ವಿದ್ಯಾರ್ಥಿಗಳ ಬ್ಯಾಡ್ಮಿಂಟನ್‌ ತಂಡಕ್ಕೆ ರಾಕೆಟ್ ಬಾಲ್ ವಿತರಣೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 21.  ಸರಕಾರಿ ಪ್ರೌಢಶಾಲೆ, ನಾಲ್ಯ ಪದವು ವಿದ್ಯಾರ್ಥಿಗಳ ಬಾಲ್‌ ಬ್ಯಾಡ್ಮಿಂಟನ್‌ ತಂಡಕ್ಕೆ ಸ್ಥಳೀಯ ದಾನಿಗಳ ನೆರವಿನಿಂದ ರ್‍ಯಾಕೆಟ್‌ ಮತ್ತು ಬಾಲ್‌ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.

ಸುಮಾರು 30ಸಾವಿರ ಮೌಲ್ಯದ ಬ್ಯಾಡ್ಮಿಂಟನ್‌ ರ್‍ಯಾಕೆಟ್‌ಗಳು ಹಾಗೂ ಬಾಲ್‌ಗಳನ್ನು ಶಿಕ್ಷಣಾಸ್ತಕರು ಹಾಗೂ ದಾನಿಗಳಾದ  ವಿದ್ಯಾದೀವಿಗೆ ಚಾರಿಟೇಬಲ್‌ ಟ್ರಸ್ಟ್‌  ಅಧ್ಯಕ್ಷಕರು ದೇವಾನಂದ, ಸಿವಿಲ್‌ ಕಂಟ್ರಾಕ್ಟರ್‌ ಅಸೋಸಿಯೇಶನ್‌ ಸದಸ್ಯರಾದ ನಾರಾಯಣ ದೇವಾಡಿಗ, ಭವಾನಿ ಶಂಕರ, ಲಕ್ಷ್ಮೀ ಪ್ರಸಾದ್‌ , ಕೇಶವ ಕೆ. ಹಾಗೂ ಚಂದನ್‌ ದಾಸ್‌ ಇವರ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Scroll to Top