(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮಂಗಳೂರಿನ ಸರ್ಕಾರಿ ಐಟಿಐ ಮಹಿಳಾ ಸಂಸ್ಥೆಯಲ್ಲಿ ತರಬೇತಿಗಾಗಿ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಕರ್ನಾಟಕದಲ್ಲಿ 5 ವರ್ಷ ವ್ಯಾಸಂಗ ಮಾಡಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅಗಸ್ಟ್ 31ರವರೆಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಸೀಟುಗಳ ವಿವರ–
ಎಲೆಕ್ಟ್ರಾನಿಕ್ ಮೆಕ್ಯಾನಿಕ್ ತರಬೇತಿ ಅವಧಿ 2 ವರ್ಷ, ಖಾಲಿ ಇರುವ ಸೀಟುಗಳು 18
ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ತರಬೇತಿ ಅವಧಿ ಎರಡು ವರ್ಷ, ಖಾಲಿ ಇರುವ ಸೀಟುಗಳು 10. ಎಲೆಕ್ಟ್ರಿಷಿಯನ್ – ತರಬೇತಿ ಅವಧಿ 2ವರ್ಷ ಖಾಲಿಯಿರುವ ಸೀಟುಗಳು 7.
ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್– ತರಬೇತಿ ಅವಧಿ 1 ವರ್ಷ, ಖಾಲಿ ಇರುವ ಸೀಟುಗಳು 37.
ಇಂಡಸ್ಟ್ರಿಯಲ್ ರೋಬೋಟಿಕ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ – ತರಬೇತಿಯ ಅವಧಿ ಒಂದು ವರ್ಷ, ಖಾಲಿ ಇರುವ ಸೀಟುಗಳು 20
ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 9880119147, 9448858417 ಸಂಪರ್ಕಿಸುವಂತೆ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.