ಭೂಕುಸಿತದ ಮೊದಲು, ನಂತರದ satellite image ಬಿಡುಗಡೆ ಮಾಡಿದ ISRO

(ನ್ಯೂಸ್ ಕಡಬ) newskadaba.com ನವದೆಹಲಿ, ಆ.02. ಕನಿಷ್ಠ 250ಕ್ಕೂ ಅಧಿಕ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.


ವಯನಾಡ್‌ ಭೂಕುಸಿತದ ಮೊದಲು ಮತ್ತು ನಂತರದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದ್ದು, ಉಪಗ್ರಹ ಚಿತ್ರಗಳ ಪ್ರಕಾರ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದ್ದು, ಹೀಗಾಗಿ ಇಷ್ಟೂ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಇಸ್ರೋ ಅಭಿಪ್ರಾಯಪಟ್ಟಿದೆ.

error: Content is protected !!
Scroll to Top