ಬಾಲನ್ಯಾಯ ಕಾಯ್ದೆ ಮಂಡಳಿ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ಸಾಹಿರಾ ಝುಬೇರ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 13. ಪುತ್ತೂರು ಬಾಲನ್ಯಾಯ ಕಾಯ್ದೆ ಮಂಡಳಿ ಇದರ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ನೋಟರಿ ಸಾಯಿರಾ ಝುಬೇರ್‌ರವರು ನೇಮಕಗೊಂಡಿದ್ದಾರೆ.

ಪುತ್ತೂರು ದರ್ಬೆ ನಿವಾಸಿಯಾಗಿರುವ ಸಾಯಿರಾ ಝುಬೇರ್‌ ಪ್ರಸ್ತುತ ಹೈಕೋರ್ಟ್ ನ ವಕೀಲೆಯಾಗಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯ ಪದಾಧಿಕಾರಿಯಾಗಿದ್ದ ಇವರು, ಪ್ರಸ್ತುತ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ದರ್ಬೆ ನಿವಾಸಿ, ಪ್ರಕಾಶ್ ಪೂಟ್ ವೇರ್ ಮಾಲಕರಾಗಿದ್ದ ಅಬ್ದುಲ್ ರೆಹಮಾನ್ ಅಪ್ಸಾ ರಹೀಮ್ ದಂಪತಿಯ ಪುತ್ರಿಯಾಗಿರುವ ಸಾಹಿರಾ ಝುಬೇರ್‌ರವರು ಕಿಲಾಬ್ ಜುಬೈರ್‌ರವರ ಪತ್ನಿ . ಇವರ ಪುತ್ರ ಅಬ್ದುಲ್ ರಹೀಮ್ ನಿಹಾಲ್‌ರವರು ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!
Scroll to Top