(ನ್ಯೂಸ್ ಕಡಬ) newskadaba.com ನ. 06. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಭೂಕಂದಾಯ/ ಭೂಮಂಜೂರಾತಿ ನಿಯಮ / ಭೂಸುಧಾರಣಾ/ ಭೂಸ್ವಾಧೀನ ಕಾಯ್ದೆ / ನಿಯಮ ಇನ್ನಿತರ ಕಾಯ್ದೆ/ ನಿಯಮಗಳ ಪ್ರಕರಣಗಳಿಗೆ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡುವುದು ಕಾನೂನು ಸಲಹೆಗಾರರ ಕರ್ತವ್ಯವಾಗಿದೆ.
ನಿವೃತ್ತ ನ್ಯಾಯಾಧೀಶರು/ ನಿಮ್ಮತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ರೂ.70,000 ಮತ್ತು ನಿವೃತ್ತ ಕಂದಾಯ ಇಲಾಖೆಯ ನೌಕರರಿಗೆ (ನಿವೃತ್ತ ತಹಶೀಲ್ದಾರ್/ ಉಪತಹಶೀಲ್ದಾರ್) ರೂ. 40,000 ಮಾಸಿಕ ಸಂಚಿತ ವೇತನ ನಿಗದಿಗೊಳಿಸಲಾಗಿದೆ.
ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ನೇಮಕ ಹೊಂದಲು ಇಚ್ಛಿಸುವವರು ಸ್ವ-ವಿವರ ಮತ್ತು ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ನವೆಂಬರ್ 19ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಛೇರಿಯ ಆಡಳಿತ. ಶಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.