ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಬಂಧನ



(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.11. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ರನ್ನು ಬೆಂಗಳೂರು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.







ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಕೊಲೆ‌ ನಡೆದಿತ್ತು. ರೇಣುಕಾ ಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ‌ ಮೆಸೇಜ್‌ ಹಾಗೂ ಫೊಟೊ ಕಳುಹಿಸಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಶರಣಾಗಿದ್ದರೆನ್ನಲಾಗಿದೆ. ತೀವ್ರ ತನಿಖೆ ನಡೆಸಿದ ಪೊಲೀಸರು ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಿದ್ದು, ದರ್ಶನ್ ಸೂಚನೆಯ ಮೇರೆಗೆ ಕಾಮಾಕ್ಷಿ ಪಾಳ್ಯದ ಶೆಡ್ ವೊಂದರಲ್ಲಿ ಕೊಲೆ‌ ನಡೆಸಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ತನ್ನ ತೋಟದ ಮನೆಯಿಂದ ದರ್ಶನ್ ರನ್ನು ಬಂಧಿಸಲಾಗಿದೆ.






error: Content is protected !!
Scroll to Top