(ನ್ಯೂಸ್ ಕಡಬ) newskadaba.com ಕಾಸರಗೋಡು, ಆ.03. ಮನೆಗೆ ನುಗ್ಗಿ ಕಳವುಗೈದ ಮರುದಿನವೇ ಆರೋಪಿ ಬಂಧನ ಕ್ಕೊಳಗಾದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಇಚ್ಲಂಗೋಡು ಪಚ್ಚಂಬಳದ ಮುರ್ಶಿದ್ (19) ಎಂದು ಗುರುತಿಸಲಾಗಿದೆ.

ಅಬ್ದುಲ್ ಮಜೀದ್ ರವರ ಮನೆಗೆ ನುಗ್ಗಿದ ಈತ 29,700 ರೂ.ಕಳವು ಗೈದಿದ್ದನು. ಎರಡು ಅಂತಸ್ತಿನ ಈ ಮನೆಯ ಟೆರೆಸ್ ನ ಬಾಗಿಲು ತೆರಳುವ ಬಾಗಿಲು ಮುರಿದು ಒಳನುಗ್ಗಿದ್ದು, ಕಪಾಟಿನಲ್ಲಿ ರಿಸಲಾಗಿದ್ದ ಹಣವನ್ನು ಕಳವುಗೈದು ಪರಾರಿ ಯಾಗಿದ್ದನು .ವಿಚಾರಣೆ ನಡೆಸಿದಾಗ ಮುರ್ಶಿದ್ ತಪ್ಪೊಪ್ಪಿ ಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ










