ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಿಳಿನೆಲೆ ಒಕ್ಕೂಟದಿಂದ ನೆರವು

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ಕಳೆದ ಎರಡು ವರ್ಷದಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ತನ್ನ ಎರಡೂ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಕಾಲುಗಳೆರಡು ಗ್ರ್ಶಾಂಗ್ರಿಂಗ್ ಆಗಿ ನಡೆದಾಡಲೂ ಸಾಧ್ಶವಾಗದ ಕಡಬ ತಾಲೂಕು ಬಿಳಿನೆಲೆ ನಾಗೇಶ್ ಕುಟುಂಬಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಒಕ್ಕೂಟದ ಸದಸ್ಶರುಗಳು ಒಟ್ಟುಗೂಡಿಸಿದ 10,050 ರೂ. ಮೊತ್ತದ ಧನ ಸಹಾಯವನ್ನು ಕುಟುಂಬದ ಸದಸ್ಶರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು, ಬಿಳಿನೆಲೆ ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಒಕ್ಕೂಟದ ಪದಾಧಿಕಾರಿಗಳಾದ ಲಕ್ಷ್ಮಣ ಎಸ್, ವಾಸುದೇವ ಒಗ್ಗು, ಲಕ್ಷ್ಮಣ ಆಚಾರ್ಯ, ಬಿಳಿನೆಲೆ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಸತೀಶ್.ಎ ಉಪಸ್ಥಿತರಿದ್ದರು.

Scroll to Top