(ನ್ಯೂಸ್ ಕಡಬ) newskadaba.com, ಜು.10 : ದಾರುಸ್ಸಲಾಂ ಸೆಂಟರ್‌ನ 10ನೇ ವಾರ್ಷಿಕೋತ್ಸವ ಹಾಗೂ ಪ್ರಥಮ ಸನದುದಾನ ಕಾರ್ಯ ಕ್ರಮವು ಬೆಳ್ತಂಗಡಿ ಶಂಸುಲ್ ಉಲಮಾ ನಗರದಲ್ಲಿ 2026 ಡಿ.17ರಿಂದ 20 ರವರೆಗೆ “ದಿಶೆ ತೋರಿದ ದಶ ವರ್ಷಗಳು” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿದೆ. ಅದರ ಸ್ವಾಗತ ಸಮಿತಿಯ ರಚನಾ ಸಭೆಯು ದಿನಾಂಕ 3 ಜುಲೈ 2026 ರಂದು ಮಿತ್ತಬೈಲ್‌ನ ಮುಹಿಯ್ಯುದ್ದೀನ್ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.
ದಾರುಸ್ಸಲಾಂ ಸೆಂಟರ್ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಸಭೆಯ ನೇತೃತ್ವ ವಹಿಸಿದ್ದರು. ಮಿತ್ತಬೈಲ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ನಿಝಾಮಿ ಸಭೆಯನ್ನು ಉದ್ಘಾಟಿಸಿದರು.ಸ್ವಾಗತ ಸಮಿತಿಯ ನಿರ್ದೇಶಕರಾಗಿ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ, ಸಯ್ಯಿದ್ ಅಸ್ಗರ್ ಅಲಿ ತಂಗಳ್ ಯು.ಎ.ಇ, ಗೌರವಾಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ಬೆಳ್ತಂಗಡಿ, ಅಧ್ಯಕ್ಷರಾಗಿ ಸಾಗರ್ ಮುಹಮ್ಮದ್ ಹಾಜಿ ಮಿತ್ತಬೈಲ್, ಕಾರ್ಯಾಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.
ಪ್ರಧಾನ ಸಂಚಾಲಕರಾಗಿ ಡಿ.ಡಿ. ಅಬ್ದುಲ್ ರಝಾಕ್ ಹಾಜಿ ಕನ್ನಡಿಕಟ್ಟೆ, ಕೋಶಾಧಿಕಾರಿಯಾಗಿ ರಫೀಕ್ ಗಂಡಿ ಬಾಗಿಲು, ವರ್ಕಿಂಗ್ ಕನ್ವೀನರಾಗಿ ಅಬ್ದುಲ್ ಅಝೀಝ್ ಅಶ್ಶಾಫೀ, ಉಪಾಧ್ಯಕ್ಷರಾಗಿ ಮೂಸಾ ದಾರಿಮಿ ಕಕ್ಕಿಂಜೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಸಾಗರ್ ಮಜೀದ್ ಹಾಜಿ, ಸಿ.ಕೆ. ಇಬ್ರಾಹಿಂ ಹಾಜಿ ಮೂಡಿಗೆರೆ, ಝುಬೈರ್ ದಾರಿಮಿ ಪೈಕ, ಅಹ್ಮದ್ ಹುಸೈನ್ ಮೂಡುಬಿದಿರೆ, ಸಹ ಸಂಚಾಲಕರಾಗಿ ರಫೀಕ್ ಫೈಝಿ ಕನ್ಯಾನ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಯ್ಯುಬ್ ಕರಾಯ, ರಫೀಕ್ ಹೊಸಂಗಡಿ, ಶಾಕಿರ್ ರಾಜಧಾನಿ, ಯೂಸುಫ್ ಪೊಂಜಿಲ, ಮಜೀದ್ ಮೆಲ್ಕಾರ್, ಫೈನಾನ್ಸಿಯಲ್ ಅಧ್ಯಕ್ಷರಾಗಿ ಲತೀಫ್ ಫೈಝಿ ಸುಂಕದಕಟ್ಟೆ, ಕನ್ವೀನರಾಗಿ ಅಶ್ರಫ್ ಮರೋಡಿ, ಕೋಶಾಧಿಕಾರಿಯಾಗಿ ಯು.ಕೆ.ಮೋನು ಕಕ್ಕಿಂಜೆ, ನಿರ್ವಾಹಕ ಸಮಿತಿಯ ಅಧ್ಯಕ್ಷರಾಗಿ ಅಝೀಝ್ ಕಿಡ್ಸ್ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ಶರೀಫ್ ಕಲಾಯಿ, ಸಿರಾಜ್ ಚಿಲಿಂಬಿ ಅತಿಥಿ ಸ್ವೀಕಾರ ಸಮಿತಿಯ ಅಧ್ಯಕ್ಷರಾಗಿ ಬಶೀರ್ ದಾರಿಮಿ ನಾವೂರು, ಸಂಚಾಲಕರಾಗಿ ಅಬ್ದುಲ್ ರಹಿಮಾನ್ ಹಾಜಿ ಸಿಟಿಲ್ಯಾಂಡ್, ಸ್ವಯಂ ಸೇವಕರ ಸಮಿತಿಯ ಅಧ್ಯಕ್ಷರಾಗಿ ಲತೀಫ್ ಕರಾಯ, ಸಂಚಾಲಕರಾಗಿ ಲತೀಫ್ ಪಾಂಡವರಕಲ್ಲು, ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ನಿಯಾಝ್ ನಿಝಾಮಿ ಪರಪ್ಪು, ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟ್ಟು ಹಾಗೂ ಇತರೆ ವಿಭಾಗದ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತದಾರುಸ್ಸಲಾಂ ಸೆಂಟ್ರಲ್ ಕಮಿಟಿಯ ಜೊತೆ ಕಾರ್ಯದರ್ಶಿ ಹಮೀದ್ ಕಣ್ಣೂರು ಸ್ವಾಗತಿಸಿದರು. ಝಕರಿಯಾ ಫೈಝಿ ಮಾಡನ್ನೂರು ವಂದಿಸಿದರು.









