ಕಡಬ: ಜಾಗದ ವಿವಾದಕ್ಕೆ ಅಣ್ಣ ತಮ್ಮಂದಿರ ಜಗಳ: ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಕಡಬ, ನ. 09. ಜಾಗದ ವಿವಾದಕ್ಕೆ ಸಂಬಂಧಿಸಿ ಅಣ್ಣ ತಮ್ಮನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಕಡಬ ತಾಲೂಕಿನ ಗೋಳಿತೊಟ್ಟು ಸಮೀಪದ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಪೆರ್ಲ ನಿವಾಸಿಯಾಗಿದ್ದ ರಮೇಶ ಗೌಡ(51) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಮೃತರ ಸಂಬಂಧಿ ಹರೀಶ್ ಎಂಬಾತ ಎನ್ನಲಾಗಿದೆ. ರಮೇಶ್ ಅವರು ಬೈಕ್ ನಲ್ಲಿ ಬರುತ್ತಿರುವ ವೇಳೆ ಅವರನ್ನು ಅಡ್ಡ ಕಟ್ಟಿ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

 

Scroll to Top