ಅ.02ರಂದು ಗಾಂಧಿ ಜಯಂತಿ ಹಾಗೂ ವರ್ಷದ ವ್ಯಕ್ತಿ ಗೌರವ ಪ್ರಶಸ್ತಿ ಪ್ರದಾನ



(ನ್ಯೂಸ್ ಕಡಬ) newskadaba.com ಸೆ. 25. ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನ (ರಿ) ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಗೌರವ 2024 ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅಕ್ಟೋಬರ್ 2 ರಂದು ಬುಧವಾರ ನಗರದ ಟಾಗೋರ್ ಪಾರ್ಕಿನಲ್ಲಿರುವ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9:30ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಬೆಳಿಗ್ಗೆ 10.15ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊಫೆಸರ್ ಕೆ.ಇ ರಾಧಾಕೃಷ್ಣ ಮುಖ್ಯ ಭಾಷಣ ಮಾಡಲಿದ್ದಾರೆ.







ಮಹಾತ್ಮ ಗಾಂಧಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾನವೀಯ ಸೇವೆಯ ಕಾಯಕ ಜೀವಿ ಇಸ್ಮಾಯಿಲ್ ಕಣ್ಣಂದೂರು ಅವರಿಗೆ ನೀಡಲಾಗುತ್ತದೆ.






error: Content is protected !!
Scroll to Top