ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು..!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 04. ದ್ವಿಚಕ್ರಗಳೆರಡರ ಮಧ್ಯೆ ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಅ. 2ರಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಅ. 3ರಂದು ಮೃತಪಟ್ಟಿದ್ದಾರೆ.

ಮೃತನನ್ನು ಬರಿಮಾರು ನಿವಾಸಿ ಸರ್ಪಾಝ್ (33) ಎಂದು ಗುರುತಿಸಲಾಗಿದೆ. ಸಹ ಸವಾರಿಣಿ ವಿದ್ಯಾರ್ಥಿ ಜಾಸ್ಮೀನ್ (18) ಗಾಯಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಪಾಝ್ ತನ್ನ ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ತೆರಳುತ್ತಿದ್ದರು. ಈ ವೇಳೆ ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ತಲುಪಿದಾಗ ಎದುರಿನಿಂದ ಬೈಕ್ ಚಲಾಯಿಸಿಕೊಂಡು ಬಂದ ಇಂಮ್ತಿಯಾಜ್ ಎಂಬಾತ ಇವರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ.

Also Read  ಕಡಬ: ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕನಿಗೆ ಗಾಯ

 

error: Content is protected !!
Scroll to Top