ಕೋಳಿ ಫಾರ್ಮ್ ನಲ್ಲಿ ಮಲಗಿದ್ದ ನಾಲ್ವರು ಶವವಾಗಿ ಪತ್ತೆ..!

(ನ್ಯೂಸ್ ಕಡಬ) newskadaba.com ದೊಡ್ಡಬಳ್ಳಾಪುರ, ಸೆ. 17. ಒಂದೇ ಕುಟುಂಬದ ನಾಲ್ವರು ಕೋಳಿ ಫಾರ್ಮ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರದ ಹೊಲೆಯರಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ನೇಪಾಳದ ಮೂಲದ ಕಾಲೆ ಸರೆರಾ, ಉಷಾ, ಲಕ್ಷ್ಮಿಹಾಗೂ ಪೊಲ್‌ ಸರೇರಾ ಎಂದು ತಿಳಿದು ಬಂದಿದೆ. ಕೆಲದ ದಿನಗಳ ಹಿಂದೆಯಷ್ಟೇ ಇವರು ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸ್‌ ಠಾಣಾ ಸಿಬ್ಬಂದಿ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Scroll to Top