ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವೇಸ್ಟ್‌ ಟು ಎನರ್ಜಿ: ಮಂಗಳೂರಿನ ಕೆಮ್ರಾಲ್‌ನಲ್ಲಿ ಕಸದಿಂದ ಸಿದ್ಧವಾಗಲಿದೆ ಕೈಗಾರಿಕಾ ಇಂಧನ – News Kadaba

ವೇಸ್ಟ್‌ ಟು ಎನರ್ಜಿ: ಮಂಗಳೂರಿನ ಕೆಮ್ರಾಲ್‌ನಲ್ಲಿ ಕಸದಿಂದ ಸಿದ್ಧವಾಗಲಿದೆ ಕೈಗಾರಿಕಾ ಇಂಧನ

(ನ್ಯೂಸ್‌ ಕಡಬ) newskadaba.com,  ಜು.10 : ಕರ್ನಾಟಕದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯು ಮಂಗಳೂರಿನ ಸಮೀಪದ ಕೆಮ್ರಾಲ್‌ನಲ್ಲಿ ಮರುಬಳಕೆ ಮಾಡಲು ಸಾಧ್ಯವಾಗದ ಒಣ ತ್ಯಾಜ್ಯವನ್ನು ಇಂಧನ ಪೆಲ್ಲೆಟ್‌ಗಳಾಗಿ ಪರಿವರ್ತಿಸುವ ಘಟಕವನ್ನು ಸ್ಥಾಪಿಸಿದೆ.

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಪುಲ್ವರೈಸರ್ ಮತ್ತು ಪೆಲ್ಲೆಟೈಸರ್ ಯಂತ್ರೋಪಕರಣಗಳನ್ನು ಅಳವಡಿಸಿ ಈ ಘಟಕ ಸಿದ್ಧಪಡಿಸಲಾಗಿದೆ.ಈ ಹಿಂದೆ ಕಸವನ್ನು ಬೆಳಗಾವಿ, ಕಲಬುರಗಿಯ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲು ಪ್ರತಿ ಲಾರಿಗೆ ₹48,000 ವೆಚ್ಚವಾಗುತ್ತಿತ್ತು. ಈಗ ಈ ಸಾಗಣೆ ವೆಚ್ಚ ಸಂಪೂರ್ಣ ಉಳಿತಾಯವಾಗಲಿದೆ.

ಪುಣೆ ಮೂಲದ ಕಂಪನಿಯು ಪ್ರತಿ ಕೆ.ಜಿಗೆ ₹5 ದರದಲ್ಲಿ ಈ ಪೆಲ್ಲೆಟ್‌ಗಳನ್ನು ಮರುಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ.ಪ್ರಾಯೋಗಿಕ ಹಂತದಲ್ಲಿರುವ ಈ ಘಟಕವು ದಿನಕ್ಕೆ 2 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ತಿಂಗಳಿಗೆ 50 ಟನ್ ಪೆಲ್ಲೆಟ್ ಉತ್ಪಾದಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯ ‘ಕೊರ್ದಬ್ಬು ಸಂಜೀವಿನಿ ಒಕ್ಕೂಟ’ ಇದನ್ನು ನಿರ್ವಹಿಸುತ್ತಿದ್ದು, ಐವರಿಗೆ ಉದ್ಯೋಗ ನೀಡಿದೆ.

 

 

Scroll to Top