ದೇವಸ್ಥಾನದಲ್ಲಿ ಸುಡುಮದ್ದು ಸ್ಫೋಟ: ಮೃತರ ಸಂಖ್ಯೆ 4ಕ್ಕೆ ಏರಿಕೆ..!

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 04. ನೀಲೇಶ್ವರ ವಿರಾರ್ ಕಾವ್ ದೈವಸ್ಥಾನದ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ನಡೆದ ಸುಡುಮದ್ದು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.

ಮೃತಪಟ್ಟವರನ್ನು ಕಿನಾವೂರಿನ ಯು. ರತೀಶ್ (40), ಕೊಲ್ಲಂಪಾರೆಯ ಆಟೋ ಚಾಲಕ ಕೆ. ಬಿಜು (37), ಚೆರ್ವತ್ತೂರು ತುರುತ್ತಿಯ ಶೋಬಿನ್ ರಾಜ್ (19), ಕಿನಾವೂರಿನ ಸಂದೀಪ್ (38) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಸ್ಫೋಟದಲ್ಲಿ 154 ಮಂದಿ ಗಾಯಗೊಂಡಿದ್ದರು. ಈ ಪೈಕಿ 8 ಮಂದಿ ಗಂಭೀರ ಸುಟ್ಟ ಗಾಯ ಗೊಂಡಿದ್ದರು. ಗಾಯಗೊಂಡ 90 ಕ್ಕೂ ಅಧಿಕ ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಅಮೆರಿಕದಲ್ಲಿ ಗುಂಡಿನ ದಾಳಿ: ತೆಲಂಗಾಣದ ಯುವತಿ ಮೃತ್ಯು

 

 

error: Content is protected !!
Scroll to Top