ವಿದ್ಯಾರ್ಥಿಗಳಿಬ್ಬರ ಅಪಹರಿಸಿ ಹಲ್ಲೆ ಪ್ರಕರಣ – 7 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಆರೋಪದಡಿ 7 ಮಂದಿಯನ್ನು ಬಂದರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.


ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19), ಬಜಾಲ್ ನಂತೂರಿನ ಯುಪಿ ತನ್ವೀರ್ (20), ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ (37) ಎಂದು ಗುರುತಿಸಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳಾದ ಶಮೀರ್ ಮತ್ತು ಇಬ್ರಾಹೀಂ ಫಾಹಿಮ್ ಎಂಬವರನ್ನು ಆ. 23ರಂದು ಅಪಹರಿಸಿ ಕಾರಿನಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಫಾಹೀಮ್ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Scroll to Top