್ದಾರಿಗೆ ಪಲ್ಟಿಯಾಗಿದೆ. ಟಿ.ಟಿ.ಯಲ್ಲಿ ಸುಮಾರು 10 ಮಂದಿ ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಯಾವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬೆಳಿಗ್ಗಿನ ಹೊತ್ತು ಚಾಲಕ ನಿದ್ಧೆ ಮಂಪರಿನಲ್ಲಿ ನಿಯಂತ್ರಣ ಕಳೆದು ಡಿವೈಡರ್ ನ ಮೇಲೆ ಹತ್ತಿ ಬಳಿಕ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಯಾವುದೇ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಪೋಲೀಸರು ಭೇಟಿ ನೀಡಿದ್ದಾರೆ