ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ರಾಜ್ಯಾದ್ಯಂತ 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.  ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಅಬಕಾರಿ ಇಲಾಖೆ ಮೂರು ವರ್ಷದಲ್ಲಿ ರಾಜ್ಯಾದ್ಯಂತ 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ಸಂಗ್ರಹಿಸಿದೆ ಎನ್ನಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ. ಎಂಎಸ್‌ ಐಎಲ್ ಅಂಗಡಿಗಳಲ್ಲಿ ಆರನೇ ಒಂದು ಭಾಗದಷ್ಟು ಉಲ್ಲಂಘನೆಗಳು ಕಂಡುಬಂದಿವೆ, ಇದರಂತೆ 1,003 ಪ್ರಕರಣಗಳಲ್ಲಿ ಇಲಾಖೆಯು ರೂ 1.88 ಕೋಟಿ ದಂಡವನ್ನು ಸಂಗ್ರಹಿಸಿದೆ ಮತ್ತು 20 ಪರವಾನಗಿಗಳನ್ನು ಅಮಾನತುಗೊಳಿಸಿದೆ ಎಂದು ವರದಿ ತಿಳಿದುಬಂದಿದೆ.

Also Read  ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಾಳೆ (ಮಾ.26) ಭಾರತ್ ಬಂದ್ ➤ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಕರೆ

 

error: Content is protected !!
Scroll to Top