ಎಂಡಿಎಂಎ ಸಾಗಾಟ- ಓರ್ವನ ಬಂಧನ



(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 12. ಮಾದಕ ವಸ್ತು ಎಂಡಿಎಂಎನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಯುವಕನೋರ್ವನನ್ನು ಮಂಗಳೂರು ಆ್ಯಂಟಿ ಡ್ರಗ್‌ ಟೀಮ್‌ನ ತಂಡವು ಬಂಧಿಸಿದ ಘಟನೆ ವರದಿಯಾಗಿದೆ.







ಬಂಧಿತ ಆರೋಪಿಯನ್ನು ಕೋಟೆಕಾರು ಕೆ.ಸಿ. ರೋಡ್‌ ನಿವಾಸಿ ಆಸೀಫ್‌ (27)ಎಂದು ಗುರುತಿಸಲಾಗಿದೆ. ಆರೋಪಿಯಿಂದ 4.41 ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್‌ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






error: Content is protected !!
Scroll to Top