ಆನ್ ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 14. ಟೆಲಿಗ್ರಾಮ್ ಮೂಲಕ ಡಾಟಾ ರೇಡ್‌ ಎಂಬ ಕಂಪನಿಯಿಂದ ಬಂದ ಲಿಂಕ್‌ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಂಗ್ ಮಾಡುವ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆಯಾದ ಘಟನೆ ನಡೆದಿರುವ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಡಾಟ ರೇಡ್‌ ಎಂಬ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೋರ್ವ ತಾನು ಕೆಲಸ ನಿರ್ವಹಿಸುವ ವೇಳೆ 900 ರೂ. ಅನ್ನು ಅವರ ಖಾತೆಗೆ ವರ್ಗಾಯಿಸಿರುತ್ತಾರೆ. ಬಳಿಕ ಫೆಬ್ರವರಿ 8 ರಿಂದ ಫೆಬ್ರವರಿ 12 ರ ಅವಧಿಯಲ್ಲಿ ವಿವಿಧ ಖಾತೆಗಳಿಗೆ ತನ್ನ ಖಾತೆಯಿಂದ ಆನ್ ಲೈನ್ ಮೂಲಕ ಒಟ್ಟು 6,95,148 ರೂಪಾಯಿ ವರ್ಗಾವಣೆ ಮಾಡಿಕೊಂಡಿರುತ್ತಾನೆ. ಆತ ವರ್ಗಾವಣೆ ಮಾಡಿಕೊಂಡ ಹಣವನ್ನು ಮರುಪಾವತಿಸದೆ ಆನ್‌ ಲೈನ್‌ ಮೂಲಕ ವಂಚಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419,420, 66(ಡಿ) ಮತ್ತು ಐಟಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Also Read  ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ

error: Content is protected !!
Scroll to Top