ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..!

(ನ್ಯೂಸ್ ಕಡಬ)newskadaba.com,ಬೆಂಗಳೂರು ಅ. 07. ಬ್ಲ್ಯಾಕ್ ಹೋಲ್ ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಈ ಪ್ರಬಲ ಗುರುತ್ವಾಕರ್ಷಣೆಯಿಂದ ಯಾವುದೇ ಕಣಗಳು, ಬೆಳಕು ಸೇರಿದಂತೆ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಇನ್ನೂ ಹಲವು ವಿಷಯಗಳು ನಿಗೂಢವಾಗಿಯೇ ಉಳಿದಿವೆ.

ಬ್ಲ್ಯಾಕ್ ಹೋಲ್ ಎಂದರೇನು? ಬ್ಲ್ಯಾಕ್ ಹೋಲ್ ಒಳಗಡೆ ಏನಿದೆ? ಬ್ಲ್ಯಾಕ್ ಹೋಲ್ (ಕೃಷ್ಣ ಕುಳಿ) ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಅದರೊಳಗೆ ಒಮ್ಮೆ ಹೋದರೆ ಮತ್ತೆ ಅದು ನಮ್ಮಿಂದ ಕಳೆದುಹೋದಂತೆಯೇ. ಅದು ಭೂಮಿಯಾಗಿರಬಹುದು, ಸೂರ್ಯನಾಗಿರಬಹುದು.. ಇಲ್ಲವೇ ಬೇರೇನೇ ಆಗಿರಬಹುದು. ‘ಬ್ಲ್ಯಾಕ್ ಹೋಲ್ಸ್’ ಎಂದು ಕರೆದರೂ, ಅವು ರಂಧ್ರಗಳಲ್ಲ, ಬದಲಾಗಿ ಅತ್ಯಂತ ಸಣ್ಣ ಪ್ರದೇಶದಲ್ಲಿ ಸಾಂದ್ರೀಕೃತವಾಗಿರುವ ಬೃಹತ್ ಪ್ರಮಾಣದ ವಸ್ತು. ಅವುಗಳ ಗುರುತ್ವಾಕರ್ಷಣ ಶಕ್ತಿ ಅಗಾಧ. ಬ್ಲ್ಯಾಕ್ ಹೋಲ್‌ಗಳು ಎರಡು ಭಾಗಗಳನ್ನು ಹೊಂದಿವೆ. ಒಂದು ಈವೆಂಟ್ ಹೊರೈಜನ್. ಇದನ್ನು ಬ್ಲ್ಯಾಕ್ ಹೋಲ್‌ನ ಮೇಲ್ಮೈ ಎಂದು ಪರಿಗಣಿಸಬಹುದು, ಆದರೆ ಇದು ಕೇವಲ ಗುರುತ್ವಾಕರ್ಷಣೆ ತುಂಬಾ ಪ್ರಬಲವಾಗಿದ್ದು, ಯಾವುದೂ ತಪ್ಪಿಸಿಕೊಳ್ಳಲಾಗದಂತಹ ಬಿಂದು. ಇನ್ನೊಂದು ಮಧ್ಯದಲ್ಲಿರುವ ರಂಧ್ರ. ಅದೇ ಬ್ಲ್ಯಾಕ್ ಹೋಲ್. ಇಲ್ಲಿಂದ ಬೆಳಕು ಕೂಡ ಪ್ರಯಾಣಿಸಲು ಸಾಧ್ಯವಿಲ್ಲ. ಅಂದರೆ ಬೆಳಕನ್ನೂ ಇದು ನುಂಗುತ್ತದೆ.  ವಿಜ್ಞಾನಿಗಳು ಬ್ಲ್ಯಾಕ್ ಹೋಲ್‌ಗಳನ್ನು ವರ್ಗೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಲ್ಯಾಕ್ ಹೋಲ್ ಎಷ್ಟು ವಿಧ? ಸ್ಟೆಲ್ಲರ್ ಬ್ಲ್ಯಾಕ್ ಹೋಲ್: ನಮ್ಮ ಸೂರ್ಯನ ದ್ರವ್ಯರಾಶಿಗಿಂತ ಸುಮಾರು ಎಂಟು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ಬೃಹತ್ ನಕ್ಷತ್ರಗಳು ತಮ್ಮ ಇಂಧನವನ್ನು ಖಾಲಿ ಮಾಡಿಕೊಂಡಾಗ ಸ್ಟೆಲ್ಲರ್ ಬ್ಲ್ಯಾಕ್ ಹೋಲ್‌ಗಳು ಉತ್ಪತ್ತಿಯಾಗುತ್ತವೆ. ಈ ಸಮಯದಲ್ಲಿ, ನಕ್ಷತ್ರದ ಮುಖ್ಯ ಭಾಗವು ಸೂಪರ್ನೋವಾ ಆಗಿ ಸ್ಫೋಟಗೊಳ್ಳುತ್ತದೆ. ಸೂಪರ್‌ಮ್ಯಾಸಿವ್ ಬ್ಲ್ಯಾಕ್ ಹೋಲ್‌ಗಳು: ನಮ್ಮ ಕ್ಷೀರಪಥ ಸೇರಿದಂತೆ ಬೃಹತ್ ನಕ್ಷತ್ರಪುಂಜಗಳು ತಮ್ಮ ಕೇಂದ್ರದಲ್ಲಿ ಸೂಪರ್‌ಮ್ಯಾಸಿವ್ ಬ್ಲ್ಯಾಕ್ ಹೋಲ್‌ಗಳನ್ನು ಹೊಂದಿವೆ ಎಂದು ಪರಿಶೋದಕರು ಕಂಡುಕೊಂಡಿದ್ದಾರೆ. ಈ ಬೃಹತ್ ಬ್ಲ್ಯಾಕ್ ಹೋಲ್‌ಗಳು ಸೂರ್ಯನಿಗಿಂತ ಲಕ್ಷಾಂತರ ಅಥವಾ ಶತಕೋಟಿ ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿವೆ.

error: Content is protected !!

Join the Group

Join WhatsApp Group