ಮೀನುಗಾರಿಕೆಯ ವೇಳೆ ಬೋಟಿನಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಲ್ಪೆ, ಫೆ. 13. ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬೋಟಿನಲ್ಲಿದ್ದ ಮೀನುಗಾರರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಲ್ಪೆ ಸಮೀಪ ನಡೆದಿದೆ.

ಮೃತರನ್ನು ಬೋಟಿನ ಕಲಾಸಿ ಮ್ಯಾಥೀವ್(52) ಎಂದು ಗುರುತಿಲಾಗಿದೆ. ಇವರು ಯಮುನಾ ಮಾಲಕತ್ವದ ಶ್ರೀಮಹಾಲಕ್ಷ್ಮೀ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಫೆ. 10ರಂದು ಮೀನುಗಾರಿಕೆಗಾಗಿ ತೆರಳಿದ್ದು, 27 ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಮ್ಯಾಥೀವ್ ಅವರು ಬೋಟಿನಲ್ಲಿಯೇ ಕುಸಿದು ಬಿದ್ದರು ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರು ಮಲ್ಪೆ ಬಂದರಿಗೆ ಬಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group