ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಶ್ರೂಮ್ ಪಲಾವ್ – News Kadaba

ಮಶ್ರೂಮ್ ಪಲಾವ್

(ನ್ಯೂಸ್ ಕಡಬ)newskadaba.com ಅ. 04.

ಬೇಕಾಗುವ ಸಾಮಾಗ್ರಿಗಳು

  • 1 ಕಪ್ ಅಕ್ಕಿ
  • 1 ಕಪ್ ಅಣಬೆ
  • 4 ಈರುಳ್ಳಿ ಹೂವು (ಸಾಂಬಾರು ಈರುಳ್ಳಿ)
  • 2 ಲವಂಗ
  • 1/2 ಇಂಚಿನ ಚೆಕ್ಕೆ
  • 2 ಏಲಕ್ಕಿ
  • 1 ಪಲಾವ್ ಎಲೆ
  • 1 ಚಮಚ ಗರಂ ಮಸಾಲ
  • 1 ಚಮಚ ಜೀರಿಗೆ ಪುಡಿ
  • ಎಣ್ಣೆ, ಉಪ್ಪು

ಮಾಡುವ ವಿಧಾನ:

  • ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
  • ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ ಕತ್ತರಿಸಿ) ಒಂದೆಡೆ ಇಟ್ಟುಕೊಳ್ಳಬೇಕು.
  • ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯ ಬಿಳಿ ಹೂವು, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆಯನ್ನು ಹುರಿದುಕೊಂಡು ಮಶ್ರೂಮ್ ಹಾಕಬೇಕು. ಈಗ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಬೆರೆಸಬೇಕು.
  • ಅಕ್ಕಿಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
  • ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.

 

 

Scroll to Top